ಭಾರತದ ಮೆಟ್ರೋಗಳಿಂದ ಕುಗ್ರಾಮಗಳವರೆಗೆ ಫೋನ್ ಪೇ

0
1

ಬೆಂಗಳೂರು: ಮೆಟ್ರೋಗಳಿಂದ ಕುಗ್ರಾಮಗಳವರೆಗೆ 61 ಕೋಟಿ ಬಳಕೆದಾರರನ್ನು ಹೊಂದಿರುವ ಫೋನ್ ಪೇ ಅಖಿಲ-ಭಾರತ ವ್ಯಾಪ್ತಿಯು ಅತ್ಯಂತ ದೊಡ್ಡ ಸ್ಪರ್ಧಾತ್ಮಕ ಅನುಕೂಲವಾಗಿದೆ ಮತ್ತು ತನ್ನ ಅತ್ಯಂತ ನಿರೀಕ್ಷೆಯ ಮಾರುಕಟ್ಟೆ ಪ್ರವೇಶಕ್ಕೆ ಸಜ್ಜಾಗುತ್ತಿರುವಾಗ ಪ್ರಮುಖ ಮಾರಾಟದ ಅಂಶವಾಗಿದೆ

ಬಹಳಷ್ಟು ಪೇಮೆಂಟ್ ಆಪ್‌ಗಳು ನಗರ ಮಾರುಕಟ್ಟೆಗೆ ಹೆಚ್ಚು ಆದ್ಯತೆ ನೀಡುತ್ತವೆ. ಫೋನ್ ಪೇ ಮಾತ್ರ ಡಿಜಿಟಲ್ ವ್ಯವಸ್ಥೆ ಕನಸೇ ಸರಿ ಎಂದು ಭಾವಿಸಿದ್ದ ಭಾರತದ ಕುಗ್ರಾಮಗಳಿಗೂ ತಲುಪುವಂತಹ ವಿಸ್ತಾರ ಡಿಜಿಟಲ್ ಪಾವತಿಗಳ ವ್ಯವಸ್ಥೆಯನ್ನು ರೂಪಿಸಿದೆ. ಜನನಿಬಿಡ ನಗರಗಳಿಂದ ಸಣ್ಣ ಊರಿನ ಕಿರಾಣಿ ಅಂಗಡಿಗಳವರೆಗೆ ಈ ವಿಸ್ತಾರ ವ್ಯಾಪ್ತಿಯು ಫೋನ್ ಪೇ ಯಶೋಗಾಥೆಯ ತಳಹದಿಯಾಗಿದೆ.

ಭಾರತದಾದ್ಯಂತ 4.4 ಕೋಟಿ ವ್ಯಾಪಾರಿ ತಾಣಗಳಲ್ಲಿ ಈಗ ಫೋನ್ ಪೆ ಪಾವತಿಗಳ ವ್ಯವಸ್ಥೆ ಇರುವುದು ಅದರ ವ್ಯಾಪಕತೆಯನ್ನು ಹೇಳುತ್ತದೆ. ಎನ್.ಪಿ.ಸಿ.ಐ.ನ ಹೊಚ್ಚಹೊಸ ವರದಿ ಪ್ರಕಾರ ಡಿಸೆಂಬರ್ ತಿಂಗಳಲ್ಲಿ ಮಾತ್ರವೇ 9.8 ಬಿಲಿಯನ್ ವಹಿವಾಟುಗಳನ್ನು ನಡೆಸಿದೆ ಮತ್ತು ದೇಶದ ಯುಪಿಐ ಮಾರುಕಟ್ಟೆ ಪಾಲಿನಲ್ಲಿ ಶೇ. 45ರಷ್ಟು ಪಾಲು ಹೊಂದಿದೆ ಎಂದರೆ ಅದರ ಬೃಹತ್ ಪ್ರಮಾಣ ತೋರುತ್ತದೆ. ಈ ಬೃಹತ್ ‍ಪ್ರಮಾಣವಲ್ಲ, ಬದಲಿಗೆ ಎಲ್ಲಿ ವಹಿವಾಟುಗಳು ನಡೆಯುತ್ತಿವೆ ಎನ್ನುವುದು ಅದರ ಮಹತ್ವವನ್ನು ತೋರಿಸುತ್ತದೆ.

ಇದನ್ನೂ ಓದಿ: ಬ್ಯಾಡ್ಮಿಂಟನ್ ವೃತ್ತಿ ಜೀವನಕ್ಕೆ ಸೈನಾ ನೆಹ್ವಾಲ್ ನಿವೃತ್ತಿ ಘೋಷಣೆ

ಭಾರತ-ಪ್ರಥಮ ಮನಸ್ಥಿತಿ: ಮೆಟ್ರೋಗಳಲ್ಲದ ಪ್ರದೇಶಗಳಲ್ಲಿ ಫೋನ್ ಪೇ ವಿಸ್ತರಣೆ ಉದ್ದೇಶಪೂರ್ವಕ ಕಾರ್ಯತಂತ್ರವಲ್ಲ, ಬದಲಿಗೆ ಭಾರತದಲ್ಲಿ ನೈಜ ವ್ಯಾಪ್ತಿಯನ್ನು ಪಡೆಯುವುದು ಪ್ರತಿಯೊಂದು ಕಡೆ, ಪ್ರತಿಯೊಬ್ಬರಿಗೂ ತಡೆರಹಿತವಾಗಿ ಅವು ಕೆಲಸ ಮಾಡಿದಾಗ ಮಾತ್ರ ಎಂಬ ಸರಳ ಒಳನೋಟದಿಂದ ನಿರ್ಮಾಣವಾದುದು.

ಹಲವು ವರ್ಷಗಳಿಂದ ಫೋನ್ ಪೆ ಡಿಜಿಟಲ್ ಪಾವತಿಗಳು ಮತ್ತು ಹಣಕಾಸು ಸೇವೆಗಳನ್ನು ಮೆಟ್ರೋಗಳ ಆಚೆಗೂ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಗರಗಳಲ್ಲಿನ ವೇತನದಾರ ವೃತ್ತಿಪರರಿಂದ ಕಿರಾಣಿ ಅಂಗಡಿಗಳ ಮಾಲೀಕರವರೆಗೆ ಮತ್ತು ಭಾರತದಾದ್ಯಂತ ಮೊದಲ ಸಲದ ಡಿಜಿಟಲ್ ಬಳಕೆದಾರರವರೆಗೆ ಫೋನ್ ಪೆ ಉತ್ಪನ್ನ ಸಿದ್ಧಾಂತ ಸ್ಥಿರವಾಗಿದೆ. ಪ್ರತಿಯೊಬ್ಬರಿಗೂ ಎಲ್ಲ ಕಡೆಯೂ ಕೆಲಸ ಮಾಡಬಲ್ಲ ಸರಳ, ವಿಶ್ವಾಸಾರ್ಹ ಮೂಲಸೌಕರ್ಯ ನಿರ್ಮಿಸುವುದು.

ಭಾರತ-ಪ್ರಥಮ ಮನಸ್ಥಿತಿಯನ್ನು ಸ್ಪಷ್ಟವಾದ ಉತ್ಪನ್ನದ ನಿರ್ಧಾರಗಳಾಗಿ ಪರಿವರ್ತಿಸಲಾಗುತ್ತದೆ. ಈ ಆಪ್ ಹಲವು ಭಾರತಿಯ ಭಾಷೆಗಳನ್ನು ಬೆಂಬಲಿಸುತ್ತದೆ ಮತ್ತು 11 ಭಾರತೀಯ ಭಾಷೆಗಳಲ್ಲಿ ಧ್ವನಿಯ ಮೂಲಕ ಪಾವತಿಯ ಮಾಹಿತಿ ನೀಡುವ ಮೂಲಕ ಡಿಜಿಟಲ್ ವಹಿವಾಟುಗಳು ಅವರ ಸ್ಥಳೀಯ ಭಾಷೆಗಳಲ್ಲಿ ಅರಿಯುವಂತೆ ಮಾಡುತ್ತದೆ. ಸ್ಥಳೀಕರಣ ಎಂದರೆ ಬರೀ ಭಾಷಾಂತರವಲ್ಲ. ಇದನ್ನು ಡಿಜಿಟಲ್ ಸಾಕ್ಷರತೆಯ ವಿವಿಧ ಹಂತಗಳಿಗೆ ವಿನ್ಯಾಸಗೊಳಿಸಲಾಗಿದ್ದು ಸರಳ ಸ್ಕ್ರೀನ್ ಗಳು, ಎಲ್ಲರಿಗೂ ತಿಳಿದ ಭಾಷೆ ಮತ್ತು ಸುಲಭ ನ್ಯಾವಿಗೇಷನ್ ನಿಂದ ಮೊದಲ ಸಲದ ಬಳಕೆದಾರರೂ ಅವರ ಮೊದಲ ವಹಿವಾಟಿನ ಕುರಿತು ವಿಶ್ವಾಸ ಹೊಂದಬಹುದು.

ಇದನ್ನೂ ಓದಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಈಶ್ವರ್ ಖಂಡ್ರೆ ಆಯ್ಕೆ

ವ್ಯಾಪಾರಿ ಜಾಲ, ನಿಜವಾದ ಭದ್ರಕೋಟೆ: ಫೋನ್ ಪೆಯ ಪ್ರಮುಖ ಅನುಕೂಲವೆಂದರೆ ಅದರ ವ್ಯಾಪಾರಿ ಜಾಲ. ಅದು ಸಂಘಟಿತ ರೀಟೇಲ್ ಆಚೆಗೂ ವಿಸ್ತರಿಸಿದ್ದು ಭಾರತದ ವಾಣಿಜ್ಯ ಕ್ಷೇತ್ರವನ್ನು ಪ್ರಭಾವಿಸುವ ಅನೌಪಚಾರಿಕ ಅರ್ಥವ್ಯವಸ್ಥೆಯಾಗಿದೆ. ಕ್ಯೂಆರ್-ಆಧರಿತ ಪಾವತಿಗಳಿಂದ ಸ್ಥಳೀಯ ಭಾಷೆಗಳ ತಕ್ಷಣ ದೃಢೀಕರಣಗಳವರೆಗೆ ಈ ಪ್ಲಾಟ್ ಫಾರಂ ಹಿಂದೆ ಸಂಪೂರ್ಣ ನಗದು ವಹಿವಾಟು ನಡೆಸುತ್ತಿದ್ದ ಅಸಂಖ್ಯ ಸಣ್ಣ ವ್ಯಾಪಾರಿಗಳಿಗೆ ಶಕ್ತಿ ತುಂಬಿದೆ.

ಫೋನ್ ಪೆಯ ಬಿಸಿನೆಸ್ ಆಪ್ ಬಿಡುಗಡೆಯ ಪ್ರಮುಖ ಮೈಲಿಗಲ್ಲೆಂದರೆ ಅದು ವ್ಯಾಪಾರಿಗಳಿಗೆ ಅವರ ವಹಿವಾಟುಗಳ ಕುರಿತು ಹೆಚ್ಚಿನ ಸ್ಪಷ್ಟತೆ ಮತ್ತು ನಿಯಂತ್ರಣ ನೀಡುತ್ತದೆ. ವ್ಯಾಪಾರಿಗಳ ಅಳವಡಿಕೆಯನ್ನು ಮತ್ತಷ್ಟು ಸದೃಢಗೊಳಿಸಲು ಫೋನ್ ಪೆ ಸ್ಮಾರ್ಟ್ ಸ್ಪೀಕರ್ ಮತ್ತು ಸ್ಮಾರ್ಟ್ ಪಿಒಡಿಯಂತಹ ಮೇಡ್-ಇನ್-ಇಂಡಿಯಾ ಡಿವೈಸ್ ಗಳನ್ನು ಪರಿಚಯಿಸಿದ್ದು ಅದು ತಕ್ಷಣ ಪಾವತಿಯ ದೃಢೀಕರಣ ನೀಡುತ್ತದೆ ಮತ್ತು ಡಿಜಿಟಲ್ ಪಾವತಿಗಳ ಮೇಲೆ ವಿಶ್ವಾಸ ಸುಧಾರಿಸುತ್ತದೆ. ಒಟ್ಟಿಗೆ ಈ ಪರಿಹಾರಗಳು ಭಾರತದ ಅತ್ಯಂತ ದೊಡ್ಡ ಹಾಗೂ ವಿಸ್ತಾರ ವ್ಯಾಪಾರ ಜಾಲಗಳಲ್ಲಿ ಒಂದನ್ನು ನಿರ್ಮಿಸಲು ನೆರವಾಗಿದ್ದು ಔಪಚಾರಿಕ ಮತ್ತು ಅನೌಪಚಾರಿಕ ವಾಣಿಜ್ಯವನ್ನು ಒಂದು ಡಿಜಿಟಲ್ ಪಾವತಿಗಳ ವ್ಯಾಪ್ತಿಗೆ ತರುತ್ತದೆ.

ಪಾವತಿಗಳ ಆಚೆಗೂ ಫೋನ್ ಪೆ ಬಿ2ಬಿ ಪರಿಹಾರಗಳ ಪೂರೈಕೆದಾರನಾಗಿ ವಿಸ್ತರಿಸಿದೆ. ಮಾರಾಟ ದಾಖಲೆಗಳು, ಡಿಜಿಟಲ್ ರಸೀದಿಗಳು ಮತ್ತು ವಹಿವಾಟಿನ ಇತಿಹಾಸವು ವ್ಯಾಪಾರಿಗಳಿಗೆ ಅವರ ವ್ಯಾಪಾರಗಳನ್ನು ಹೆಚ್ಚು ದಕ್ಷತೆಯಿಂದ ನಿರ್ವಹಿಸಲು ನೆರವಾಗುತ್ತವೆ, ಇನ್ವೆಂಟರಿ ವಿಷಯದಲ್ಲಿ ಹೆಚ್ಚಿನ ಸ್ಪಷ್ಟತೆ, ಆರ್ಡರ್ ಮ್ಯಾನೇಜ್ಮೆಂಟ್ ಮತ್ತು ಸೋರ್ಸಿಂಗ್ ಸಪೋರ್ಟ್‌ಗಳು ಆಫ್ ಲೈನ್ ರೀಟೇಲರ್ ಗಳಿಗೆ ಕಾರ್ಯಾಚರಣೆಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಸ್ಪರ್ಧಿಸಲು ನೆರವಾಗುತ್ತದೆ.

ಇದನ್ನೂ ಓದಿ: ದೇಶಿ ಕೈಗಾರಿಕೆಗೆ ಬಲ: ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಗುರಿ

ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್‍ ಇಂಡಿಯಾ (ಸಿಡ್ಬಿ) ಸಹಯೋಗದಲ್ಲಿ ಪ್ರಾರಂಭಿಸಿದ ಉದ್ಯಮ್ ಅಸಿಸ್ಟ್ ಮೂಲಕ ಫೋನ್ ಪೆಯು ಡಿಜಿಟಲ್-ಪ್ರಥಮ ಎಂ.ಎಸ್.ಎಂ.ಇ ಸೇರ್ಪಡೆಯನ್ನು ಸುಲಭಗೊಳಿಸಿ ಮತ್ತು ಭಾರತದ ಪಟ್ಟಣಗಳು ಮತ್ತು ಗ್ರಾಮಗಳಲ್ಲಿ ಅತ್ಯಂತ ಅಗತ್ಯವೆನಿಸಿದ ಔಪಚಾರಿಕ ಸಾಲದ ಲಭ್ಯತೆ ಸುಲಭಗೊಳಿಸುತ್ತದೆ.

ಎಲ್ಲರಿಗೂ ಹಣಕಾಸು ಸೇವೆಗಳು: ಮ್ಯೂಚುಯಲ್ ಫಂಡ್ ಗಳು, ಡಿಜಿಟಲ್ ಚಿನ್ನ, ಸ್ಟಾಕ್ ಬ್ರೋಕಿಂಗ್ ಮತ್ತು ವಿಮೆಯಂತಹ ಹಣಕಾಸು ಸೇವೆಗಳಿಗೆ ಫೋನ್ ಪೆಯ ವಿಸ್ತರಣೆಯನ್ನು ನಗರ ಮತ್ತು ಗ್ರಾಮೀಣ ಮಾರುಕಟ್ಟೆಗಳಲ್ಲಿ ಕೆಲಸ ಮಾಡಲು ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ. ಈ ಸರಳೀಕರಿಸಿದ ಇಂಟರ್ಫೇಸ್ ಮತ್ತು ಸ್ಥಳೀಯ ಭಾಷೆಯ ಬೆಂಬಲದಿಂದ ಈಗ ಪಾವತಿಗಳ ಅಳವಡಿಕೆಯನ್ನು ಹೆಚ್ಚು ಸಂಕೀರ್ಣ ಹಣಕಾಸು ಉತ್ಪನ್ನಗಳಿಗೆ ಬಳಸಬಹುದಾಗಿದೆ, ಇದು ಸಂಪತ್ತು ಸೃಷ್ಟಿಯನ್ನು ಪ್ರಜಾಸತ್ತೀಯಗೊಳಿಸುತ್ತದೆ ಮತ್ತು ಹಿಂದೆ ನಗರದ ಭಾರತೀಯರಿಗೆ ಮೀಸಲಾಗಿದ್ದ ರಿಸ್ಕ್ ನಿರ್ವಹಣೆಯ ಸಾಧನಗಳನ್ನು ನೀಡುತ್ತದೆ.

ಭಾರತಕ್ಕಾಗಿ ನಿರ್ಮಾಣ: ಫೋನ್ ಪೆಯ ಕಥೆಯು ಭಾರತದ ಡಿಜಿಟಲ್ ಪರಿವರ್ತನೆ ಕುರಿತಾದ ವಿಸ್ತಾರ ನಿರೂಪಣೆ ಹೊಂದಿದೆ. ಕಂಪನಿಯು ತನ್ನನ್ನು ನಗರದ ಉಳ್ಳವರ ಪಾವತಿಗಳ ಆಪ್ ಆಗಿ ಮಾತ್ರವಲ್ಲ, ಬದಲಿಗೆ ಮೆಟ್ರೋಗಳಿಂದ ಮಂಡಿಗಳವರೆಗೆ ತಂತ್ರಜ್ಞಾನ ಸನ್ನದ್ಧ ಮಿಲೆನಿಯಲ್ ಗಳಿಂದ ಮೊದಲ ಸಲದ ಸ್ಮಾರ್ಟ್ ಫೋನ್ ಬಳಕೆದಾರರವರೆಗೆ ಮೂಲಸೌಕರ್ಯ ಸಂಪರ್ಕಿಸಿದೆ.

ಇದನ್ನೂ ಓದಿ: Lokayan 2026: INS ಸುದರ್ಶಿನಿ 13 ದೇಶಗಳ 18 ಬಂದರುಗಳಿಗೆ ಭೇಟಿ

ಕಂಪನಿಯ ಭೌಗೋಳಿಕ ವೈವಿಧ್ಯತೆಯು ಸಹಜ ಸದೃಢತೆ ನೀಡುತ್ತದೆ. ನಗರ ಮಾರುಕಟ್ಟೆಗಳು ಸ್ಪರ್ಧಾತ್ಮಕ ಒತ್ತಡಕ್ಕೆ ಹಾಗೂ ಗ್ರಾಹಕರ ಬದಲಾಗುವ ಆದ್ಯತೆಗಳಿಗೆ ಹೆಚ್ಚು ಒಳಗಾಗುತ್ತವೆ. ಫೋನ್ ಪೆ ಟೈಯರ್-2 ಮತ್ತು ಟೈಯರ್-3 ಮತ್ತು ಟೈಯರ್-4 ಮಾರುಕಟ್ಟೆಗಳಿಗೆ ಆಳವಾಗಿ ವಿಸ್ತರಿಸುತ್ತಿರುವುದು ಬಳಕೆದಾರರು ಮತ್ತು ವ್ಯಾಪಾರಿಗಳಿಗೆ ಗಟ್ಟಿಯಾದ ಬಾಂಧವ್ಯ ಸೃಷ್ಟಿಸಿದೆ.

ಫೋನ್ ಪೆ ಬರೀ ಪೇಮೆಂಟ್ ಆಪ್ ಆಗಿ ನಿರ್ಮಿಸಿಲ್ಲ, ಇದನ್ನು ದೇಶದ ಮೂಲೆ ಮೂಲೆಯಲ್ಲಿ ಮೊದಲ ಬಾರಿಗೆ ಔಪಚಾರಿಕ ಅರ್ಥವ್ಯವಸ್ಥೆಯಲ್ಲಿ ಭಾಗವಹಿಸಲು ಕೋಟ್ಯಂತರ ಭಾರತೀಯರಿಗೆ ನೆರವಾಗುತ್ತಿರುವ ಡಿಜಿಟಲ್ ಮೂಲಸೌಕರ್ಯವಾಗಿದೆ.

Previous articleತ್ಯಾಜ್ಯ ಪ್ಲಾಸ್ಟಿಕ್‌ಗಳ ರಸಾಯನಿಕ ಮರುಬಳಕೆ ವಿಶೇಷ ತಂತ್ರಜ್ಞಾನ