ದಾವಣಗೆರೆ: ದೂಡಾ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ – ಭಾರೀ ಹೈಡ್ರಾಮ

0
5

ದಾವಣಗೆರೆ: ನಗರ ಪಾಲಿಕೆ ವ್ಯಾಪ್ತಿಯ ಪಾರ್ಕ್ ಜಾಗವನ್ನು ಬೇರೆ ವ್ಯಕ್ತಿಗೆ ಏಕನಿವೇಶನ ಮಾಡಿರುವ ಆರೋಪದ ಹಿನ್ನೆಲೆ ದೂಡಾ ಅಧ್ಯಕ್ಷರು ಹಾಗೂ ಅಧಿಕಾರಿಗಳ ವಿರುದ್ಧ ಇಂದು ಬಿಜೆಪಿ ಕಾರ್ಯಕರ್ತರು ಭಾರೀ ಆಕ್ರೋಶ ವ್ಯಕ್ತಪಡಿಸಿದರು. ದಾವಣಗೆರೆಯ ಸಂಗೋಳ್ಳಿ ರಾಯಣ್ಣ ಸರ್ಕಲ್ ಬಳಿ ಇರುವ ದೂಡಾ ಕಚೇರಿಗೆ ಬೀಗ ಹಾಕಿ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಯಿತು.

ಏಕನಿವೇಶನಕ್ಕೆ ವಿರೋಧ – ಬಿಜೆಪಿ ಗರಂ: ಬಿಜೆಪಿ ಕಾರ್ಯಕರ್ತರ ಹೇಳಿಕೆಯ ಪ್ರಕಾರ, ಸಾರ್ವಜನಿಕರಿಗೆ ಮೀಸಲಾಗಿದ್ದ ಪಾರ್ಕ್ ಜಾಗವನ್ನು ಖಾಸಗಿ ವ್ಯಕ್ತಿಗೆ ಏಕನಿವೇಶನ ಮಾಡಿರುವುದು ನಿಯಮಾತೀತ ಹಾಗೂ ಭ್ರಷ್ಟಾಚಾರದ ಉದಾಹರಣೆ ಎಂದು ಆರೋಪಿಸಲಾಗಿದೆ.

ಈ ಕುರಿತು ದೂಡಾ ಅಧ್ಯಕ್ಷರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆ ವೇಳೆ ಕಾಂಗ್ರೆಸ್ ಯುವ ಘಟಕದ ಎಂಟ್ರಿ – ಜೂಸ್ – ಗಲಾಟೆ! : ಪ್ರತಿಭಟನೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಯುವ ಘಟಕ ಕಾರ್ಯಕರ್ತರು ಜೂಸ್ ನೀಡಲು ಸ್ಥಳಕ್ಕೆ ಆಗಮಿಸಿದ್ದು, ಅಲ್ಲೇ ಭಾರೀ ಹೈಡ್ರಾಮ ನಡೆಯಿತು. ಬಿಜೆಪಿ ಪ್ರತಿಭಟನಾಕಾರರಿಗೆ ಜೂಸ್ ನೀಡಲು ಬಂದ ಕಾಂಗ್ರೆಸ್ ಕಾರ್ಯಕರ್ತರ ನಡೆಗೆ ಬಿಜೆಪಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ ಪರಿಣಾಮ ಉದ್ವಿಗ್ನ ವಾತಾವರಣ ನಿರ್ಮಾಣವಾಯ್ತು.

ಬಂಧನ – ಪ್ರಿವೆಂಟಿವ್ ಅರೆಸ್ಟ್: ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ, ಪೊಲೀಸರು ಕಾಂಗ್ರೆಸ್‌ನ ಮೂವರು ಕಾರ್ಯಕರ್ತರನ್ನು ಬಂಧಿಸಿ ಪ್ರಿವೆಂಟಿವ್ ಅರೆಸ್ಟ್ ಮಾಡಿದರು. ಭಾರೀ ಉದ್ವಿಗ್ನತೆ ನಡುವೆ ಎರಡು ಪಕ್ಷಗಳ ನಡುವೆ ಘೋಷಣೆಯುದ್ಧವೂ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹೂ ತೂರಿ ಪ್ರತಿಭಟನೆಗೆ ಪ್ರತಿರೋಧ ತೋರಿದರು.

ಪರಸ್ಪರ ಘೋಷಣೆ – ರಾಜಕೀಯ ಹೋರಾಟ ತೀವ್ರ: “ಸಾರ್ವಜನಿಕ ಆಸ್ತಿಯನ್ನು ಖಾಸಗಿ ಹಿತಾಸಕ್ತಿಗೆ ಬಳಸಬೇಡಿ” ಎಂದು ಬಿಜೆಪಿ ಘೋಷಣೆ ಮಾಡಿದರೆ “ದೂಡಾ ಕ್ರಮ ನ್ಯಾಯಸಮ್ಮತ” ಎಂದು ಕಾಂಗ್ರೆಸ್ ಘೋಷಣೆ ಇದರಿಂದ ಎರಡು ರಾಜಕೀಯ ಪಕ್ಷಗಳಲ್ಲೂ ಉದ್ರಿಕ್ತತೆ ಹೆಚ್ಚಾಗಿದ್ದು, ಪೊಲೀಸ್ ಪಡೆ ಹೆಚ್ಚುವರಿ ನಿಯೋಜಿಸಲಾಗಿದೆ.

Previous articleಡೆವಿಲ್‌ ರಿಲೀಸ್‌ಗೂ ಮುನ್ನ ಸೆಲೆಬ್ರಿಟಿಗಳಿಗೆ ಪತ್ರ ‘ದರ್ಶನ’