Home ನಮ್ಮ ಜಿಲ್ಲೆ ದಾವಣಗೆರೆ ಶಿವಶಂಕರಪ್ಪ ನಿಧನಕ್ಕೆ ಪತ್ರದ ಮೂಲಕ ಸೋನಿಯಾ ಗಾಂಧಿ ಸಂತಾಪ

ಶಿವಶಂಕರಪ್ಪ ನಿಧನಕ್ಕೆ ಪತ್ರದ ಮೂಲಕ ಸೋನಿಯಾ ಗಾಂಧಿ ಸಂತಾಪ

0
1

ದಾವಣಗೆರೆ: ಕೆಪಿಸಿಸಿ ಖಾಯಂ ಖಜಾಂಚಿ, ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಎಐಸಿಸಿ ನಾಯಕಿ ಸೋನಿಯಾ ಗಾಂಧಿ ತೀವ್ರ ಸಂತಾಪ ಸೂಚಿಸಿದ್ದು, ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಪತ್ರ ಬರೆದು ಸಂತಾಪ ಸೂಚಿಸಿರುವ ಸೋನಿಯಾ, ಕರ್ನಾಟಕ ವಿಧಾನಸಭೆಯ ಹಾಲಿ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ನಾನು ತೀವ್ರ ದುಃಖ ವ್ಯಕ್ತಪಡಿಸುತ್ತೇನೆ. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಭಾರತೀಯ ಕಾಂಗ್ರೆಸ್‌ನ ಬದ್ಧ ಸದಸ್ಯರಾಗಿದ್ದ ಅವರು ಹಲವಾರು ಹುದ್ದೆಗಳಲ್ಲಿ ಬದ್ಧತೆಯಿಂದ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಅವರು ಕರ್ನಾಟಕ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾಗಿದ್ದರು ಮತ್ತು 1998 ರಿಂದ 1999 ರವರೆಗೆ (12ನೇ ಲೋಕಸಭೆ) ಲೋಕಸಭಾ ಸದಸ್ಯರಾಗಿದ್ದರು. ನಿಮ್ಮ ತಂದೆಯವರ ನಿಧನಕ್ಕೆ ನನ್ನ ಹೃತ್ಪೂರ್ವಕ ಸಂತಾಪ ಸೂಚಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಇದನ್ನೂ ಓದಿ: ಶಾಮನೂರು ಶಿವಶಂಕರಪ್ಪ ನಿಧನಕ್ಕೆ ರಾಹುಲ್ ಗಾಂಧಿ ಸಂತಾಪ

ಈ ಗಂಭೀರ ವೈಯಕ್ತಿಕ ನಷ್ಟದ ಸಮಯದಲ್ಲಿ ಸರ್ವಶಕ್ತನು ನಿಮಗೆ ಮತ್ತು ನಿಮ್ಮ ಎಲ್ಲಾ ಕುಟುಂಬ ಸದಸ್ಯರಿಗೆ ಶಕ್ತಿ ನೀಡಲಿ. ನಮ್ಮ ಪ್ರಾರ್ಥನೆಗಳು ನಿಮ್ಮೊಂದಿಗಿವೆ ಎಂದು ಬರೆದು ಧೈರ್ಯ ತುಂಬಿದ್ದಾರೆ.