Home Advertisement
Home ನಮ್ಮ ಜಿಲ್ಲೆ ಧಾರವಾಡ ನಾಲ್ಕು ಜನರ ಜೀವ ಉಳಿಸಿದ ಯುವಕ

ನಾಲ್ಕು ಜನರ ಜೀವ ಉಳಿಸಿದ ಯುವಕ

0
162
ಜೀವ ಉಳಿಸಿದ ಯುವಕ

ಬೆಳಗಾವಿ: ಧಾರವಾಡದ ಎಸ್‌ಡಿಎಂ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಮೆದಳು ನಿಷ್ಕ್ರಿಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ 27 ವರ್ಷದ ಯುವಕ ತನ್ನ ಅಂಗಾಂಗ ದಾನ ಮಾಡಿ 4 ಜನರ ಜೀವ ಉಳಿಸಿ, ಇಬ್ಬರು ಅಂಧರಿಗೆ ಬೆಳಕಾಗಿದ್ದಾನೆ.
ಹೃದಯ ಹಾಗೂ ಕಿಡ್ನಿಯನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಕಸಿ ಮಾಡಲು ಗ್ರೀನ್ ಕಾರಿಡಾರ ಮೂಲಕ ಧಾರವಾಡದಿಂದ ರಸ್ತೆ ಮೂಲಕ ತೆಗೆದುಕೊಂಡು ಬರಲಾಯಿತು. ಒಂದು ಕಿಡ್ನಿಯನ್ನು ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಕಸಿ ಮಾಡಿದರೆ, ಲಿವರ್ ಅನ್ನು ಬೆಂಗಳೂರಿನ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಯಿತು. ಪೊಲೀಸರು ಸಂಪೂರ್ಣವಾಗಿ ಜೀರೋ ಟ್ರಾಫಿಕ್ ಮಾಡಿ ಅಂಗಾಂಗ ಸ್ಥಳಾಂತರಿಸಲು ಅವಕಾಶ ಕಲ್ಪಿಸಿಕೊಟ್ಟರು.

Previous articleಗಣೇಶ ಹಬ್ಬ ಒಂದು ಧರ್ಮಕ್ಕೆ ಸೀಮಿತವಲ್ಲ
Next articleಕಾರು ಅಪಘಾತ, ಪಾರಾದ ಕಾಡಸಿದ್ದೇಶ್ವರ ಶ್ರೀಗಳು