ಡಿಜಿಟಲ್ ಪಾವತಿಗಳಲ್ಲಿ ಹೊಸ ಯುಗದ ಆರಂಭ

0
43

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್‌ಸಂಗ್ ಇಂಡಿಯಾ ತನ್ನ ಬಹುಮುಖ ವೇದಿಕೆ ಸ್ಯಾಮ್‌ಸಂಗ್ ವ್ಯಾಲೆಟ್‌ಗೆ ಹೊಸ ಕ್ರಾಂತಿಕಾರಿ ಫೀಚರ್‌ಗಳನ್ನು ಪರಿಚಯಿಸಿದೆ. ಈ ಹೊಸ ವೈಶಿಷ್ಟ್ಯಗಳು ಯುಪಿಐ ಆನ್‌ಬೋರ್ಡಿಂಗ್, ಪಿನ್‌ರಹಿತ ಬಯೋಮೆಟ್ರಿಕ್ ಪ್ರಮಾಣೀಕರಣ, ಮತ್ತು ಜಾಗತಿಕ ಟ್ಯಾಪ್ & ಪೇ ಸಾಮರ್ಥ್ಯಗಳನ್ನು ಒಳಗೊಂಡಿವೆ.

ಹೊಸ ಫೀಚರ್‌ಗಳು ಡಿಜಿಟಲ್ ಪಾವತಿಗಳ ಮತ್ತು ಯುಪಿಐ ಬಳಕೆಯ ಅನುಭವವನ್ನು ಸಂಪೂರ್ಣವಾಗಿ ಬದಲಾಯಿಸಲಿವೆ. ಸ್ಯಾಮ್‌ಸಂಗ್ ವ್ಯಾಲೆಟ್ ಇದೀಗ ಕೇವಲ ಡಿಜಿಟಲ್ ಪರ್ಸ್‌ ಆಗಿರದೆ, ಪಾವತಿಗಳು, ಗುರುತಿನ ಕಾರ್ಡ್‌ಗಳು, ಪ್ರಯಾಣದ ದಾಖಲೆಗಳು ಮತ್ತು ಡಿಜಿಟಲ್ ಕೀಗಳಂತಹ ಪ್ರಮುಖ ಅಂಶಗಳನ್ನು ಒಂದೇ ಸುರಕ್ಷಿತ ಅಪ್ಲಿಕೇಶನ್‌ನಲ್ಲಿ ಹೊಂದಿಸಲು ಸಹಾಯಕವಾಗಲಿದೆ.

ಸ್ಯಾಮ್‌ಸಂಗ್ ಇಂಡಿಯಾದ ಸೇವೆಗಳು ಮತ್ತು ಅಪ್ಲಿಕೇಶನ್ ವಿಭಾಗದ ಹಿರಿಯ ನಿರ್ದೇಶಕ ಮಧುರ್ ಚತುರ್ವೇದಿ ಅವರು, “ಈ ಅಪ್‌ಡೇಟ್‌ಗಳೊಂದಿಗೆ ಸ್ಯಾಮ್‌ಸಂಗ್ ವ್ಯಾಲೆಟ್ ಡಿಜಿಟಲ್ ಪಾವತಿಗಳ ಹೊಸ ಯುಗವನ್ನು ಆರಂಭಿಸುತ್ತಿದೆ. ನಾವು ಸುರಕ್ಷತೆ, ವೇಗ ಮತ್ತು ಅನುಕೂಲತೆಯನ್ನು ಒಟ್ಟುಗೂಡಿಸುತ್ತಿದ್ದೇವೆ” ಎಂದು ಹೇಳಿದರು.

ಹೊಸ ಯುಪಿಐ ಆನ್‌ಬೋರ್ಡಿಂಗ್ ಫೀಚರ್ ಬಳಕೆದಾರರು ಹೊಸ ಗ್ಯಾಲಕ್ಸಿ ಸಾಧನವನ್ನು ಸಕ್ರಿಯಗೊಳಿಸುವ ಕ್ಷಣದಲ್ಲೇ ಪಾವತಿ ವ್ಯವಸ್ಥೆ ಅಳವಡಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಪಿನ್‌ರಹಿತ ಬಯೋಮೆಟ್ರಿಕ್ ಅಥೆಂಟಿಕೇಷನ್‌ನಿಂದ ಪಾವತಿಗಳು ಇನ್ನಷ್ಟು ಸುರಕ್ಷಿತ ಮತ್ತು ವೇಗವಾಗಿ ಆಗಲಿವೆ.

ಅದೇ ರೀತಿ, ಫಾರೆಕ್ಸ್ ಕಾರ್ಡ್‌ಗಳು, ಟೋಕನೈಸ್ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳು, ಹಾಗೂ ಟ್ಯಾಪ್ & ಪೇ ಸಾಮರ್ಥ್ಯಗಳು ಸ್ಯಾಮ್‌ಸಂಗ್ ವ್ಯಾಲೆಟ್ ಮೂಲಕ ವಿಶ್ವದಾದ್ಯಂತ ವಹಿವಾಟುಗಳನ್ನು ಸರಳಗೊಳಿಸಲಿವೆ.

ಸ್ಯಾಮ್‌ಸಂಗ್ ವ್ಯಾಲೆಟ್ ಇದೀಗ ಗ್ಯಾಲಕ್ಸಿ ಬಳಕೆದಾರರ ಜೀವನದಲ್ಲಿ ಸಂಪೂರ್ಣ ಡಿಜಿಟಲ್ ಪಾವತಿ ಮತ್ತು ಗುರುತಿನ ನಿರ್ವಹಣೆಗೆ ಸುರಕ್ಷಿತ, ನವೀನ ಗೇಟ್‌ವೇ ಆಗಿ ಪರಿಣಮಿಸಿದೆ.

Previous articleಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ, ಕ್ಯನ್ಸರ್‌ ಪ್ರತಿಬಂಧಕ!
Next articleಯುದ್ಧ ನಿಲ್ಲಿಸುವುದು ಹೇಗೆ? ಜಗತ್ತು ಭಾರತದಿಂದ ಕಲಿಯಲಿ: ವಾಯುಪಡೆ ಮುಖ್ಯಸ್ಥ

LEAVE A REPLY

Please enter your comment!
Please enter your name here