ಬೆಂಗಳೂರಿನಲ್ಲಿ ವೀಕೇರ್‌ ಅತ್ಯಾಧುನಿಕ ಚರ್ಮ ಆರೈಕೆ ಕೇಂದ್ರ

0
1

ಬೆಂಗಳೂರು: ಚರ್ಮ ಆರೋಗ್ಯ ರಕ್ಷಣೆ ಕ್ಷೇತ್ರದ ವೀಕೇರ್‌ ಸದಾಶಿವನಗರದಲ್ಲಿ ತನ್ನ ಅತ್ಯಾಧುನಿಕ ಆರೈಕೆ ಕೇಂದ್ರವನ್ನು ಪ್ರಾರಂಭಿಸಿದೆ. ಇಲ್ಲಿನ ಎಸ್ಟೀಮ್‌ ಪ್ಲಾಜಾದಲ್ಲಿನ ಬೆಂಗಳೂರು ಸೆಂಟರ್‌ ಆಫ್‌ ಎಕ್ಸಲೆನ್ಸ್‌(ಸಿಒಇ) ಕೇಂದ್ರಕ್ಕೆ ನಟಿ, ರೂಪದರ್ಶಿ ಪ್ರಿಯಾ ಆನಂದ್‌ ಚಾಲನೆ ನೀಡಿದರು. ಇದು ಭಾರತದ ಮೊದಲ ಸಿಂಗಲ್-ಡೇ ಫೇಶಿಯಲ್ ಆರ್ಕಿಟೆಕ್ಚರ್‌ ಕೇಂದ್ರವಾಗಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದ ಚರ್ಮದ ಚಿಕಿತ್ಸೆ, ಜಾಗತಿಕ ತಂತ್ರಜ್ಞಾನಗಳೊಂದಿಗೆ ಚರ್ಮ ಮತ್ತು ಸೌಂದರ್ಯದ ಆರೈಕೆ ಒದಗಿಸುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ವೀಕೇರ್ ಸಮೂಹದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಕುಂದನ್ ಸತ್ಯನಾರಾಯಣನ್ ‘ಜಾಗತಿಕ ಸೌಂದರ್ಯದ ಮಾನದಂಡಗಳು ವಿಕಸನಗೊಳ್ಳುತ್ತಿವೆ, ಅದರೊಂದಿಗೆ ನಾವು ಬೆಳೆಯುತ್ತಿದ್ದೇವೆ. ಸೆಂಟರ್ ಆಫ್ ಎಕ್ಸಲೆನ್ಸ್‌ ಕೇಂದ್ರ ಚಿಕಿತ್ಸೆಗಳನ್ನು ಮೀರಿ, ರಚನಾತ್ಮಕ, ಬಹು-ಪದರದ ವಿಧಾನದ ಮೂಲಕ ಚರ್ಮದ ಆರೈಕೆ ಮಾಡಲಿದೆ” ಎಂದರು.

ಹೈದರಾಬಾದ್ ಮತ್ತು ಬೆಂಗಳೂರಿನ ವಿಸ್ತರಣಾ ಯೋಜನೆಗಳೊಂದಿಗೆ, ದಕ್ಷಿಣ ಭಾರತದ ಪ್ರಮುಖ ಮಹಾನಗರಗಳಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ದಿಟ್ಟ ಹೆಜ್ಜೆಯನ್ನು ವೀಕೇರ್ ಇಟ್ಟಿದೆ. ಈ ಅತ್ಯಾಧುನಿಕ ಕೇಂದ್ರ ವಿಶ್ವ ದರ್ಜೆಯ, ಕೊರಿಯನ್-ಪ್ರೇರಿತ ಸೌಂದರ್ಯದ ಆರೈಕೆಯನ್ನು ನೀಡಲಿದೆ.

ಸಿಂಗಲ್-ಡೇ ಫೇಶಿಯಲ್ ಆರ್ಕಿಟೆಕ್ಚರ್ ಮೂರು ಆಯಾಮದ ವಿಧಾನದೊಂದಿಗೆ ಏಳು ಸುಧಾರಿತ ಲೇಸರ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಗಾಜಿನಷ್ಟೆ ನಯವಾದ ಚರ್ಮ-ಕೇಂದ್ರಿತ ಶಿಷ್ಟಾಚಾರಗಳೊಂದಿಗೆ, ಮೊದಲ ದಿನದಿಂದ ಗೋಚರ ಫಲಿತಾಂಶಗಳನ್ನು ಮತ್ತು 90 ದಿನಗಳಲ್ಲಿ ಅತ್ಯಧ್ಬುತ ಫಲಿತಾಂಶವನ್ನು ನೀಡಲಿದೆ.

ವೀಕೇರ್ ಗ್ರೂಪ್‌ನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕಿ, ಭಾರತದ ಮೊದಲ ಮಹಿಳಾ ಟ್ರೈಕಾಲಜಿಸ್ಟ್ ಇ. ಕ್ಯಾರೊಲಿನ್ ಪ್ರಭಾ, ಭಾರತದಾದ್ಯಂತ 80ಕ್ಕೂ ಅಧಿಕ ಚರ್ಮ ಚಿಕಿತ್ಸಾಲಯಗಳನ್ನು ಪ್ರಾರಂಭಿಸಿ, ಮುನ್ನಡೆಸುತ್ತಿದ್ದಾರೆ. ವೀಕೇರ್ ಗ್ರೂಪ್‌ನ ಸಿಇಒ ಮುಕುಂದನ್ ಸತ್ಯನಾರಾಯಣನ್ ಇವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಟ್ರೈಕಾಲಜಿ, ಕಾಸ್ಮೆಟಿಕ್ ವಿಜ್ಞಾನಗಳು, ನ್ಯೂಟ್ರಾಸ್ಯುಟಿಕಲ್ಸ್ ಮತ್ತು ವೆಲ್ನೆಸ್ ಉದ್ಯಮದಲ್ಲಿ 22 ವರ್ಷಗಳಿಗೂ ಹೆಚ್ಚು ಕಾಲ ಅನುಭವ ಹೊಂದಿರುವ ಮುಕುಂದನ್ ಸತ್ಯನಾರಾಯಣನ್, ಸಾಂಪ್ರದಾಯಿಕ ಚಿಕಿತ್ಸೆ ವಿಜ್ಞಾನಗಳೊಂದಿಗೆ ಸಂಶೋಧನೆ-ಚಾಲಿತ ನಾವೀನ್ಯತೆಯನ್ನು ಪರಿಚಯಿಸಿ ಜನಮನ್ನಣೆ ಗಳಿಸಿದ್ದಾರೆ.

‘ನಾವು ಪರಿಚಯಿಸುವ ಪ್ರತಿಯೊಂದು ತಂತ್ರಜ್ಞಾನವು ಜಾಗತಿಕ ವೈದ್ಯಕೀಯ ಮೌಲ್ಯಮಾಪನದಿಂದ ಅಂಗೀಕೃತಗೊಂಡಿದ್ದು, ಎಫ್‌ಡಿಎ ಕ್ಲಿಯರೆನ್ಸ್ ಮತ್ತು ಖಚಿತ ಫಲಿತಾಂಶಗಳನ್ನು ಹೊಂದಿರುತ್ತದೆ’ ಎಂದು ವೀಕೇರ್‌ ಸಮೂಹದ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಇ. ಕ್ಯಾರೊಲಿನ್ ಪ್ರಭಾ ಹೇಳಿದರು.

Previous articleಕಾಲೆಳೆಯುವವರೇ ಜಾಸ್ತಿ ಇರುವಾಗ ಪಾದಗಳು ಸೇರುವುದಾದರೂ ಹೇಗೆ?