ಚಿತ್ರದುರ್ಗ: ಓವರ್ ಟೇಕ್ ಮಾಡುತ್ತಿರುವ ಸಂದರ್ಭದಲ್ಲಿ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ACB DYSP ಆಗಿರುವ ವೈಷ್ಣವಿ ಅವರು ಗಾಯಗೊಂಡಿದ್ದು, ಅವರ ತಾಯಿ, ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಘಟನೆ ಚಿತ್ರದುರ್ಗದ ತಮಟಕಲ್ಲು ಗ್ರಾಮದ ಬ್ರಿಡ್ಜ್ ಬಳಿ ನಡೆದಿದೆ.
DYSP ವೈಷ್ಣವಿಗೆ ಅವರ ತಾಯಿ ಕಮಲ ಹರಿಬಾಬು (65), ಕಾರು ಚಾಲಕ ರಾಕೇಶ್ (40) ಮೃತಪಟ್ಟವರೆಂದು ಗುರುತಿಸಲಾಗಿದೆ.
ತಮಿಳುನಾಡು ಪ್ರವಾಸ ಮುಗಿಸಿ, ಕೊಲ್ಲಾಪುರಕ್ಕೆ ಹಿಂತಿರುಗುತ್ತಿದ್ದ ವೇಳೆ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಈ ಅವಘಡ ಸಂಭವಿಸಿದೆ.
ಗಾಯಾಳು DYSP ವೈಷ್ಣವಿ ಅವರನ್ನು ಸೇರಿ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು, ಚಿತ್ರದುರ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.























