Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಪ್ರೇಮಿಯೊಂದಿಗೆ ಪತ್ನಿ ಪರಾರಿ: ಪತಿ, ಸೋದರಮಾವ ಆತ್ಮಹತ್ಯೆ

ಪ್ರೇಮಿಯೊಂದಿಗೆ ಪತ್ನಿ ಪರಾರಿ: ಪತಿ, ಸೋದರಮಾವ ಆತ್ಮಹತ್ಯೆ

0
5

ದಾವಣಗೆರೆ: ನವವಿವಾಹಿತೆಯೊಬ್ಬಳು ಪ್ರೇಮಿಯೊಂದಿಗೆ ಪರಾರಿಯಾಗಿದ್ದರಿಂದ ಮನನೊಂದು ಪತಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದು, ಪ್ರಿಯಕರ ಪ್ರಾಣ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಆಕೆಯ ಸೋದರಮಾವ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.

ತಾಲೂಕಿನ ಗುಮ್ಮನೂರು ಗ್ರಾಮದ ಹರೀಶ್(30) ಹಾಗೂ ನಗರದ ಆನೆಕೊಂಡದ ನಿವಾಸಿ ರುದ್ರೇಶ್(36) ಆತ್ಮಹತ್ಯೆಗೆ ಶರಣಾದವರು.

ಕಳೆದ ಮೂರು ತಿಂಗಳ ಹಿಂದಷ್ಟೇ ತಾಲೂಕಿನ ಹುಲಿಕಟ್ಟೆ ಗ್ರಾಮದ ಯುವತಿ ಸರಸ್ವತಿ ಅವರೊಂದಿಗೆ ಹರೀಶ್ ಸಪ್ತಪದಿ ತುಳಿದಿದ್ದರು. ಆದರೆ, ಕಳೆದ ಜ. 23ರಂದು ಸರಸ್ವತಿ ಕಾಣೆಯಾಗಿದ್ದರಿಂದ ಗ್ರಾಮಾಂತರ ಠಾಣೆಯಲ್ಲಿ ಕಾಣೆಯಾಗಿರುವ ಪ್ರಕರಣ ದಾಖಲಿಸಿದ್ದರು. ಅನೇಕ ಕಡೆ ಹುಡುಕಾಟ ನಡೆಸಿದಾಗ ಜ. 25ರಂದು ಯುವತಿ ಪತ್ತೆಯಾಗಿದ್ದು, ಪತಿಯೊಂದಿಗೆ ತೆರಳದೆ ತನ್ನ ತವರಿಗೆ ಪೋಷಕರೊಂದಿಗೆ ಹೋಗಿದ್ದಳು.

ಇದನ್ನೂ ಓದಿ: ರಾಷ್ಟ್ರ ಧ್ವಜಕ್ಕೆ ಅಪಮಾನ: ಖಾಸಗಿ ಶಾಲೆಗೆ ನೋಟಿಸ್ ಜಾರಿ

ಇದರಿಂದ ಮನನೊಂದು ಹರೀಶ್ ಆತ್ಮಹತ್ಯೆಗೆ ಶರಣಾಗಿದ್ದು, ‘ಪತ್ನಿ ಸರಸ್ವತಿ ಕುಮಾರ್‌ನೊಂದಿಗೆ ಓಡಿ ಹೋಗಿದ್ದಾಳೆ. ಹೀಗಿದ್ದರೂ ನಾನೇ ಹಿಂಸೆ ನೀಡುತ್ತಿದ್ದೇನೆ ಎಂದು ಸುಳ್ಳು ಆರೋಪ ಮಾಡಿದ್ದು, ಪತ್ನಿ ಮತ್ತು ಆಕೆಯ ಸಂಬಂಧಿಕರು ಜೀವ ಬೆದರಿಕೆಯೊಡ್ಡಿದ್ದಾರೆ. ನನಗೆ ಮಾನ-ಮರ್ಯಾದೆ ಮುಖ್ಯ. ನನಗೆ ಕಿರುಕುಳ ನೀಡಿರುವ ಪತ್ನಿ, ಆಕೆಯ ಪೋಷಕರು ಮತ್ತು ಪ್ರಿಯಕರ ಹಾಗೂ ಚಿಕ್ಕಪ್ಪನಿಗೆ ಜೀವಾವಧಿ ಶಿಕ್ಷೆಯಾಗಲಿʼ ಎಂದು ಸಾವಿಗೂ ಮುನ್ನ ಹರೀಶ್ ಡೆತ್‌ನೋಟಲ್ಲಿ ಬರೆದಿಟ್ಟಿದ್ದಾರೆ.

ಇನ್ನೂ ಸರಸ್ವತಿ ಸೋದರಮಾವನ ಮನೆಯ ಮುಂದೆ ಹೋಗಿ ಕುಮಾರ್ ತಾವು ಪ್ರೀತಿಸಿದ್ದು ತಿಳಿದಿದ್ದರೂ ಆಕೆಯನ್ನು ಬೇರೆಯವರೊಂದಿಗೆ ವಿವಾಹ ಮಾಡಿದ್ದೀರಿ ಎಂದು ಆರೋಪಿಸಿ ಗಲಾಟೆ ಮಾಡಿದ್ದ. ಜೀವ ಬೆದರಿಕೆಯೊಡ್ಡಿದ್ದ ಇದರಿಂದ ಮನನೊಂದು ರುದ್ರೇಶ್ ಆತ್ಮಹತ್ಯೆ ಯತ್ನಿಸಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಈ ಕುರಿತು ಹರೀಶ್ ತಂದೆ ಗ್ರಾಮಾಂತರ ಠಾಣೆಯಲ್ಲಿ ಈ ಎಲ್ಲಾ ಆರೋಪಿಗಳ ವಿರುದ್ಧ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Previous articleಮೂವರು ವಿದ್ಯಾರ್ಥಿಗಳಿಗೆ ಕಾರು ಡಿಕ್ಕಿ, ಓರ್ವ ಸಾವು
Next articleಅಪ್ರಾಪ್ತೆ ಮೇಲೆ ಅತ್ಯಾಚಾರ: ಕಾಂಗ್ರೆಸ್‌ ಮುಖಂಡನ ಬಂಧನ