Home ನಮ್ಮ ಜಿಲ್ಲೆ ಧಾರವಾಡ ಪತ್ರಕರ್ತ ಸುರೇಂದ್ರ ದಾನಿ ಜನ್ಮಶತಮಾನೋತ್ಸವ

ಪತ್ರಕರ್ತ ಸುರೇಂದ್ರ ದಾನಿ ಜನ್ಮಶತಮಾನೋತ್ಸವ

0
8

ಹುಬ್ಬಳ್ಳಿ: `ಸಂಯುಕ್ತ ಕರ್ನಾಟಕ’ ಪತ್ರಿಕೆಯ ನಿವೃತ್ತ ಸಂಪಾದಕ ಹಾಗೂ ಟಿಎಸ್‌ಆರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ದಿವಂಗತ ಸುರೇಂದ್ರ ದಾನಿ ಅವರ ಜನ್ಮಶತಮಾನೋತ್ಸವ ಸಮಾರಂಭ ಶನಿವಾರ (ಡಿ. 27) ನಡೆಯಲಿದೆ.

ಹುಬ್ಬಳ್ಳಿ ದೇಶಪಾಂಡೆನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಬೆಳಿಗ್ಗೆ 9.30ರಿಂದ ನಡೆಯುವ ಸಮಾರಂಭ ಗೀತಾ ಆಲೂರ್ ಹಾಗೂ ಸುಜ್ಞಾನ ದಾನಿ ಅವರ ಸಂಗೀತ ಕಾರ್ಯಕ್ರಮದೊಂದಿಗೆ ಆರಂಭವಾಗಲಿದೆ.

ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ, ರಾಜ್ಯದ ಕಾನೂನು ಸಚಿವ ಎಚ್.ಕೆ. ಪಾಟೀಲ, ಮಾಜಿ ಸಂಸದ ಐ.ಜಿ. ಸನದಿ, ಸಂಸದ ಜಗದೀಶ ಶೆಟ್ಟರ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ್ ಬೆಲ್ಲದ್, ಸಂಯುಕ್ತ ಕರ್ನಾಟಕ ಪತ್ರಿಕೆಯ ಟ್ರಸ್ಟಿಗಳಾದ ಕೇಶವ ದೇಸಾಯಿ ಮತ್ತು ಡಿ.ಆರ್. ಪಾಟೀಲ್, ಗೋವಿಂದ ಜೋಶಿ, ಬಾಬು ಕೃಷ್ಣಮೂರ್ತಿ, ನಾರಾಯಣ ಘಳಗಿ, ಡಾ.ಜೆ.ಎಂ. ಚಂದುನವರ ಉದ್ಘಾಟನಾ ಕಾರ್ಯಕ್ರಮದ ಅತಿಥಿಗಳಾಗಿದ್ದಾರೆ. ಇದೇ ಸಂದರ್ಭದಲ್ಲಿ ದಾನಿಯವರ ಕುರಿತ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಬೆನ್ನು ಚಪ್ಪರಿಸುತ್ತಿದ್ದ ಶ್ರೇಷ್ಠ ಪತ್ರಕರ್ತ ಸುರೇಂದ್ರ ದಾನಿ

ಉದ್ಘಾಟನೆಯ ನಂತರ, ದಾನಿಯವರ ಪ್ರವೃತ್ತಿಗಳು ಹಾಗೂ ದಾನಿಯವರ ಗಮಕ ಪ್ರೀತಿ ಎಂಬ ವಿಚಾರ ಗೋಷ್ಠಿಗಳು ನಡೆಯಲಿದೆ. ಜೊತೆಗೆ, ಸುರೇಂದ್ರ ದಾನಿಯವರ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ.

ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಹಿರಿಯ ಪತ್ರಕರ್ತರಾದ ವೆಂಕಟನಾರಾಯಣ, ಮನೋಜ ಪಾಟೀಲ, ಸಂಯುಕ್ತ ಕರ್ನಾಟಕದ ಸಿಇಓ ಮೋಹನ ಹೆಗಡೆ, ಮಲ್ಲಿಕಾರ್ಜುನ ಸಿದ್ದಣ್ಣನವರ, ಬಂಡು ಕುಲಕರ್ಣಿ, ಪ್ರಕಾಶ್ ಶೇಟ್, ವಿಶ್ವನಾಥ ಕುಲಕರ್ಣಿ, ಅರುಣಕುಮರ್ ಹಬ್ಬು, ವಕೀಲ ಸುಧೀಂದ್ರ ದೇಶಪಾಂಡೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಹುಬ್ಬಳ್ಳಿ ಅದ್ವೈತ ವಿದ್ಯಾಶ್ರಮದ ಶ್ರೀ ಪ್ರಣವಾನಂದ ತೀರ್ಥರು ಸಾನ್ನಿಧ್ಯ ವಹಿಸಲಿದ್ದು, ಜನ್ಮಶತಮಾನೋತ್ಸವ ಸಮಿತಿ ಅಧ್ಯಕ್ಷರೂ ಆಗಿರುವ ಡಾ. ಎಂ.ಎಂ. ಜೋಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.