ದಾವಣಗೆರೆ: ನಮ್ಮ ಕುಟುಂಬಕ್ಕೆ, ಶಿಕ್ಷಣ ಸಂಸ್ಥೆಗೆ ಮತ್ತು ರಾಜಕೀಯಕ್ಕೆ ದೊಡ್ಡ ಆಲದ ಮರದಂತಿದ್ದ ನಮ್ಮ ಮಾವನವರನ್ನು ಕಳೆದುಕೊಂಡಿರುವುದು ತೀವ್ರ ನೋವುಂಟು ಮಾಡಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭಾವುಕರಾದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬಕ್ಕೆ ಆಲದ ಮರದಂತೆ ನಿಂತು ನಮ್ಮೆಲ್ಲರನ್ನೂ ಜೋಪಾನ ಮಾಡಿದ್ದಾರೆ. ಇಂದು ಅವರನ್ನು ಕಳೆದುಕೊಂಡಿರುವುದು ಆಘಾತವಾಗಿದೆ ಎಂದರು.
ಇದನ್ನೂ ಓದಿ: ಸುಡುಬಿಸಿಲಲ್ಲೂ ಎಸ್ಸೆಸ್ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ
ನಮ್ಮ ಮಾವನವರಿಗೆ ಸ್ಮರಣೆ ಶಕ್ತಿ ಅಪಾರವಾಗಿತ್ತು. ಒಮ್ಮೆ ಒಬ್ಬರನ್ನು ಕಂಡು ಮಾತಾಡಿಸಿದರೆ ಅವರನ್ನು ನೆನಪಲ್ಲಿಟ್ಟುಕೊಂಡು ಪುನಃ ಅವರನ್ನು ಗುರುತಿಸಿ ಮಾತಾಡಿಸುತ್ತಿದ್ದರು. ಬಡವ-ಶ್ರೀಮಂತನೆಂಬ ಬೇಧ ತೋರದ ವ್ಯಕ್ತಿತ್ವ ಅವರದ್ದು, ಹೀಗಾಗಿ ಇಂದಿನ ಯುವಜನಾಂಗಕ್ಕೂ ಅವರನ್ನು ಕಂಡರೆ ಅಷ್ಟೇ ಪ್ರೀತಿ, ಗೌರವವಿದೆ ಎಂದು ತಮ್ಮ ಮಾವನವರಾದ ಶಾಮನೂರು ಶಿವಶಂಕರಪ್ಪ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು.
95 ವಯಸ್ಸಿನಲ್ಲಿಯೂ ತುಂಬಾ ಕ್ರಿಯಾಶೀಲರಾಗಿ, ಅಪಾರ ಜ್ಞಾಪಕಶಕ್ತಿ ಹೊಂದಿದ್ದ ನಮ್ಮ ಮಾವ ಶಾಮನೂರು ಅವರನ್ನು ನೋಡುವುದಕ್ಕಾಗಿಯೇ ಜನರು ಬರುತ್ತಿದ್ದರು. ಅವರೊಡನೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಬಹುಶಃ ಇದೇ ನಮ್ಮ ಆಸ್ತಿ ಎಂದರು.









