ಹುಬ್ಬಳ್ಳಿ: ಡಾ. ಪುನೀತರಾಜಕುಮಾರ ಅಭಿಮಾನಿಯಾಗಿದ್ದ ಹುಬ್ಬಳ್ಳಿ ವೀರಾಪೂರ ಓಣಿ ನಿವಾಸಿ ಗೌರಮ್ಮ ಮಲ್ಲೇಶಪ್ಪ ಕಂಬಳಿ (94) ಬುಧವಾರ ನಿಧನರಾದರು.
ಅಪ್ಪಟ ಡಾ. ಪುನೀತರಾಜಕುಮಾರ ಅಭಿಮಾನಿಯಾಗಿದ್ದ ಗೌರಮ್ಮ ಅವರನ್ನು ಕೆಲವು ವರ್ಷಗಳ ಹಿಂದೆ ಹುಬ್ಬಳ್ಳಿಗೆ ಬಂದಿದ್ದ ಸಂದರ್ಭದಲ್ಲಿ ಖುದ್ದು ಪುನೀತರಾಜಕುಮಾರ ಅವರೇ ಗೌರಮ್ಮನವರ ಮನೆಗೆ ಭೇಟಿ ನೀಡಿ ಮಾತನಾಡಿದ್ದರು.
ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಗೌರಮ್ಮ ಅನಾರೋಗ್ಯದಿಂದ, ಡಿಸೆಂಬರ್ 31 ರಂದು ಸಂಜೆ ಕೊನೆಯುಸಿರೆಳೆದರು. ಮೃತ ಗೌರಮ್ಮ ಅವರಿಗೆ ಓರ್ವ ಪುತ್ರ ಹಾಗೂ ಪತ್ರಕರ್ತ ಮಹಾಂತೇಶ ಕಂಬಳಿ ಸೇರಿದಂತೆ ಮೊಮ್ಮಕ್ಕಳನ್ನು ಅಗಲಿದ್ದಾರೆ.









