Home Advertisement
Home ನಮ್ಮ ಜಿಲ್ಲೆ ದಾವಣಗೆರೆ ವ್ಯವಸ್ಥೆಯಲ್ಲಿ ಎಲ್ರೂ ಹೈಕಮಾಂಡೇ: ಡಿಕೆಶಿ ಹೇಳಿಕೆಗೆ ಜಾರಕಿಹೊಳಿ ತಿರುಗೇಟು

ವ್ಯವಸ್ಥೆಯಲ್ಲಿ ಎಲ್ರೂ ಹೈಕಮಾಂಡೇ: ಡಿಕೆಶಿ ಹೇಳಿಕೆಗೆ ಜಾರಕಿಹೊಳಿ ತಿರುಗೇಟು

0
47

ದಾವಣಗೆರೆ: ವ್ಯವಸ್ಥೆಯಲ್ಲಿ ಎಲ್ಲರು ಹೈ ಕಮಾಂಡೇ‌ ಮತ್ತು ದೊಡ್ಡವರೇ ಇಲ್ಲಿ ಯಾರು ಸಣ್ಣವರು ಅಂತಾ ಹೇಳೋಕೆ ಆಗಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಶಾಸಕ ಯತೀಂದ್ರ ಸಿದ್ಧರಾಮಯ್ಯಗೆ ಹೈಕಮಾಂಡ್ ಎಂದು ಕುಟುಕಿದ್ದ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

ಹರಿಹರದ ವಾಲ್ಮೀಕಿ ಪೀಠದಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಯತೀಂದ್ರ ಮಾತ್ರವಲ್ಲ ವ್ಯವಸ್ಥೆಯಲ್ಲಿ ಎಲ್ಲರೂ ಹೈಕಮಾಂಡ್ ಇದ್ದಂತೆ ಎಂದರು.

ಇದನ್ನೂ ಓದಿ: ವಾಲ್ಮೀಕಿ ಜಾತ್ರಾ ಸಮಿತಿ ನೇಮಕ ಖಂಡಿಸಿ ಬಂಗಾರು ಹನಮಂತು ಆಕ್ರೋಶ

ಜಾತ್ರಾ ಸಮಿತಿಗೆ ಅಧ್ಯಕ್ಷರನ್ನಾಗಿ ದದ್ದಲ್ ಆಯ್ಕೆಗೆ ಬಿಜೆಪಿ ವಿರೋಧಿಸಿರುವುದಕ್ಕೆ ಪ್ರತಿಕ್ರಿಯಿಸಿ, ಇದು ಸರ್ಕಾರದ ಕಾರ್ಯಕ್ರಮ ಅಲ್ಲ ಬದಲಿಗೆ ಖಾಸಗಿ ಕಾರ್ಯಕ್ರಮ. ಖಾಸಗಿಯಾಗಿ ಯಾರನ್ನಾದರೂ ನೇಮಿಸಲು ಅವಕಾಶವಿದೆ. ಅಲ್ಲದೇ,ದದ್ದಲ್ ಮೇಲೆ ಯಾವ ಆರೋಪ ಇಲ್ಲ.ತನಿಖೆ ನಡೆಯುತ್ತಿದೆ ಇಡಿ ತನಿಖೆಯಲ್ಲಿ ಅವರ ಹೆಸರು ಕೇಳಿ ಬಂದಿಲ್ಲ ಎಂದರು.

ಪವರ್ ಶೇರಿಂಗ್ ಗೊಂದಲ ಯಾವಾಗ ಬಗೆಹರಿಯುತ್ತೇ ಅಂತಾ ನಾವು ಕೂಡಾ ಕಾಯುತ್ತಿದ್ದೇವೆ. ನಿರ್ಧಾರ ಮಾಡೋದು ಹೈ ಕಮಾಂಡ್, ಅಲ್ಲಿಯವರೆಗೂ ಕಾಯಬೇಕು. ಯಾಕೆ ತಡವಾಗುತ್ತಿದೆ ಕಾರಣ ಗೊತ್ತಿಲ್ಲ. ಗೊಂದಲ ಬೇಗ ಬಗೆಹರಿಯುವ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: METRO ದರ ಏರಿಕೆ ವಿರುದ್ಧ ಖಾಲಿ ಟ್ರಂಕ್‌ ಹಿಡಿದು ತೇಜಸ್ವಿ ಪ್ರತಿಭಟನೆ

ಡಿಕೆಶಿಗೆ 80 ಶಾಸಕರ ಬೆಂಬಲ ಇದೆ ಎಂಬ ಶಾಸಕ ಇಕ್ಬಾಲ್ ಹೇಳಿರಬಹುದು. ಆದರೆ, ಎಂಬತ್ತು ಒಂದು ವಿಷಯವಲ್ಲ. ಯಾರು ಸಮರ್ಥರಿದ್ದಾರೆ, ಯಾರು ಪಕ್ಷ ಮುನ್ನೆಡೆಸುತ್ತಾರೋ ಅವರಿಗೆ ಅವಕಾಶ ಸಿಗುತ್ತೆ. ಆದರೆ, ಆ ಸಂದರ್ಭ ಇನ್ನೂ ಬಂದಿಲ್ಲ ಬಂದಾಗ ಚರ್ಚೆ ಮಾಡೋಣ ಎಂದರು.

ಸಿಎಂ, ಡಿಸಿಎಂ ಅವರನ್ನು ರಾಹುಲ್ ಗಾಂಧಿ ಬುಲವ್ ವಿಚಾರಕ್ಕೆ ಸಂಬಂಧಿಸಿದಂತೆ, ಹೈಕಮಾಂಡ್ ಕರೆದರೆ ಹೋಗಲೇ ಬೇಕು ಹೋಗುತ್ತಾರೆ ಎಂದರು.

ಇದನ್ನೂ ಓದಿ: IPL ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನುಮತಿ: ಗೃಹ ಸಚಿವರ ಸಮಾಲೋಚನೆ

ಸಚಿವ ಸಂಪುಟ ಪುನರ್ ರಚನೆಯಾದರೆ ಬಹಳಷ್ಟು ಹಿರಿಯ ಶಾಸಕರಿದ್ದಾರೆ. ಅವರೂ ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳಿದ್ದಾರೆ. ವರಿಷ್ಟರು ಹೇಳುವವರೆಗೂ ಕಾಯಬೇಕು ಎಂದು ಜಾರಕಿಹೊಳಿ ಹೇಳಿದರು.

Previous articleಕೆನಡಾದಲ್ಲಿ ಕನ್ನಡಿಗ ಚಂದನ್ ಕುಮಾರ್ ಗುಂಡಿನ ದಾಳಿಗೆ ಬಲಿ
Next articleಫ್ಲೆಕ್ಸಿ-ಕ್ಯಾಪ್ ಇಕ್ವಿಟಿ, ಕ್ರೆಡಿಟ್ ಪ್ರಮುಖ ಹಂಚಿಕೆಯಾಗಿ ಮೋತೀಲಾಲ್ ಓಸ್ವಾಲ್ ಶಿಫಾರಸು