Home Advertisement
Home ನಮ್ಮ ಜಿಲ್ಲೆ ದಾವಣಗೆರೆ ರಾಜ್ಯ ದಿವಾಳಿ ಆರೋಪಕ್ಕೆ ತಿರುಗೇಟು: ಬಿಜೆಪಿ ವಿರುದ್ಧ ಶಿವಲಿಂಗೇಗೌಡ ವಾಗ್ದಾಳಿ

ರಾಜ್ಯ ದಿವಾಳಿ ಆರೋಪಕ್ಕೆ ತಿರುಗೇಟು: ಬಿಜೆಪಿ ವಿರುದ್ಧ ಶಿವಲಿಂಗೇಗೌಡ ವಾಗ್ದಾಳಿ

0
74

ದಾವಣಗೆರೆ: ಹಣಕಾಸು ಕಾಯ್ದೆಯ ನಿಬಂಧನೆ ಮೀರಿ ಸಾಲ ಮಾಡಿಲ್ಲ. ಆದರೂ ಸಿದ್ದರಾಮಯ್ಯ ಸಾಲ ಮಾಡಿ ರಾಜ್ಯವನ್ನು ದಿವಾಳಿ ಮಾಡಿದ್ದಾರೆ ಎಂದು ಟೀಕಿಸುವ ಬಿಜೆಪಿ ನಾಯಕರು, ಹಣಕಾಸು ಕಾಯ್ದೆ ನಿಬಂಧನೆ ಮೀರಿ ಪ್ರಧಾನಿ ನರೇಂದ್ರ ಮೋದಿಯವರು ಸಾಲ ಮಾಡಿದ್ದರಲ್ಲಾ. ಜನರ ಮುಂದೆ ಏಕೆ ಹೇಳುತ್ತಿಲ್ಲ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಪ್ರಶ್ನಿಸಿದರು.


ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣಕಾಸಿನ ಮುಗ್ಗಟ್ಟಿನಿಂದ ಸರ್ಕಾರ ಪಾಪರ್ ಆಗಿದೆ. ಖಜಾನೆ ಖಾಲಿ ಆಗಿದೆ. ಸಿದ್ದರಾಮಯ್ಯ, ಸಾಲದ ರಾಮಯ್ಯ ಆಗಿದ್ದಾರೆ ಎಂಬೆಲ್ಲ ಆರೋಪ, ಟೀಕೆಗಳನ್ನು ಬಿಜೆಪಿ ನಾಯಕರು ಜನರ ಮುಂದೆ ಅಪಪ್ರಚಾರ ಮಾಡುತ್ತಿದ್ದಾರೆ.

ಹಣಕಾಸು ಕಾಯ್ದೆ ನಿಬಂಧನೆಗೂ ಮೀರಿ ಸಾಲ ಮಾಡಿದ್ದಾರೆ. ಅಲ್ಲದೇ ಎಲ್ಲಾ ರಾಜ್ಯಗಳು ಕೂಡ ಮೀರಿ ಸಾಲ ಮಾಡಿವೆ. ಆದರೆ ನಮ್ಮ ರಾಜ್ಯ ಮಾತ್ರ ನಿಬಂಧನೆಗೂ ಮೀರಿ ಸಾಲ ಮಾಡಿಲ್ಲ. ಈ ಬಗ್ಗೆ ಸದನದಲ್ಲಿ ಮುಖ್ಯಮಂತ್ರಿಗಳು ಸುದೀರ್ಘವಾಗಿ ಚರ್ಚೆ ಮಾಡಿ ಜನರಿಗೆ ತಿಳಿಸಿದ್ದೇವೆ. ಆದರೂ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಅಪಪ್ರಚಾರ ಮಾಡುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ನಮ್ಮಲ್ಲಿ ಒಕ್ಕೂಟ ವ್ಯವಸ್ಥೆ ಇದೆ. ಈ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಮತ್ತು ಕೇಂದ್ರಗಳು ಹಣಕಾಸಿನ ಒಳಗಡೆ ಒಬ್ಬರಿಗೊಬ್ಬರು ಅವಲಂಬಿಸಿಕೊAಡು ಜೀವನ ಮಾಡುತ್ತಿದ್ದೇವೆ. ಇವತ್ತು ೪.೭೫ ಲಕ್ಷ ಕೋಟಿ ಹಣವನ್ನು ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ಕಟ್ಟುತ್ತಿದ್ದೇವೆ. ಇದನ್ನು ಕೇಂದ್ರ ಸರ್ಕಾರ ನಮಗೆ ವಾಪಸ್ ಕೊಡಬೇಕು. ಆದರೆ ಕೇಂದ್ರ ಸರ್ಕಾರ ಸ್ಕೀಂ ಯೋಜನೆಗಳ ಮೂಲಕ ನಮಗೆ ವಾಪಸ್ ಕೊಡಬೇಕಾದ ನಮ್ಮ ಪಾಲು ಕೊಡದೆ ಕೇವಲ ೯೪ ಸಾವಿರ ಕೋಟಿ ಕೊಡುತ್ತದೆ. ಎಷ್ಟು ಕೊಟ್ಟಿದೆ?, ಏಕೆ ಕೊಡ್ತಿಲ್ಲ? ಎಂಬುದನ್ನು ಬಿಜೆಪಿ ನಾಯಕರು ಜನರಿಗೆ ತಿಳಿಸಬೇಕು ಎಂದು ಕುಟುಕಿದರು.


ಹಣಕಾಸು ಆಯೋಗ ಶಿಫಾರಸ್ಸಿನ ಮೇಲೆ ಎಲ್ಲ ರಾಜ್ಯಗಳಿಗೂ ಸಮರ್ಪಕವಾಗಿ ಅನುದಾನ ಹಂಚಿಕೆ ಆಗಬೇಕು. ಆದರೆ ೧೫ನೇ ಹಣಕಾಸು ಯೋಜನೆಯ ಶಿಫಾರಸ್ಸಿನಂತೆ ೧೬ನೇ ಹಣಕಾಸು ಆಯೋಗ ಆರಂಭವಾದರೂ ಕರ್ನಾಟಕಕ್ಕೆ ಕೊಡಬೇಕಾದ ೧೫ ಸಾವಿರ ಕೋಟಿ ಹಣವನ್ನು ಕೇಂದ್ರ ಸರ್ಕಾರ ಕೊಟ್ಟಿಲ್ಲ. ಆಗಾದರೆ ಹಣಕಾಸು ಆಯೋಗ ಈ ದೇಶದಲ್ಲಿ ಏಕೆ ಇರಬೇಕು. ಹಣಕಾಸು ಆಯೋಗದ ಸ್ಥಿತಿಗತಿ ಏನು? ಅದರ ಮಹತ್ವ ಏನು?. ಈ ಬಗ್ಗೆ ಬಿಜೆಪಿ ನಾಯಕು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.


ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆ ೫೩೦೦ ಕೋಟಿ ಕೊಡುವುದಾಗಿ ಕೇಂದ್ರ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿ ಅದನ್ನು ಕಾಪಿ ಮಾಡಿ ಕರ್ನಾಟಕ ರಾಜ್ಯಕ್ಕೆ ಒಂದು ಸಿಹಿಸುದ್ದಿ ಅಂತೇಳಿ ಬಸವರಾಜ ಬೊಮ್ಮಾಯಿ ಹೇಳಿದರು. ೫೩೦೦ ಕೋಟಿ ಬಿಡುಗಡೆ ಮಾಡಿದೆಯೇ? ಎಂದು ಪ್ರಶ್ನಿಸಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರವು ೫೦ಃ೫೦ರಷ್ಟು ಅನುಪಾತದಲ್ಲಿ ಜೆಜೆಎಂ ಯೋಜನೆ ಜಾರಿಗೊಳಿಸಿದೆ.

ಈ ಯೋಜನೆ ಸಫಲವಾಗದೆ ಇವತ್ತು ಜನರಿಗೆ ಒಂದು ಹನಿ ನೀರು ಕೊಡುವುದಕ್ಕೆ ಆಗುತ್ತಿಲ್ಲ. ಏಕೆಂದರೆ ರಾಜ್ಯಕ್ಕೆ ೧೧ ಸಾವಿರ ಕೋಟಿ ಕೊಟ್ಟಿದ್ದು, ಇನ್ನು ೧೯ ಸಾವಿರ ಕೋಟಿ ಕೊಡಬೇಕಿದೆ. ಅರ್ಧಂಬರ್ಧ ಕೆಲಸದಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಆದರೂ ರಾಜ್ಯದ ಪಾಲು ಹಣ ಸರಿದೂರಿಗೆ ಕೆಲಸ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದ ಇಬ್ಬಾಗೆ ನೀತಿ ಬಗ್ಗೆ ಬಿಜೆಪಿ ನಾಯಕರು ಏಕೆ ಪ್ರಶ್ನಿಸುತ್ತಿಲ್ಲ ಎಂದು ಛಾಟಿ ಬೀಸಿದರು.