ನಿವೃತ್ತಿ ಚಾಲಕನಿಗೆ ಬೀಳ್ಕೊಡುಗೆ, ಕಾರಿನಲ್ಲಿ ಮನೆಗೆ ಬಿಟ್ಟುಬಂದ ಕುಲಸಚಿವರು

1
111

ಧಾರವಾಡ: ಇಷ್ಟು ವರ್ಷಗಳ ವರೆಗೆ ಕುಲಸಚಿವರನ್ನು ಸುಭದ್ರವಾಗಿ ಕರೆದುಕೊಂಡು ಹೋಗಿ-ಬಂದು ಮಾಡುತ್ತಿದ್ದ ಕಾರು ಚಾಲಕ ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಆತನನ್ನು ಸನ್ಮಾನಿಸಿ ಸ್ವತಃ ಕುಲಸಚಿವರೇ ಡ್ರೈವರ್ ಆಗಿ ಚಾಲಕನನ್ನು ಮನೆ ವರೆಗೆ ತಲುಪಿಸಿದ ಹೃದಯಸ್ಪರ್ಶಿ ಘಟನೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದಿದೆ.

ಹೌದು… ಸುಮಾರು 22 ವರ್ಷಗಳಿಂದ ಮೌಲ್ಯಮಾಪನ ಕುಲಸಚಿವರ ಕಾರಿನ ಚಾಲಕನಾಗಿ ಸೇವೆ ಸಲ್ಲಿಸಿದ ರುದ್ರಪ್ಪ ಅಜ್ಜನ್ನವರ ಶನಿವಾರ ಸೇವಾ ನಿವೃತ್ತಿ ಹೊಂದಿದರು. ಈ ಹಿನ್ನೆಲೆಯಲ್ಲಿ ಪರೀಕ್ಷಾಂಗ ವಿಭಾಗದ ಎಲ್ಲ ಸಿಬ್ಬಂದಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಕುಲಸಚಿವರನ್ನು ಯಾವ ಕಾರಿನಲ್ಲಿ ಕರೆದುಕೊಂಡು ರುದ್ರಪ್ಪ ಕರೆದುಕೊಂಡು ಬರುತ್ತಿದ್ದರೋ ಅದೇ ಕಾರಿನಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ವೈ. ಮಟ್ಟಿಹಾಳ ಅವರು ಸ್ವತಃ ಚಾಲಕರಾಗಿ ಕುಳಿತು ಹಿಂಬದಿಯಲ್ಲಿ ರುದ್ರಪ್ಪ ಅವರನ್ನು ಕೂಡಿಸಿಕೊಂಡು ಬಸವ ನಗರದ ಮನೆ ವರೆಗೆ ಬಿಟ್ಟು ಬಂದ ಆತ್ಮೀಯ ಘಟನೆ ನಡೆದಿದೆ.

ನಾನು ಸುಮಾರು 22 ವರ್ಷಗಳಿಂದ ಕಾರು ಚಾಲಕನಾಗಿ ಕೆಲಸ ಮಾಡಿದ್ದೇನೆ. ಈ ಹಿಂದೆ ಕುಲಪತಿಗಳಾಗಿದ್ದ ಪ್ರೊ. ಖಾಜಾಪೀರ, ಪ್ರೊ. ಎಸ್.ಕೆ. ಸೈದಾಪೂರ ಸೇರಿದಂತೆ ಇತರರ ಕಾರು ಚಾಲಕನಾಗಿ ಸೇವೆ ಸಲ್ಲಿಸಿದ್ದೇನೆ. ಇತ್ತೀಚೆಗೆ ಮೌಲ್ಯಮಾಪನ ಕುಲಸಚಿವರ ಕಾರು ಚಾಲಕನಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದೆ. ಕುಲಸಚಿವರೇ ನನ್ನನ್ನು ಮನೆ ವರೆಗೆ ಕಾರಿನಲ್ಲಿ ಬಿಟ್ಟಿದ್ದು ಸಂತಸ ಮೂಡಿಸಿತು ಎಂದು ರುದ್ರಪ್ಪ ಅಭಿಪ್ರಾಯ ಹಂಚಿಕೊಂಡರು.

Previous articleಮಠಾಧೀಶರ ಕೆಲಸ ಧರ್ಮ ರಕ್ಷಣೆ ಮಾಡುವುದು, ರಾಜಕೀಯ ಏನಕ್ಕೆ?
Next articleಮೋದಿ `ಮನ್ ಕಿ ಬಾತ್’ನಲ್ಲಿ ಕಾರವಾರದ ಯುದ್ಧನೌಕೆಗಳ ಪ್ರಸ್ತಾಪ

1 COMMENT

  1. Just wanted to share my experience with 4jl. It’s okay, nothing groundbreaking, but it gets the job done. Might be worth a try if you’re bored. 4jl

LEAVE A REPLY

Please enter your comment!
Please enter your name here