Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಉಚಿತ ಯೋಜನೆಗಳಿಗೆ BJP ವಿರೋಧವಿಲ್ಲ: ಸದಾನಂದಗೌಡ ಸ್ಪಷ್ಟನೆ

ಉಚಿತ ಯೋಜನೆಗಳಿಗೆ BJP ವಿರೋಧವಿಲ್ಲ: ಸದಾನಂದಗೌಡ ಸ್ಪಷ್ಟನೆ

0
92

ದಾವಣಗೆರೆ: ಭಾರತೀಯ ಜನತಾ ಪಾರ್ಟಿ ಉಚಿತ ಕೊಡುಗೆಗಳ ಬಗ್ಗೆ ವಿರೋಧವಲ್ಲ. ಈ ಕೊಡುಗೆಗಳನ್ನು ಕೊಡುವಂತಹ ವಿಧಿ ವಿಧಾನಕ್ಕೆ ವಿರೋಧ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಹೇಳಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿ ಉಚಿತ ಕೊಡುಗೆಗಳಿಗೆ ಸಂಪೂರ್ಣ ವಿರೋಧವಲ್ಲ ಎಂದು ಸ್ಪಷ್ಟಪಡಿಸಿದರು. “ನಾವು ಹರಿಯಾಣ, ಮಹಾರಾಷ್ಟ್ರ, ಬಿಹಾರದಲ್ಲಿಯೂ ಇದೇ ನಿಲುವನ್ನು ಹೇಳಿದ್ದೇವೆ. ಉಚಿತ ಸೌಲಭ್ಯಗಳನ್ನು ನೀಡುವುದಕ್ಕೆ ವಿರೋಧವಿಲ್ಲ. ಆದರೆ ಅವುಗಳ ವಿತರಣಾ ವ್ಯವಸ್ಥೆಯಲ್ಲಿ ಇರುವ ದೋಷಗಳಿಗೆ ನಮ್ಮ ವಿರೋಧ” ಎಂದು ಹೇಳಿದರು.

ಭ್ರಷ್ಟಾಚಾರದ ಆರೋಪ : ಸರ್ಕಾರದ ಯೋಜನೆಗಳ ವಿತರಣೆಯಲ್ಲಿ ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿದ ಅವರು, “ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಲು ಕಮಿಷನ್ ಪಡೆಯುವ ವ್ಯವಸ್ಥೆ ನಡೆಯುತ್ತಿದೆ” ಎಂದು ಟೀಕಿಸಿದರು.

ಚುನಾವಣೆ ಹಿನ್ನೆಲೆ ಹೇಳಿಕೆ : ಚುನಾವಣಾ ರಾಜಕೀಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು. “ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಎಂಬ ಭಯ ಹುಟ್ಟಿಸಲಾಗುತ್ತಿದೆ. ಆದರೆ ಜನರು ಆತಂಕ ಪಡುವ ಅಗತ್ಯವಿಲ್ಲ” ಎಂದು ಭರವಸೆ ನೀಡಿದರು.

“ಇನ್ನಷ್ಟು ಸರಳವಾಗಿ ತಲುಪಿಸುತ್ತೇವೆ” : “ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಉಚಿತ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಬದಲಾಗಿ ಅವುಗಳನ್ನು ಇನ್ನಷ್ಟು ಸರಳವಾಗಿ, ನೇರವಾಗಿ ಜನರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ” ಎಂದು ಹೇಳಿದರು.