Home Advertisement
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ ಎಸ್ಪಿ ವಿರುದ್ಧ ಟೀಕೆ: ಬಿಜೆಪಿ ಶಾಸಕನಿಗೆ ಮತ್ತಷ್ಟು ಕಂಟಕ

ದಾವಣಗೆರೆ ಎಸ್ಪಿ ವಿರುದ್ಧ ಟೀಕೆ: ಬಿಜೆಪಿ ಶಾಸಕನಿಗೆ ಮತ್ತಷ್ಟು ಕಂಟಕ

0
294

ದಾವಣಗೆರೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರನ್ನು ಶಾಮನೂರು ಕುಟುಂಬದ ಮನೆಕಾಯುವ ನಾಯಿಗೆ ಹೋಲಿಕೆ ಮಾಡಿ ಹೇಳಿಕೆ ನೀಡಿರುವ ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಹೇಳಿಕೆಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಖಂಡಿಸಿದ್ದು, ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೂರ್ವವಲಯ ಪೊಲಿಸ್ ಮಹಾನಿರ್ದೇಶಕರಿಗೆ ಆಗ್ರಹಿಸಿದೆ.

ಎಸ್ಪಿ ಉಮಾ ಪ್ರಶಾಂತ್ ಅವರು ತಾವು ಹಾಜರಿರುವ ಕಾರ್ಯಕ್ರಮಗಳಿಗೆ ಆಗಮಿಸಿದಾಗ ಮುಖ ತಿರುಗಿಸುತ್ತಾರೆ. ಶಾಮನೂರು ಕುಟುಂಬದವರಿಗೆ ನಾಯಿ ರೀತಿ ನಡೆದುಕೊಳ್ಳುತ್ತಾರೆ ಎಂದು ಮಹಿಳಾ ಅಧಿಕಾರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಅಪಮಾನಿಸಿರುವುದನ್ನು ಆಯೋಗದ ಕಾರ್ಯದರ್ಶಿಗಳು ಖಂಡಿಸಿದ್ದು, ಕ್ರಮಕ್ಕೆ ಆಗ್ರಹಿಸಿ ಪತ್ರ ಮುಖೇನ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here