ಕೋಗಿಲು ಲೇಔಟ್‌ನಲ್ಲಿ ಬಾಂಗ್ಲಾದವರಿಲ್ಲ

0
2

ಬೆಂಗಳೂರು: ನನಗಿರುವ ಮಾಹಿತಿ ಪ್ರಕಾರ ಕೋಗಿಲು ಲೇಔಟ್‌ನಲ್ಲಿ ಬಾಂಗ್ಲಾದೇಶದವರು ಇಲ್ಲ. ಸರಿಯಾದ ದಾಖಲೆ ಇದ್ದವರಿಗೆ ಮಾತ್ರ ಮನೆ ಕೊಡುತ್ತೇವೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿ ಮಾಡಿರುವ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲರ ಬಳಿಯೂ ಆಧಾರ್ ಕಾರ್ಡ್ ಇದೆ. ಸಿಎಂ ಸೂಚನೆ ಕೊಟ್ಟಿದ್ದಾರೆ. ದಾಖಲೆ ಪರಿಶೀಲನೆ ಮಾಡಿ, ಯಾರು ಕರ್ನಾಟಕದವರು ಇದ್ದಾರೆ ಅವರಿಗಷ್ಟೇ ಮನೆ ಕೊಡಲು ತೀರ್ಮಾನ ಮಾಡಿದ್ದೇವೆ. ಬೇರೆಯವರಿಗೆ ಮನೆ ಕೊಡಲ್ಲ ಎಂದರು.

ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಶರವೇಗದಲ್ಲಿ ತುಷ್ಟೀಕರಣ

ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹಸ್ತಕ್ಷೇಪ ಬಗ್ಗೆ ಮಾತನಾಡಿ, ಅದರಲ್ಲಿ ತಪ್ಪೇನು?. ಅವರು ನಮ್ಮ ನಾಯಕರು. ಕರ್ನಾಟಕದಲ್ಲಿ ಇಂಥದೊಂದು ಸುದ್ದಿ ಆಗುತ್ತಿದೆ ಎಂದು ಸಿಎಂಗೆ ಹೇಳಿದ್ದಾರೆ. ಸಿಎಂ ಸಭೆ ಮಾಡಿದ್ದಾರೆ, ಲೋಕಲ್ ಇದ್ದವರಿಗೆ ಮನೆ ಕೊಡಿ ಎಂದಿದ್ದಾರೆ. ಆಧಾರ್, ರೇಷನ್ ಕಾರ್ಡ್ ಇದ್ದವರಿಗೆ ಮನೆ ಕೊಡುತ್ತೇವೆ. 185 ಮನೆಗಳಲ್ಲಿ 20 ಮನೆಯವರು ಬೇರೆಯವರು ಇದ್ದಾರೆ. ಅವರು ಕರ್ನಾಟಕದ ರಾಯಚೂರು, ಕಲಬುರಗಿ ಮೂಲದವರು ಎಂದು ತಿಳಿಸಿದರು.

Previous articleಪ್ರೀತಿಯಿಂದ ಪರಮೇಶ್ವರ್ ಸಿಎಂ ಮಾಡಿ ಅಂದ್ರೆ, ಬೇಡಾ ಅನ್ನೋಕಾಗುತ್ತಾ?