Home ನಮ್ಮ ಜಿಲ್ಲೆ ದಾವಣಗೆರೆ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ರಾಹುಲ್ ಗಾಂಧಿ ಸಂತಾಪ

ಶಾಮನೂರು ಶಿವಶಂಕರಪ್ಪ ನಿಧನಕ್ಕೆ ರಾಹುಲ್ ಗಾಂಧಿ ಸಂತಾಪ

0
6

ದಾವಣಗೆರೆ: ದೇಶದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಎಐಸಿಸಿ ನಾಯಕ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.

‘ಶಾಮನೂರು ಶಿವಶಂಕರಪ್ಪನವರು ಪಕ್ಷಕ್ಕೆ ಸದೃಢ ನಾಯಕರಾಗಿದ್ದವರು. ಕರ್ನಾಟಕ ಮತ್ತು ಕಾಂಗ್ರೆಸ್‌ಗೆ ಅವರ ಕೊಡುಗೆ ಅಪಾರವಾಗಿದ್ದು, ದಶಕಗಳ ಕಾಲ ತಮ್ಮ ರಾಜಕೀಯ ಜೀವನವನ್ನು ಸಾರ್ವಜನಿಕರ ಸೇವೆಗೆ ಮುಡಪಾಗಿಟ್ದಿದ್ದರು. ಅವರ ಅಗಲಿಕೆಯಿಂದ ತೀವ್ರ ದುಃಖವಾಗಿದೆ. ಅವರ ಕುಟುಂಬ ವರ್ಗದವರು, ಬೆಂಬಲಿಗರಿಗೆ ಸಂತಾಪ’ ಎಂದು ರಾಹುಲ್ ಗಾಂಧಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅಗಲಿದ ನಾಯಕನಿಗೆ ಸಂತಾಪ ತಿಳಿಸಿದ್ದಾರೆ.