Home Advertisement
Home ನಮ್ಮ ಜಿಲ್ಲೆ ಚಿತ್ರದುರ್ಗ ಚಿತ್ರದುರ್ಗ ಬಸ್‌ ದುರಂತ: ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ

ಚಿತ್ರದುರ್ಗ ಬಸ್‌ ದುರಂತ: ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ

0
60

ಚಿತ್ರದುರ್ಗ: ಜವನಗೊಂಡನಹಳ್ಳಿ ಬಳಿ ಭೀಕರ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ಮೃತದೇಹಗಳನ್ನು ಪೊಲೀಸ್ ಅಧಿಕಾರಿಗಳು ಭಾನುವಾರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದರು.

ಕಂಟೇನರ್ ಲಾರಿ ಡಿಕ್ಕಿಯಾಗಿ ಸೀಬರ್ಡ್ ಬಸ್‌ಗೆ ಬೆಂಕಿ ಹೊತ್ತಿಕೊಂಡು ಸಂಭವಿಸಿದ್ದ ಅವಘಡದಲ್ಲಿ ಏಳು ಮಂದಿ ಮೃತಪಟ್ಟಿದ್ದು, ಬಸ್-ಲಾರಿ ಚಾಲಕರಿಬ್ಬರು ಮೃತಪಟ್ಟಿದ್ದರು. ಅವರ ಗುರುತು ನಿಖರವಾಗಿತ್ತು.

ಆದರೆ, ಬಸ್‌ನಲ್ಲಿ ಮೃತಪಟ್ಟಿದ್ದ ಐವರು ಪ್ರಯಾಣಿಕರ ಮೃತದೇಹ ಪತ್ತೆಗಾಗಿ ಪೊಲೀಸ್ ಇಲಾಖೆ ಡಿಎನ್‌ಎ ಪರೀಕ್ಷೆ ಮೊರೆ ಹೋಗಿತ್ತು. ಭಾನುವಾರ ಬೆಳಗ್ಗೆ ಡಿಎನ್‌ಎ ವರದಿ ಕೈ ಸೇರುತ್ತಿದ್ದಂತೆ 9.30ಕ್ಕೆ ಕುಟುಂಬದ ಸದಸ್ಯರಿಗೆ ಮೃತದೇಹಗಳನ್ನು ಹಸ್ತಾಂತರಿಸಿದರು.

ಈ ವೇಳೆ ಕುಟುಂಬದ ಸದಸ್ಯರಿಗೆ ಪೊಲೀಸ್ ಅಧಿಕಾರಿಗಳು ಸಾಂತ್ವನ ಹೇಳಿ, ಮುಂದಿನ ದಿನಗಳಲ್ಲಿ ಪರಿ ಹಾರ ಸೇರಿ ಎಲ್ಲ ರೀತಿಯ ಪ್ರಕ್ರಿಯೆಯಲ್ಲಿ ಬೆಂಬಲವಾಗಿ ನಿಲ್ಲುವುದಾಗಿ ಹೇಳಿದರು.

Previous articleಜನವರಿ ಮೊದಲ ವಾರದಲ್ಲೇ ನಾಯಕತ್ವ ಕ್ರಾಂತಿಗೆ ಮುಹೂರ್ತ ನಿಗದಿ?
Next articleಮಹಾತ್ಮಗಾಂಧಿ ನರೇಗಾ ಉಳಿಸಲು ಜ. 5ರಿಂದ ಅತಿದೊಡ್ಡ ಹೋರಾಟ