ಬಜಪೆ ಹೊರವಲಯದಲ್ಲಿ ಯುವಕನ ಮೇಲೆ ಮಾರಕಾಸ್ತ್ರದಿಂದ ದಾಳಿ

0
15

ಮೂವರು ದುಷ್ಕರ್ಮಿಗಳ ವಿರುದ್ಧ ತನಿಖೆ ಮುಂದುವರಿಕೆ

ಮಂಗಳೂರು: ನಗರದ ಹೊರವಲಯದಲ್ಲಿ ಮಂಗಳವಾರ ರಾತ್ರಿ ಯುವಕನ ಮೇಲೆ ನಡೆದ ಮಾರಕಾಸ್ತ್ರ ದಾಳಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಂಗಳೂರು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೂಪಾಡಿಕಲ್ಲು ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ದಾಳಿಗೆ ಒಳಗಾದ ಯುವಕನನ್ನು ಅಕಿಲೇಶ್ ಎಂದು ಗುರುತಿಸಲಾಗಿದ್ದು, ಕೈ ಭಾಗಕ್ಕೆ ತೀವ್ರ ಗಾಯವಾಗಿದೆ. ಗಾಯಗೊಂಡ ಅಕಿಲೇಶ್ ಅವರಿಗೆ ಮೂಡಬಿದ್ರೆ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವೀಡಿಯೋ ಮಾಡಿದುದನ್ನು ಆಕ್ಷೇಪಿಸಿ ದಾಳಿ: ಸಾಕ್ಷಿದಾರರ ಪ್ರಕಾರ ದಾಳಿಯ ವೇಳೆ ಬೈಕ್‌ನಲ್ಲಿ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರ ಹಿಡಿದು ಸಂಚರಿಸುತ್ತಿದ್ದರು. ಈ ದೃಶ್ಯವನ್ನು ಯುವಕ ಅಕಿಲೇಶ್ ತನ್ನ ಮೊಬೈಲ್‌ನಲ್ಲಿ ವೀಡಿಯೋ ಆಗಿ ಸೆರೆಹಿಡಿದಿದ್ದರು. ದುಷ್ಕರ್ಮಿಗಳು ಇದನ್ನು ಗಮನಿಸಿ, ವೀಡಿಯೋ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅಕಿಲೇಶ್ ಮೇಲೆ ತಲವಾರು ಬೀಸಿರುವುದು ತಿಳಿದುಬಂದಿದೆ. ದಾಳಿಯಿಂದ ಅಕಿಲೇಶ್ ಅವರ ಕೈ ಭಾಗಕ್ಕೆ ಗಂಭೀರ ಗಾಯವಾಗಿದೆ.

ಪೊಲೀಸರು ಸ್ಥಳ ಪರಿಶೀಲನೆ – ತನಿಖೆ ಪ್ರಾರಂಭ: ಘಟನೆಯ ಬಳಿಕ ಸ್ಥಳಕ್ಕೆ ಬಜಪೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ದುಷ್ಕರ್ಮಿಗಳ ಪತ್ತೆಗೆ ಸಂಬಂಧಿಸಿದ ವಿಚಾರಣೆ ನಡೆಸುತ್ತಿದ್ದಾರೆ.

Previous articleವಿದ್ಯಾರ್ಥಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ಸಂವಾದ
Next articleಪರ್ತಗಾಳಿ ಮಠದ ಸುತ್ತ ಆಕರ್ಷಣೀಯ ಕಾವಿ ಕಲೆ

LEAVE A REPLY

Please enter your comment!
Please enter your name here