Home Advertisement
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ: ವೀರಭದ್ರೇಶ್ವರ ಕೊಂಡ ಹಾಯ್ದ ಸಚಿವ ಮಲ್ಲಿಕಾರ್ಜುನ ಕುಟುಂಬ

ದಾವಣಗೆರೆ: ವೀರಭದ್ರೇಶ್ವರ ಕೊಂಡ ಹಾಯ್ದ ಸಚಿವ ಮಲ್ಲಿಕಾರ್ಜುನ ಕುಟುಂಬ

0
90

ದಾವಣಗೆರೆ: ನಗರದ ಹಳೆಪೇಟೆಯಲ್ಲಿ ನಡೆಯುವ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ಸ್ವಾಮಿಯ ಕೊಂಡೋತ್ಸವವು ಈ ಬಾರಿಯೂ ಭಕ್ತಿ, ಸಂಪ್ರದಾಯ ಮತ್ತು ಸಡಗರದ ವಾತಾವರಣದಲ್ಲಿ ಜರುಗಿತು. ಈ ಧಾರ್ಮಿಕ ಆಚರಣೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಕುಟುಂಬ ಸಮೇತರಾಗಿ ಭಾಗವಹಿಸಿ ಅಗ್ನಿಕುಂಡ ಹಾಯುವ ಮೂಲಕ ಭಕ್ತಿ ಮೆರೆದರು.

ವಿಶೇಷವಾಗಿ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣದಲ್ಲಿರುವ ಅವರ ಪುತ್ರ ಸಮರ್ಥ್ ಶಾಮನೂರು ಮತ್ತು ಪುತ್ರಿ ಶ್ರೇಷ್ಠ ಕೂಡ ತಂದೆಯೊಂದಿಗೆ ಕೊಂಡ ಹಾಯ್ದು ಜನರ ಗಮನ ಸೆಳೆದರು. ಕೊಂಡೋತ್ಸವಕ್ಕೂ ಮುನ್ನ ಕುಟುಂಬವು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾರ್ಥಿಸಿತು.

ಸಚಿವ ಮಲ್ಲಿಕಾರ್ಜುನ ಅವರು ಮಾತನಾಡಿ, “ನಾನು ಚಿಕ್ಕ ವಯಸ್ಸಿನಿಂದಲೇ ಈ ಕೊಂಡೋತ್ಸವದಲ್ಲಿ ಭಾಗವಹಿಸುತ್ತಾ ಬಂದಿದ್ದೇನೆ. ಇದು ಕೇವಲ ಆಚರಣೆ ಅಲ್ಲ, ಭಕ್ತಿಯ ಸಂಕೇತ. ಇಲ್ಲಿ ಎಲ್ಲಾ ಸಮಾಜದ ಜನರು ಒಂದೇ ರೀತಿಯಲ್ಲಿ ದೇವರ ದರ್ಶನ ಪಡೆಯುತ್ತಾರೆ,” ಎಂದು ಹೇಳಿದರು.

ಇದೀಗ ನಡೆಯುತ್ತಿರುವ ಉಪಚುನಾವಣೆಯ ಹಿನ್ನಲೆಯಲ್ಲಿ ಈ ಧಾರ್ಮಿಕ ಕಾರ್ಯಕ್ರಮ ರಾಜಕೀಯವಾಗಿ ಕೂಡ ಗಮನ ಸೆಳೆದಿದೆ. ತಮ್ಮ ಪುತ್ರ ಸಮರ್ಥ್ ಶಾಮನೂರು ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಜನರು ಹೆಚ್ಚಿನ ಮತ ನೀಡಿ ಗೆಲ್ಲಿಸುವಂತೆ ಸಚಿವರು ಮನವಿ ಮಾಡಿದರು.

ಇದೇ ವೇಳೆ, ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ದಾವಣಗೆರೆ ಗ್ರಾಮಾಂತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಗ್ಯಾರಂಟಿ ಯೋಜನೆಗಳ ಆಧಾರದಲ್ಲಿ ಮತಯಾಚನೆ ನಡೆಯಲಿದೆ.