Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಭಾರತ್ ಜೋಡೋ; ಕಾಂಗ್ರೆಸ್‌ಗೆ ನೈತಿಕತೆ ಇಲ್ಲ: ಸಿ.ಟಿ.ರವಿ

ಭಾರತ್ ಜೋಡೋ; ಕಾಂಗ್ರೆಸ್‌ಗೆ ನೈತಿಕತೆ ಇಲ್ಲ: ಸಿ.ಟಿ.ರವಿ

0
145
C T Ravi

ದಾವಣಗೆರೆ: ಭಾರತ್ ಜೋಡೋ ಜಪ ಮಾಡುತ್ತಿರುವ ಹಾಗೂ ದೇಶವನ್ನೇ ಒಡೆದ, ವಿಭಜನೆ ಮಾಡಿದ ಕಾಂಗ್ರೆಸ್ಸಿಗೆ ಇಂತಹ ಕಾರ್ಯಕ್ರಮ ಮಾಡುವ ನೈತಿಕತೆಯೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.
ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯ ಮಟ್ಟದ ಮೂರು ದಿನದ ಪ್ರಶಿಕ್ಷಣ ವರ್ಗ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಅತ್ಯಂತ ಹಿರಿಯರು, ನಾಲ್ಕೈದು ದಶಕದಿಂದ ಆ ಪಕ್ಷಕ್ಕಾಗಿ ಕೆಲಸ ಮಾಡಿದ ಹಿರಿಯ ನಾಯಕರೇ ಈಗ ಕಾಂಗ್ರೆಸ್ ತೊರೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಭಾರತ್ ಜೋಡೋ ಎನ್ನುತ್ತಿದ್ದರೆ, ಅದೇ ಪಕ್ಷದ ನಾಯಕರು ಕಾಂಗ್ರೆಸ್ ಚೋಡೋ ಎಂಬ ಕಾರ್ಯಕ್ರಮ ಮಾಡುತ್ತಾ, ಪಕ್ಷ ಬಿಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಭಾರತ್ ಜೋಡೋ ಅನ್ನುವ ಕಾರ್ಯಕ್ರಮ ಹಮ್ಮಿಕೊಳ್ಳುವಷ್ಟು ನೈತಿಕತೆಯೇ ಉಳಿದಿಲ್ಲ ಎಂದು ಟೀಕಿಸಿದರು.

Previous articleಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರೋದು ಖಚಿತ: ಸಿ.ಟಿ. ರವಿ ವಿಶ್ವಾಸ
Next articleಬನಹಟ್ಟಿಯಲ್ಲಿ ಹಂದಿ ಜ್ವರ ಪತ್ತೆ