ಚಿತ್ರದುರ್ಗ: ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಕಣ್ಮರೆಯಾಗಿದ್ದ ಮಗಳನ್ನು ಆಕೆಯ ತಂದೆ ಶವಾಗಾರದಲ್ಲಿ ಪತ್ತೆಹಚ್ಚಿದ್ದಾರೆ.
ಮಗಳ ಕೊರಳಲಿದ್ದ ಗಣೇಶನ ಪೆಂಡೆಂಟ್ ನೋಡಿದ ತಂದೆ ಈಕೆಯ ನನ್ನ ಮಗಳು ಎಂದು ಶವದ ಮುಂದೆ ಕಣ್ಣೀರು ಹಾಕಿದ್ದಾರೆ.
ಬೆಳ್ಳಂಬೆಳಗ್ಗೆ ಲಾರಿ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, 6 ಜನ ಪ್ರಯಾಣಿಕರು ಸಜೀವ ದಹನವಾಗಿದ್ದರು. ಬೆಂಗಳೂರಿನಿಂದ ಗೋಕರ್ಣ ಹೊರಟಿದ್ದ ಚಂದ್ರೇಗೌಡ ಅವರ ಪುತ್ರಿ ಮಾನಸಾ ಕೂಡ ನಾಪತ್ತೆಯಾಗಿದ್ದಳು.
ಅವಳಿಗಾಗಿ ಹುಡುಕಾಟ ನಡೆಸಿದಾಗ ಶವಗಳ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಈ ವೇಳೆ ಶವಗಳನ್ನು ನೋಡುವ ಸಂದರ್ಭದಲ್ಲಿ ಲಾಕೆಟ್ ಕಂಡು ಮಗಳ ಶವವನ್ನು ತಂದೆ ಪತ್ತೆಹಚ್ಚಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರೇಗೌಡ, ʼನನ್ನ ಮಗಳಿಗೆ ಮದುವೆ ನಿಶ್ಚಯವಾಗಿತ್ತು. ನಾನೂ ಊರಿಗೆ ಬರ್ತೀನಿ, ಬಂದ ಮೇಲೆ ಮದುವೆ ಡೇಟ್ ಫಿಕ್ಸ್ ಮಾಡೋಣ ಎಂದು ಹೇಳಿದ್ದಳು” ಎಂದು ಕಣ್ಣೀರು ಹಾಕಿದರು.























