ಬಾಳೆಹೊನ್ನುರು: ರಾಜ್ಯದಲ್ಲಿನ ಕುರ್ಚಿ ಕಿತ್ತಾಟದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ವರ್ಷದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅನಾಹುತದ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ರೈತರ ಸಂಕಷ್ಟ ಬಗೆಹರಿಸುವ ಬದಲು ಜನತೆಯ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ಅರ್ಧ ಗಂಟೆ, ಒಂದು ಗಂಟೆ ಹಾಗೂ ಒಂದುವರೆ ಗಂಟೆ ಪ್ರಯಾಣದ ದಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಲಿಕಾಪ್ಟರ್ ಬಳಸಿ, ಸುಮಾರು 47 ಕೋಟಿ ರೂ. ಸಾರ್ವಜನಿಕರ ಹಣವನ್ನು ವ್ಯಯ ಮಾಡಿದ್ದಾರೆ. ಗ್ಯಾರಂಟಿಗಾಗಿ ಬೆಲೆ ಏರಿಕೆ ಮಾಡಿದ್ದು, ಅಮೆರಿಕಾದಲ್ಲಿ ಟ್ರಂಪ್‌ರವರನ್ನು ಮೀರಿಸುವಂತ ತೆರಿಗೆ ಹಾಕುತ್ತಿದ್ದಾರೆ. ಇದರಿಂದ ಭಾರತೀಯರು ಅಮೆರಿಕಕ್ಕೆ ಹೋಗುವ ಕನಸನ್ನು ನುಚ್ಚುನೂರು ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಬಿಜೆಪಿ ಸಂಸದರು ರಬ್ಬರ್ ಸ್ಟಾಂಪ್, ನಿಷ್ಪ್ರಯೋಜಕರು
ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣವನ್ನು ಮಹಿಳೆಯರ ಖಾತೆಗೆ ಹಾಕದೆ ಇದ್ದು, ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡಿದರೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ 5,000 ಕೋಟಿ ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು. ಕೆಲವರು ಅಧಿಕಾರ ದಾಹಕ್ಕಾಗಿ ಟೆಂಪಲ್ ರನ್ ಮಾಡುತ್ತಿದ್ದಾರೆ ಎಂದು ಡಿಕೆಶಿ ಅವರ ನಡೆಗೆ ವ್ಯಂಗ್ಯವಾಡಿದರು.























