ಡ್ರಗ್ಸ್ ಮಾಫಿಯಾ ಪ್ರಕರಣ: ತಲೆಮರೆಸಿಕೊಂಡಿದ್ದ ನಾಲ್ವರ ಬಂಧನ

0
1

ದಾವಣಗೆರೆ: ದಾವಣಗೆರೆಯಲ್ಲಿ ಮಾದಕ ವಸ್ತು ಮಾರಾಟ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರಿಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಎಂಸಿಸಿ ಬಿ ಬ್ಲಾಕ್‌ನ ಪರಶುರಾಮ್ (34), ಕುವೆಂಪು ನಗರದ ಕೃಷ್ಣಮೂರ್ತಿ ಸಿಂಗಾರಾಮ್ (44), ಜರಿಕಟ್ಟೆ ಗ್ರಾಮದ ಎಂ. ಮಂಜುನಾಥ (38), ತುರ್ಚಘಟ್ಟ ಗ್ರಾಮದ ಅನ್ವರ್ ಬಾಷಾ ಬಂಧಿತ ಆರೋಪಿಗಳು.

ಇದನ್ನೂ ಓದಿ: ಚಿನ್ನದ ಅಂಗಡಿಗಳಿಗೆ ಸಿಸಿಟಿವಿ ಕ್ಯಾಮೆರಾ, ಸೈರನ್ ಕಡ್ಡಾಯ

ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ, ನಗರ ಉಪವಿಭಾಗ ಡಿಎಸ್ಪಿ ಶರಣ ಬಸವೇಶ್ವರ ಮಾರ್ಗದರ್ಶನದ ತಂಡ ಕಾರ್ಯಾಚರಣೆ ನಡೆಸಿತ್ತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈಗ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಮನೂರು ವೇದಮೂರ್ತಿ, ರಾಮ್ ಸ್ವರೂಪ್, ಧೋಲಾರಾಮ್, ದೇವಕಿಶನ್ ಎಂಬುವರನ್ನು ಬಂಧಿಸಲಾಗಿತ್ತು.

Previous articleಕುಂದಾಪುರ ನಗರ ಮಧ್ಯೆ ಅಗ್ನಿ ದುರಂತ: ಅಂಗಡಿಗಳು ಭಸ್ಮ