ಕರ್ನಾಟಕದ ‘ಗ್ರೀನ್ ಮೊಬಿಲಿಟಿ’ ಪಯಣಕ್ಕೆ ಮಹತ್ವದ ಮೈಲಿಗಲ್ಲು

0
5

EV ಸ್ಕೂಟರ್: ಹಸಿರು ಸಂಚಾರದತ್ತ ಭರವಸೆಯ ಹೆಜ್ಜೆ

ಹೊಸಕೋಟೆ: ಹಸಿರು ಸಂಚಾರದತ್ತ ಕರ್ನಾಟಕ ಮತ್ತೊಂದು ಭರವಸೆಯ ಹೆಜ್ಜೆ ಇಟ್ಟಿದೆ ಎಂದು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಹೊಸಕೋಟೆಯಲ್ಲಿರುವ ರಿವರ್ ಮೊಬಿಲಿಟಿ ಸಂಸ್ಥೆಯ ಉತ್ಪಾದನಾ ಘಟಕದಲ್ಲಿ ಯಮಹಾ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ Yamaha EC-06 ಇಲೆಕ್ಟ್ರಿಕ್ ಸ್ಕೂಟರ್ ಅನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಜಾಗತಿಕ ಮಟ್ಟದ ಖ್ಯಾತ ಬ್ರ್ಯಾಂಡ್ ಯಮಹಾ ಮತ್ತು ಕರ್ನಾಟಕದಲ್ಲಿ ಹುಟ್ಟಿದ ನವೀನ ಸ್ಟಾರ್ಟಪ್ ರಿವರ್ ಮೊಬಿಲಿಟಿ ಕೈಜೋಡಿಸಿ ರಾಜ್ಯದಲ್ಲಿಯೇ ಇ.ವಿ. ಉತ್ಪಾದನೆ ಆರಂಭಿಸಿರುವುದು ಅತ್ಯಂತ ಶ್ಲಾಘನೀಯ ಬೆಳವಣಿಗೆಯಾಗಿದೆ. ಇದು ಕೇವಲ ಎರಡು ಸಂಸ್ಥೆಗಳ ಸಾಧನೆ ಮಾತ್ರವಲ್ಲದೆ, ಕರ್ನಾಟಕದ ‘ಗ್ರೀನ್ ಮೊಬಿಲಿಟಿ’ ಪಯಣದ ಮಹತ್ವದ ಮೈಲಿಗಲ್ಲು ಎಂದು ಎಂ.ಬಿ. ಪಾಟೀಲ್ ಹೇಳಿದರು.

ಇದನ್ನೂ ಓದಿ:  ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಐದು ನಗರ ಪಾಲಿಕೆಗಳ ಚುನಾವಣೆಗೆ ದಿನಾಂಕ ಫಿಕ್ಸ್‌

ಹಸಿರು ಸಂಚಾರ ಇಂದಿನ ಕಾಲಘಟ್ಟದ ಅತ್ಯಂತ ಪ್ರಮುಖ ಪರಿವರ್ತನೆಗಳಲ್ಲಿ ಒಂದಾಗಿದ್ದು, ಈ ಬದಲಾವಣೆಯ ಮುಂಚೂಣಿಯಲ್ಲಿ ನಿಲ್ಲಲು ಕರ್ನಾಟಕ ಸರ್ಕಾರ ದೃಢಸಂಕಲ್ಪ ಹೊಂದಿದೆ. ರಾಜ್ಯದ ಪ್ರಗತಿಪರ ಕೈಗಾರಿಕಾ ನೀತಿಗಳು, ಬಲಿಷ್ಠ ಇಲೆಕ್ಟ್ರಿಕ್ ವಾಹನ ಮೂಲಸೌಕರ್ಯ, ಸಂಶೋಧನೆ ಮತ್ತು ಅಭಿವೃದ್ಧಿ (R&D), ಕೌಶಲ್ಯಾಭಿವೃದ್ಧಿ ಹಾಗೂ ಅತ್ಯಾಧುನಿಕ ತಯಾರಿಕಾ ವ್ಯವಸ್ಥೆಗಳ ಮೂಲಕ ಸರ್ಕಾರ ನಿರಂತರ ಬೆಂಬಲ ನೀಡುತ್ತಿದೆ ಎಂದು ಅವರು ತಿಳಿಸಿದರು.

ಇಂದಿನ Yamaha EC-06 ಇ.ವಿ. ಸ್ಕೂಟರ್ ರೋಲ್-ಔಟ್ ಕಾರ್ಯಕ್ರಮವು ಜಾಗತಿಕ ಪರಿಣತಿ ಮತ್ತು ಸ್ಥಳೀಯ ನವೀನತೆಯ ಸಮನ್ವಯವನ್ನು ಪ್ರತಿಬಿಂಬಿಸುತ್ತದೆ. ಇದು ಗುಣಮಟ್ಟದ ನಗರ ಮೊಬಿಲಿಟಿ ಪರಿಹಾರ ಒದಗಿಸುವುದರ ಜೊತೆಗೆ, ಹೊಸಕೋಟೆ ಸೇರಿದಂತೆ ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಳೀಯ ಸರಬರಾಜು ಸರಪಳಿ ಬಲಪಡಿಸುವಿಕೆ, ಎಂಎಸ್ಎಂಇಗಳಿಗೆ ಉತ್ತೇಜನ ಹಾಗೂ ಯುವ ಪ್ರತಿಭೆಗಳಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ:  ಮುಂದಿನ ಹತ್ತು ವರ್ಷದ ಒಳಗೆ ಕಲ್ಯಾಣನಾಡಲ್ಲಿ ಪ್ರಾದೇಶಿಕ ಸಮಾನತೆ

ಯಮಹಾ ಹಾಗೂ ರಿವರ್ ಮೊಬಿಲಿಟಿ ಸಂಸ್ಥೆಗಳು ಕರ್ನಾಟಕದಲ್ಲೇ ಉತ್ಪಾದನೆ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವ ಮೂಲಕ ರಾಜ್ಯದ ಯುವಜನತೆಗೆ ಹೆಚ್ಚುವರಿ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿರೀಕ್ಷೆಯಿದೆ. ಈ ಪ್ರಯತ್ನಗಳಿಗೆ ಕರ್ನಾಟಕ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಎಂ.ಬಿ. ಪಾಟೀಲ್ ಭರವಸೆ ನೀಡಿದರು.

ಈ ಸಮಾರಂಭದಲ್ಲಿ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು, ರಿವರ್ ಮೊಬಿಲಿಟಿ ಹಾಗೂ ಯಮಹಾ ಸಂಸ್ಥೆಗಳ ಉನ್ನತಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Previous articleದಾಸೋಹದಿನಾಚರಣೆ ಮರೆತ ಸರ್ಕಾರ: ರಾಜ್ಯಪಾಲರಿಗೆ ಮನವಿ