ಧಾರವಾಡ: ಶಿರಡಿನಗರದಲ್ಲಿ ಹುಚ್ಚು ನಾಯಿಯೊಂದು ಮಕ್ಕಳು ಸೇರಿದಂತೆ 9 ಜನರಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಸಂಭವಿಸಿದೆ.
ಶಾಲೆಯಿಂದ ಮರಳುತ್ತಿದ್ದ ರಿಶಿಕ್ ಎಂಬ ಬಾಲಕನ ಮೇಲೆ ದಾಳಿ ನಡೆಸಿದ ನಾಯಿ ಬಾಲಕನ ಕಿವಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಇದೇ ರೀತಿ ರಸ್ತೆಯಲ್ಲಿ ಸಂಚರಿಸುತ್ತಿದ್ದವರನ್ನು ನಾಯಿ ಕಚ್ಚಲು ಆರಂಭಿಸಿದ್ದು, 9 ಜನರಿಗೆ ನಾಯಿ ಕಚ್ಚಿ ಗಾಯಗೊಳಿಸಿದೆ.
ಹುಚ್ಚು ನಾಯಿ ಬಂದಿರುವ ವಿಷಯ ತಿಳಿದ ಬಡಾವಣೆ ಜನರು ಆಕ್ರೋಶದಿಂದ ನಾಯಿಯನ್ನು ಬೆನ್ನಟ್ಟಿ ಕಲ್ಲು ಹಾಗೂ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳಲ್ಲಿ ಗಂಗವ್ವ ಉಪ್ಪಾರ, ಲಕ್ಷ್ಮೀ ಮಾದರ, ಶೀತಲ್ ಕಬಾಡಿ ಸೇರಿದ್ದಾರೆ.























