ದಾವಣಗೆರೆ: ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಕುರ್ಚಿಗಾಗಿ ಮುಸುಕಿನ ಗುದ್ದಾಟ ನಡೆಯುತ್ತಿದೆ ಎನ್ನುವುದಕ್ಕೆ ದಾವಣಗೆರೆಯಲ್ಲಿ ನಡೆದ ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆ ವೇದಿಕೆಯು ಸಾಕ್ಷಿಯಾಯಿತು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಷಣ ಆರಂಭಿಸಿದಾಗ ಯಾರ ಹೆಸರನ್ನೂ ಹೇಳದೇ ಎಲ್ಲರಿಗೂ ನಮಿಸಿ, ಮಾತು ಆರಂಭಿಸಿದರೆ, ಸಿಎಂ ಸಿದ್ದರಾಮಯ್ಯ ಅವರು ಡಿಕೆಶಿ ಹೊರತುಪಡಿಸಿ ವೇದಿಕೆಯಲ್ಲಿರುವ ಎಲ್ಲರ ಹೆಸರನ್ನೂ ಹೇಳಿ, ಶಾಮನೂರಿಗೆ ನುಡಿನಮನ ಆರಂಭಿಸಿದರು. ಅವರಿಬ್ಬರ ಕುರ್ಚಿ ಕಾಳಗದ ಪರಿಣಾಮ ಎಂಬುದು ನೆರೆದ ಎಲ್ಲರಿಗೂ ಮತ್ತೊಮ್ಮೆ ಬಹಿರಂಗವಾಯಿತು.




















