ಬ್ರೇಕ್‌ಫಾಸ್ಟ್ ಮೂಲಕ ವಿರಾಮ ಅಷ್ಟೇ, ಸಿದ್ದು ಇಳಿಸೋದು ಅಸಾಧ್ಯ

1
86

ಚಿತ್ರದುರ್ಗ: ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಕಾದಾಟ ಆರಂಭವಾಗಿದ್ದು, ಈಗ ಬ್ರೇಕ್‌ಫಾಸ್ಟ್ ಮೂಲಕ ವಿರಾಮ ನೀಡಲಾಗಿದೆ. ಇನ್ನೂ ಅರ್ಧ ಫೀಲಂ ಇದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿಶ್ಲೇಷಿಸಿದರು.

ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ಸತ್ತೋಗಿದೆ. ಆದ್ದರಿಂದ ಸಿದ್ದರಾಮಯ್ಯ ಅವರನ್ನು ಟಚ್ ಮಾಡುವ ಶಕ್ತಿ ವರಿಷ್ಠರು ಸೇರಿದಂತೆ ಯಾರಿಗೂ ಇಲ್ಲ ಎಂದು ಹೇಳಿದರು.

ದಲಿತ ಸಮುದಾಯ 60 ವರ್ಷದಿಂದ ಹೋರಾಡುತ್ತಲೇ ಇದೆ. ಆದರೆ, ಇಲ್ಲಿಯವರೆಗೂ ದಲಿತರು ಸಿಎಂ ಆಗಲು ಸಾಧ್ಯವಾಗಿಲ್ಲ. ಕಾರಣ ದಲಿತರ ನಾಯಕರು ವಾಯ್ಸ್‌ಲೆಸ್ ಆಗಿಬಿಟ್ಟಿದ್ದಾರೆ. ಒಗ್ಗಟ್ಟು ಇಲ್ಲ, ತಾಕತ್ತೂ ಇಲ್ಲ ಎಂದು ಟೀಕಿಸಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಪಕ್ಷ ಕಟ್ಟಿದ್ದಕ್ಕೆ ತಕ್ಕ ಕೂಲಿ ನೀಡಿ ಎಂದು ಗಟ್ಟಿಯಾಗಿ ಹಕ್ಕು ಮಂಡಿಸುತ್ತಿದ್ದಾರೆ. ಆದರೆ, ಅನ್ಯಾಯ ಆಗಿದೆ ಎಂದು ಒಬ್ಬ ದಲಿತ ಲೀಡರ್ ಬಾಯಿಬಿಡುತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ವೀಕಾಗಿದೆ, ಶಕ್ತಿ ಇಲ್ಲ ಎಂದರು.

ಮಲ್ಲಿಕಾರ್ಜುನ ಖರ್ಗೆ ಇರುವವರೆಗೂ ಕಾಂಗ್ರೆಸ್ ಪಕ್ಷದಿಂದ ದಲಿತ ಸಿಎಂ ಯಾರೂ ಆಗುವುದಿಲ್ಲ. ಅವರ ಮಗನಿಗೆ ಅವಕಾಶ ಬಂದ್ರೆ ಮಾತ್ರ ಮಾತನಾಡುತ್ತಾರೆ. ಡಾ.ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಎಚ್.ಸಿ. ಮಹಾದೇವಪ್ಪ ಸೇರಿ ಯಾರೊಬ್ಬ ದಲಿತ ನಾಯಕರನ್ನು ಮುಖ್ಯಮಂತ್ರಿ ಮಾಡಲು ಖರ್ಗೆ ಇಷ್ಟಪಡುವುದಿಲ್ಲ. ಅವರಿಗೆ ಅವರ ಕುಟುಂಬದ ಹಿತ ಮಾತ್ರ ಮುಖ್ಯ ಎಂದು ಆರೋಪಿಸಿದರು.

Previous articleರಾಂಚಿಯಲ್ಲಿ ‘ಕಿಂಗ್’ ಕೊಹ್ಲಿ ರೌದ್ರಾವತಾರ: ಒಂದೇ ಓವರ್‌ನಲ್ಲಿ 21 ರನ್, ಸಚಿನ್ ದಾಖಲೆ ಉಡೀಸ್!
Next articleಖರ್ಚು 21 ಕೋಟಿ, ಆದ್ರೂ ಜೇಬಿಗೆ ಕತ್ತರಿ: ಬೆಳಗಾವಿ ಅಧಿವೇಶನದ ಅಸಲಿ ಲೆಕ್ಕಾಚಾರವಿದು!

1 COMMENT

LEAVE A REPLY

Please enter your comment!
Please enter your name here