ಮಂಗಳೂರು: ಮಹಿಳೆಗೆ ಡಿಜಿಟಲ್ ಅರೆಸ್ಟ್ – 1.81 ಕೋಟಿ ವಂಚನೆ

0
32

ಸಂ. ಕ. ಸಮಾಚಾರ, ಮಂಗಳೂರು: ಮಹಿಳೆಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ 1,81,50,000 ರೂ. ವಂಚಿಸಿರುವ ಘಟನೆ ವರದಿಯಾಗಿದೆ. ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯೊಬ್ಬರ ಮೊಬೈಲ್‌ಗೆ ಅ.24ರಂದು ಅಪರಿಚಿತ ಕರೆ ಮಾಡಿದ್ದು, ಮುಂಬೈನ ಕೊಲಾಲ ಪೊಲೀಸ್ ಠಾಣೆಯಿಂದ ಕರೆ ಮಾಡುತ್ತಿರುವುದಾಗಿ ಮಹಿಳೆಯನ್ನು ನಂಬಿಸಿ ಆಕೆಯ ವಿರುದ್ಧ ಅಕ್ರಮ ಹಣ ವರ್ಗಾವಣೆ ಹಾಗೂ ಮಾನವ ಕಳ್ಳ ಸಾಗಾಣಿಕೆ ಮಾಡಿ ಕಮಿಷನ್ ತೆಗೆದುಕೊಂಡ ಆರೋಪವಿದೆ ಎಂದು ಹೇಳಿದರೆನ್ನಲಾಗಿದೆ.

ಇದರಿಂದ ಭಯಭೀತರಾದ ಮಹಿಳೆಗೆ ವಿಡಿಯೋ ಕಾಲ್ ಮಾಡಿ ಲೆಟರ್ ಬರೆಸಿಕೊಂಡು ವಾಟ್ಸ್‌ಆಪ್ ನಂಬರ್‌ವೊಂದಕ್ಕೆ ಕಳುಹಿಸಿಕೊಡುವಂತೆ ತಿಳಿಸಿದ್ದಾರೆ. ವಿನೋದ್ ರಾಥೋಡ್ ಹಾಗೂ ರಾಜೇಶ್ ಮಿಶ್ರಾ ಎಂಬ ಅಪರಿಚಿತ ವ್ಯಕ್ತಿಗಳು ಪೊಲೀಸ್ ಅಕಾರಿಗಳೆಂದು ಪರಿಚಯಿಸಿ ವಾಟ್ಸಪ್ ವಿಡಿಯೋ ಕರೆ ಮಾಡಿ ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡಬೇಕು ಎಂದು ತಿಳಿಸಿದ್ದಾರೆ.

ಇದಾದ ಬಳಿಕ ನಮ್ಮಲ್ಲಿ ಹಣವನ್ನು ನೀಡಿದರೆ, ಪ್ರಕರಣ ಇತ್ಯರ್ಥವಾದ ಬಳಿಕ ವಾಪಾಸ್ ನೀಡುತ್ತೇವೆ ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಅ.28ರಿಂದ ನ.11ರವರೆಗೆ ಹಂತಹಂತವಾಗಿ 1,81,50,000ರೂ. ಆರ್‌ಟಿಜಿಎಸ್ ಮೂಲಕ ಹಣ ವರ್ಗಾಯಿಸಿದ್ದಾರೆ.
ವಂಚನೆಗೊಳಗಾದ ಮಹಿಳೆ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

Previous articleಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ
Next articleಮಂಗಳೂರು: ಬೀದಿನಾಯಿ ದಾಳಿಗೆ ವ್ಯಕ್ತಿ ಬಲಿ

LEAVE A REPLY

Please enter your comment!
Please enter your name here