Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಪೊಲೀಸ್​ ತನಿಖೆಯಿಂದ ನನಗೆ ವಿಶ್ವಾಸ ಇಲ್ಲ: ರೇಣುಕಾಚಾರ್ಯ ನೇರ ವಾಗ್ದಾಳಿ

ಪೊಲೀಸ್​ ತನಿಖೆಯಿಂದ ನನಗೆ ವಿಶ್ವಾಸ ಇಲ್ಲ: ರೇಣುಕಾಚಾರ್ಯ ನೇರ ವಾಗ್ದಾಳಿ

0
120
ರೇಣುಕಾಚಾರ್ಯ

ದಾವಣಗೆರೆ: ನನ್ನ ರಾಜಕೀಯ ವರ್ಚಸ್ಸು ಸಹಿಸದೇ ಕೆಲ ಶಿಖಂಡಿಗಳು, ಹೇಡಿಗಳು ನನ್ನ ಮಗನನ್ನು ಬಲಿ ಪಡೆದಿದ್ದಾರೆ. ಈ ಪೊಲೀಸ್​ ತನಿಖೆಯಿಂದ ನನಗೆ ವಿಶ್ವಾಸ ಇಲ್ಲ. ಅಧಿಕಾರದಲ್ಲಿದ್ದು ನಿಮ್ಮ ಮಗನ ಪ್ರಕರಣದ ತನಿಖೆ ಸರಿಯಾಗಿಲ್ಲ ಎಂದು ಜನ ಕೇಳುತ್ತಿದ್ದಾರೆ. ಚಂದ್ರಶೇಖರ್​ ಅಕಾಲಿಕ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರ ವಿರುದ್ಧ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ನೇರವಾಗಿ ಎಡಿಜಿಪಿ ಅಲೋಕ್ ಕುಮಾರ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ತನಿಖೆ ಮಾಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಸರಿಯಾದ ತನಿಖೆ ಮಾಡದೆಯೇ ಒಬ್ಬ ಅಧಿಕಾರಿ ಹೇಳಿಕೆ ಕೊಟ್ಟಿದ್ದಾರೆ. ಕೆಲವು ಫೋಟೋ ವಿಡಿಯೋಗಳನ್ನು ಸಿಎಂ ಹಾಗೂ ಗೃಹ ಸಚಿವರಿಗೆ ಕಳುಹಿಸುತ್ತೇನೆ. ಪಾರದರ್ಶಕ ತನಿಖೆ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಚಂದ್ರಶೇಖರ್ ಸೇವಾ ಕಾರ್ಯಗಳನ್ನ ಮುಂದುವರಿಸುತ್ತೇವೆ. ಆ ಮೂಲಕ ಅವನ ಆತ್ಮಕ್ಕೆ ಶಾಂತಿ ಸಿಗುವ ಕೆಲಸ ಮಾಡ್ತೇವೆ ಎಂದೂ ರೇಣುಕಾಚಾರ್ಯ ಇದೇ ವೇಳೆ ಹೇಳಿದರು.

Previous articleಗುಜರಾತ್ ಚುನಾವಣೆ: ಬಿಜೆಪಿ ತೊರೆದ ನಾರಾಯಣ
Next articleಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಕಶ್ಯಪ್