ದಾವಣಗೆರೆ: ಜಿಲ್ಲಾ ಪೊಲೀಸ್ ಅಧೀಕ್ಷಕಿಯನ್ನು ಶಾಮನೂರು ಕುಟುಂಬದ ಮನೆ ಕಾಯುವ ಪಮೋರಿಯನ್ ನಾಯಿಗೆ ಹೋಲಿಕೆ ಮಾಡಿದ್ದ ಹರಿಹರ ಕ್ಷೇತ್ರದ ಶಾಸಕ ಬಿ.ಪಿ. ಹರೀಶ್ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಶಾಸಕ ಹರೀಶ್, “ಎಸ್ಪಿ ಉಮಾ ಪ್ರಶಾಂತ್ ಇತರೆ ಯಾವ ಶಾಸಕರಿಗೆ ಕೊಡಬೇಕಾದ ಗೌರವ ಕೊಡದೇ ವಿಶೇಷವಾಗಿ ಶಾಮನೂರು ಕುಟುಂಬದವರಿಗೆ ಮಾತ್ರ ಗೌರವ ನೀಡುತ್ತಾರೆ. ನಮ್ಮನ್ನು ಕಂಡರೆ ಮುಖ ತಿರುಗಿಸಿ ಹೋಗುತ್ತಾರೆ. ಆದರೆ, ಶಾಮನೂರು ಮನೆತನವರಿಗೆ ಅಧಿಕಾರವಿದೆ ಎಂಬ ಕಾರಣಕ್ಕೆ ಅವರ ಮನೆಯನ್ನು ಗಂಟೆಗಟ್ಟಲೆ ಪಮೋರಿಯನ್ ನಾಯಿಗಳ ರೀತಿ ಕಾಯುತ್ತಾರೆ” ಎಂದು ವ್ಯಂಗ್ಯವಾಡಿದ್ದರು.
ಈ ಬಗ್ಗೆ ಎಸ್ಪಿ ಉಮಾ ಪ್ರಶಾಂತ್ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.