ದಾವಣಗೆರೆ: ದಾವಣಗೆರೆ ಹಿಮೋಫಿಲಿಯಾ ಸೊಸೈಟಿಯ ಅಧ್ಯಕ್ಷರು, ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರು ಆಗಿರುವ ಡಾ. ಸುರೇಶ್ ಹನಗವಾಡಿ ಅವರು ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಸ್ವತಃ ಹಿಮೋಫಿಲಿಯಾದಿಂದ ಬಳಲುತ್ತಿರುವ ಸುರೇಶ್ ಹನಗವಾಡಿ ಅವರು ಕಳೆದ ಮೂರ್ನಾಲ್ಕು ದಶಕದಿಂದ ಕುಸುಮ ರೋಗಿಗಳಿಗೆ ಸಹಾಯವಾಗಿ ದಾನಿಗಳಿಂದ ನೆರವು ಪಡೆದು ದಾವಣಗೆರೆಯಲ್ಲಿ ಹಿಮೋಫಿಲಿಯಾ ಸೊಸೈಟಿ ತೆರೆದು ನೂರಾರು ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ.
ಕುಸುಮ ರೋಗಿಗಳ ಕುರಿತು ಸರ್ಕಾರದ ಕಣ್ತೆರಸಲು ಅವಿರತ ಶ್ರಮಪಡುತ್ತಿರುವ ಹನಗವಾಡಿ ಅವರು ಉಚಿತವಾಗಿ ನಾನ್ ಫ್ಯಾಕ್ಟರ್ ಥೆರಪಿ ನೀಡುವಂತೆಯೂ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿದ್ದಾರೆ. ಅವರ ಈ ಸೇವೆ ಗುರುತಿಸಿ ಅವರಿಗೆ ಸರ್ಕಾರ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದು ಅವರ ಸೇವೆಗೆ ಸಂದಿರುವ ಗೌರವವಾಗಿದೆ.









