ಮಂಗಳೂರು: ಬಂಟ ಸಮಾಜದವರನ್ನು ಒಟ್ಟಿಗೆ ಸೇರಿಸಿಕೊಂಡು ಸಮುದಾಯದ ಏಳಿಗೆಗಾಗಿ ಸರಕಾರದ ಮೇಲೆ ಒತ್ತಡ ಹಾಕಿ ಬಂಟ ಅಭಿವೃದ್ದಿ ನಿಗಮ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದು ಶ್ರೀ ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವಿದ್ಯಾವಾಚಾಸ್ಪತಿ ಡಾ ವಿಶ್ವ ಸಂತೋಷ ಭಾರತೀ ಸ್ವಾಮೀಜಿ ತಿಳಿಸಿದರು.
ನಗರದ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಶ್ರೀ ಬಾರ್ಕುರು ಮಹಾ ಸಂಸ್ಥಾನದ ದಶಮ ಸಂಭ್ರಮ ಸಂಕಲ್ಪ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವಿದ್ಯಾವಾಚಾಸ್ಪತಿ ಡಾl ವಿಶ್ವ ಸಂತೋಷ ಭಾರತೀ ಸ್ವಾಮೀಜಿ ಯವರು ಬಂಟ ಸಂಸ್ಕೃತಿ ಪರಂಪರೆ ತುಳುನಾಡಿನ ದೈವ ದೇವರುಗಳ ಆಚರಣೆಯ ಕುರಿತು ಮಾತನಾಡಿದರು.
ನನಗೆ ಬಹಳ ದೊಡ್ಡ ಕನಸು ಇದೆ ನಮ್ಮವರನ್ನೆಲ್ಲ ಒಂದು ಸೂರಿನಡಿ ಸೇರಿಸಿ ಮಾತನಾಡಬೇಕು, ಜೊತೆಗೆ ಈ ಸಮಾಜದ ಬಹು ದೊಡ್ಡ ಸಂಘಟನೆಯ ನಿರೀಕ್ಷೆಯೂ ಇದೆ ಈ ಸಂಸ್ಥಾನ ಸ್ಥಾಪಿಸಲು ಹೋಗಿ ನಾನು ಬಹಳಷ್ಟು ನೋವುಗಳನ್ನು ಅನುಭವಿಸಿದೆ ಆದರೂ ನನ್ನ ಪೂರ್ವಆಶ್ರಮದ ಈ ಬಂಟ ಜಾತಿಯವರಿಗೆ ಏನಾದರೂ ಮಾಡಲೇ ಬೇಕು ಎಂದು ನಿರ್ಧರಿಸಿ ಕೆಲಸ ಮಾಡುತ್ತಿದ್ದೇನೆ ಎಂದರು.
ಮುಂದಿನ ದಿನಗಳಲ್ಲಿ ನಮ್ಮವರನ್ನೆಲ್ಲ ಸೇರಿಸಿಕೊಂಡು ಬಂಟ ಸಮುದಾಯದ ಏಳಿಗೆಗಾಗಿ ಸರಕಾರದ ಮೇಲೆ ಒತ್ತಡ ಹಾಕಿ ಬಂಟ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿಯೇ ಸಿದ್ಧ ಎಂದರು.


























