ವಿನಯ್ ಕುಲಕರ್ಣಿಗೆ ಮತ್ತೆ ಶಾಕ್; ವಿಚಾರಣೆ 2026ಕ್ಕೆ ಮುಂದೂಡಿಕೆ

0
1

ಬೆಂಗಳೂರು: ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಆಘಾತವಾಗಿದೆ.

ಈ ಬಾರಿ ಜಾಮೀನು ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದ ವಿನಯ್ ಕುಲಕರ್ಣಿಯವರಿಗೆ ಮತ್ತೇ ನಿರಾಸೆಯಾಗಿದೆ. ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ವಿಚಾರಣೆಯನ್ನು ಮುಂದಿನ ವರ್ಷಕ್ಕೆ 2026ರ ಜನವರಿ 5ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಬೆನ್ನು ಚಪ್ಪರಿಸುತ್ತಿದ್ದ ಶ್ರೇಷ್ಠ ಪತ್ರಕರ್ತ ಸುರೇಂದ್ರ ದಾನಿ

ಪ್ರಕರಣದ ಹಿನ್ನೆಲೆ: 2016 ಜೂನ್ 15ರಂದು ಮುಂಜಾನೆ ಧಾರವಾಡದ ಸಪ್ತಾಪುರ ಬಾವಿ ಬಳಿಯಿರುವ ಜಿಮ್‌ ಬಳಿ ಯೋಗೀಶ್ ಗೌಡ ಹತ್ಯೆ ನಡೆದಿತ್ತು. ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ವಿಶೇಷ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಶಾಸಕ ವಿನಯ್ ಕುಲಕರ್ಣಿ ಇದೇ 2025ರ ಜೂನ್ 13ರಿಂದ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Previous articleಪತ್ರಕರ್ತ ಸುರೇಂದ್ರ ದಾನಿ ಜನ್ಮಶತಮಾನೋತ್ಸವ