ಬೆಂಗಳೂರು: ನಗರದಲ್ಲಿನ ಅತ್ಯಂತ ಜನಪ್ರಿಯ ಮತ್ತು ಪ್ರತಿಷ್ಠಿತ ಶಾಪಿಂಗ್ ಮಾಲ್‌ಗಳಲ್ಲೊಂದಾದ ಮಂತ್ರಿಮಾಲ್ ಮತ್ತೊಮ್ಮೆ ಆಸ್ತಿ ತೆರಿಗೆ ಪಾವತಿಸದೆ ಇರುವ ಕಾರಣಕ್ಕೆ ಬೀಗ ಬಿದ್ದಿದೆ. ಹಲವಾರು ಬಾರಿ ತೆರಿಗೆ ಬಾಕಿ ವಿಚಾರದಲ್ಲಿ ವಿವಾದಕ್ಕೆ ಗುರಿಯಾದ ಈ ಮಾಲ್, ಈ ಬಾರಿ ₹30 ಕೋಟಿ 81 ಲಕ್ಷಕ್ಕಿಂತ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಮಂಗಳವಾರ ತೀರ್ವ ನಿರ್ಧಾರ ಕೈಗೊಂಡಿದ್ದಾರೆ.
ಬೆಳಗ್ಗೆಯೇ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಲ್ ಪ್ರವೇಶ ದ್ವಾರಕ್ಕೆ ಬೀಗ ಹಾಕಿ ಸೀಜ್ ನೋಟಿಸ್ ಅಂಟಿಸಿದ್ದಾರೆ. ಈ ವೇಳೆ ಮಾಲ್ ಮುಂಭಾಗ ನೂರಾರು ಸಿಬ್ಬಂದಿ ಇದ್ದರು. ನೂರಾರು ಜನ ಮಾಲ್‌ನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ರೋಡ್‌ನಲ್ಲಿ ನಿಂತು ಕಾಯುವಂತಾಗಿದೆ.
2020ರಲ್ಲಿ ಬರೋಬ್ಬರಿ 42,63,40,874 ರೂ ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆ ಬೌನ್ಸ್ ಆಗಿದ್ದಕ್ಕೆ ಮಂತ್ರಿ ಮಾಲ್ಗೆ ಬೀಗ ಹಾಕಲಾಗಿತ್ತು. ಮತ್ತೆ ಮತ್ತೆ ನೋಟಿಸ್ ನೀಡಿದ್ದರೂ ಮಾಲ್ ಆಡಳಿತವು ತೆರಿಗೆ ಪಾವತಿಸಲು ಕ್ರಮ ಕೈಗೊಂಡಿರಲಿಲ್ಲ. ಬಳಿಕ 2021 ರಲ್ಲಿ 20,33,34,828 ರೂ ಆಸ್ತಿ ತೆರಿಗೆ ಬಾಕಿ ಇದ್ದ ಕಾರಣ ಆಸ್ತಿ ಮುಟ್ಟುಗೋಲು ಎಚ್ಚರಿಕೆ ಸಹ ನೀಡಲಾಗಿತ್ತು.
2023ರಲ್ಲಿ 32 ಕೋಟಿ ವರೆಗೂ ತೆರಿಗೆ ಬಾಕಿ ಉಳಿಸಿಕೊಂಡ ಮಾಲ್ಗೆ ಪಾಲಿಕೆ ಒನ್ ಟೈಂ ಪೇಮೆಂಟ್ಗೆ ಅವಕಾಶ ಕೊಟ್ಟಿತ್ತು. ಆದರೆ ಸೆಟಲ್ ಆಗದಿರುವ ಕಾರಣ ಮಾಲ್ಗೆ ಬೀಗ ಜಡಿದಿತ್ತು. ಮತ್ತೊಮ್ಮೆ 2024ರಲ್ಲಿಯೂ ಇದೇ ತಪ್ಪು ಮಾಡಿದ್ದ ಮಂತ್ರಿ ಮಾಲ್, ಸುಮಾರು 50 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿತ್ತು.

























