Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಕೆಎಸ್‌ಆರ್‌ಟಿಸಿ ನಿಗಮದಲ್ಲಿ ಋತುಚಕ್ರ ರಜೆ ಜ. 1ರಿಂದ ಜಾರಿ

ಕೆಎಸ್‌ಆರ್‌ಟಿಸಿ ನಿಗಮದಲ್ಲಿ ಋತುಚಕ್ರ ರಜೆ ಜ. 1ರಿಂದ ಜಾರಿ

0
22

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ (ಕೆಎಸ್‌ಆರ್‌ಟಿಸಿ) ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಜನವರಿ 1ರಿಂದಲೇ ಋತುಚಕ್ರ ರಜೆಯನ್ನು ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಪ್ರತಿ ತಿಂಗಳು ಒಂದು ಋತುಚಕ್ರ ರಜೆಯನ್ನು ಕೆಲವು ಷರತ್ತುಗಳಿಗೆ ಒಳಪಡಿಸಿ ಜಾರಿಗೊಳಿಸಿದ್ದು, 18ರಿಂದ 52 ವಯಸ್ಸಿನ ನಿಗಮದ ಮಹಿಳಾ ನೌಕರರು ರಜೆ ಪಡೆಯಬಹುದು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಸಕ್ಷಮ ಪ್ರಾಧಿಕಾರಿಯು ಈ ರಜೆ ಮಂಜೂರು ಮಾಡಬಹುದು. ಮುಂದಿನ ತಿಂಗಳಿಗೆ ವಿಸ್ತರಿಸಿಕೊಳ್ಳಲು ಅವಕಾಶವಿಲ್ಲ ಎಂದು ತಿಳಿಸಲಾಗಿದೆ.

Previous articleಬಾಂಗ್ಲಾದಲ್ಲಿ ಮತ್ತೆ ಹಿಂದೂ ನಾಗರಿಕರ ಮನೆಗಳಿಗೆ ಬೆಂಕಿ
Next articleನನ್ನ ಆ ಮಾತು ಯಾರಿಗೆ ಅರ್ಥ ಆಗಬೇಕೋ ಅವರಿಗೆ ಆಗಿದೆ