Home Advertisement
Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿ ಹುಡುಗಿ ಕೃಪಾಗೆ ಯುಪಿಎಸ್‌ಸ್ಸಿಯಲ್ಲಿ 190ನೇ ರ‍್ಯಾಂಕ್

ಹುಬ್ಬಳ್ಳಿ ಹುಡುಗಿ ಕೃಪಾಗೆ ಯುಪಿಎಸ್‌ಸ್ಸಿಯಲ್ಲಿ 190ನೇ ರ‍್ಯಾಂಕ್

0
92

ಹುಬ್ಬಳ್ಳಿ: ಛಲ ಬಿಡದೇ ಕಂಡ ಕನಸ್ಸಿನತ್ತ ಬೆನ್ನತ್ತಿದ್ದರೆ ಎಂತಹ ಸಾಧನೆಯೂ ಕೂಡ ಹೂವಿನಂತೆ ಹಗುರವಾಗುತ್ತದೆ ಎನ್ನುವುದಕ್ಕೆ ಹುಬ್ಬಳ್ಳಿಯ ರಾಜನಗರದ ಕೃಪಾ ಜೈನ್ ಸಾಕ್ಷಿಯಾಗಿದ್ದು, ಯುಪಿಎಸ್‌ಸ್ಸಿ ಪರೀಕ್ಷೆಯಲ್ಲಿ 5ನೇ ಬಾರಿಗೆ ಬರೆದು 190ನೇ ರ‍್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿ ಮಾದರಿಯಾಗಿದ್ದಾರೆ.

ಬಾಲ್ಯದಲ್ಲಿ ಕಂಡ ಕನಸ್ಸಿಗೆ ನಿತ್ಯ 12-14 ತಾಸು ಶ್ರಮವಹಿಸಿ ಓದಿದ ಪರಿಣಾಮ ಇಂದು ಯುಪಿಎಸ್‌ಸ್ಸಿ ಪರೀಕ್ಷೆಯಲ್ಲಿ 190ನೇ ರ‍್ಯಾಂಕ್ ಪಡೆಯುವ ಮೂಲಕ ಸಾಧಕಿಯಾಗಿ ಹೊರಹೊಮ್ಮಿದ್ದು, ಹುಬ್ಬಳ್ಳಿಯ ಅವರ ಮನೆಯಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.

ಅಭಯ ಪಾರ್ಲೆಚಾ ಹಾಗೂ ತಾಯಿ ಇಂದ್ರಾ ಅವರ ಮಗಳಾದ ಕೃಪಾ ಜೈನ್ ಓದಿನಲ್ಲಿ ಪ್ರತಿಭಾವಂತಳು. ಆದರೆ, ಯುಪಿಎಸ್‌ಸ್ಸಿ ಪರೀಕ್ಷೆ ಎದುರಿಸಿದ ಮೊದಲ ಪ್ರಯತ್ನ ನಿರಾಸೆ ಮೂಡಿಸಿತ್ತು. ಇದಕ್ಕೆ ಎದೆಗುಂದದೇ ಎರಡನೇ ಪ್ರಯತ್ನದಲ್ಲಿ ಐಆರ್‌ಎಂಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ತಯಾರಿ ನಡೆಸಿದರೂ ಫಲ ಕೊಟ್ಟಿರಲಿಲ್ಲ.

‌ಇದನ್ನೂ ಓದಿ: ಮೊದಲ ಪ್ರಯತ್ನದಲ್ಲಿಯೇ 400, ಮೂರನೇ ಬಾರಿ ದೇಶಕ್ಕೆ ಫಸ್ಟ್‌..!

4ನೇ ಪ್ರಯತ್ನದಲ್ಲಿ ಯುಪಿಎಸ್‌ಸ್ಸಿಯಲ್ಲಿ 440ನೇ ರ‍್ಯಾಂಕ್ ಹಾಗೂ ಐಎಫ್‌ಎಸ್‌ನಲ್ಲಿ 18ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದರು. ಈಗಾಗಲೇ ಡೆಹ್ರಾಡೂನ್‌ನಲ್ಲಿ ಐಎಫ್‌ಎಸ್ ತರಬೇತಿ ಪಡೆಯುತ್ತಿದ್ದಾರೆ.

2025ರಲ್ಲಿ 5ನೇ ಬಾರಿ ಪರೀಕ್ಷೆ ಬರೆದು ಯುಪಿಎಸ್‌ಸ್ಸಿ 190ನೇ ರ‍್ಯಾಂಕ್ ಪಡೆದಿದ್ದು, ಐಪಿಎಸ್ ಆಗಿ ಸಾಧನೆ ಮಾಡಿದ್ದಾರೆ. ಇನ್ನೂ ಕೃಪಾ ಅವರ ಭಾವಿ ಪತಿ ಅಭಿ ಜೈನ್ ಕಳೆದ ವರ್ಷ ಯುಪಿಎಸ್‌ಸ್ಸಿಯಲ್ಲಿ 34ನೇ ರ‍್ಯಾಂಕ್ ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾಗಿ ತರಬೇತಿ ಪಡೆಯುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿಯೇ ಶಿಕ್ಷಣ: ಡಿ.ಕೆ. ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಣ ಮುಗಿಸಿದ್ದು, ವಿದ್ಯಾನಗರದ ಪ್ರೇರಣಾ ಕಾಲೇಜಿನಲ್ಲಿ ಪಿಯುಸಿ ಸೈನ್ಸ್‌ನಲ್ಲಿ ರಾಜ್ಯಕ್ಕೆ 8ನೇ ರ‍್ಯಾಂಕ್, ಧಾರವಾಡ ಜಿಲ್ಲೆಗೆ 2ನೇ ರ‍್ಯಾಂಕ್ ಪಡೆದಿದ್ದಳು. ನಂತರ ಬೆಂಗಳೂರಿನ ಆರ್.ವಿ. ಇಂಜನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದಾರೆ.