Home ನಮ್ಮ ಜಿಲ್ಲೆ ದಾವಣಗೆರೆ ಸಿದ್ದರಾಮೋತ್ಸವಕ್ಕೆ ಜಾಗೆಕೊಟ್ಟಿದ್ದು ಶಾಮನೂರು

ಸಿದ್ದರಾಮೋತ್ಸವಕ್ಕೆ ಜಾಗೆಕೊಟ್ಟಿದ್ದು ಶಾಮನೂರು

0
16

ಬೆಳಗಾವಿ: ನಾನು ಆಚರಿಸಿದ ಏಕೈಕ ಹುಟ್ಟುಹಬ್ಬ, ನನ್ನ 75ನೇ ವರ್ಷ ನಡೆದಿತ್ತು. ಅದಕ್ಕೆ ದಾವಣಗೆರೆಯಲ್ಲಿ ಜಾಗಕೊಟ್ಟು ಆತಿಥ್ಯದಲ್ಲಿ ಸಿಂಹಪಾಲು ವಹಿಸಿದ್ದವರು ಶಾಮನೂರು ಶಿವಶಂಕರಪ್ಪ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ನೆನಪು ಮಾಡಿಕೊಂಡರು.

2022ರಲ್ಲಿ ನಡೆದಿದ್ದ ಈ ಆಚರಣೆಯನ್ನು ಮುಖ್ಯಮಂತ್ರಿಗಳ ಅಭಿಮಾನಿಗಳು `ಸಿದ್ಧರಾಮೋತ್ಸವ’ ಎಂದು ಕರೆದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಆ ದಿನ ಅಕ್ಷರಶಃ ಲಕ್ಷಾಂತರ ಜನ ದಾವಣಗೆರೆಗೆ ಆಗಮಿಸಿದ್ದರಿಂದ ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂಟು ತಾಸಿಗೂ ಅಧಿಕ ಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು.

ಇದನ್ನೂ ಓದಿ: ನಮ್ಮ ತಂದೆ ಶಾಮನೂರು ಕೊಡುಗೆ ಅಪಾರ: ಸಚಿವ ಮಲ್ಲಿಕಾರ್ಜುನ

ಅಲ್ಲಿ ಸೇರಿದ್ದ ಜನತೆಯೇ 2023ರ ಚುನಾವಣೆ ಫಲಿತಾಂಶದ ದಿಕ್ಸೂಚಿ ಎಂದು ಶಾಮನೂರು ಶಿವಶಂಕರಪ್ಪ ಆ ಸಂದರ್ಭದಲ್ಲಿ ಹೇಳಿದ್ದರು. ಅದರಂತೆಯೇ ಆಗಿ, 2023ರಲ್ಲಿ ಸಿದ್ದರಾಮಯ್ಯ ಸರ್ಕಾರ ಬಂತು.

ಇದನ್ನೆಲ್ಲ ನೆನಪು ಮಾಡಿಕೊಂಡ ಮುಖ್ಯಮಂತ್ರಿಗಳು `5ನೇ ತರಗತಿಗೆ ಸೇರಿಸಿಕೊಳ್ಳುವಾಗ ರಾಜಪ್ಪ ಮೇಷ್ಟ್ರು ಬರೆದದ್ದೇ ನನ್ನ ಹುಟ್ಟಿದ ತಾರೀಖು; ನಿಖರವಾಗಿ ಜನ್ಮ ದಿನಾಂಕ ನನಗೆ ಗೊತ್ತಿಲ್ಲ’ ಎಂದು ಹೇಳಿದರು.