ಬೆಂಗಳೂರು: ಸಂಯುಕ್ತ ಕರ್ನಾಟಕ ಪತ್ರಿಕೆಯ ದಿ. ವಿನಾಯಕ ದೇಶಪಾಂಡೆ, ಮಂಗಳೂರು ವರದಿಗಾರ ರಾಮಕೃಷ್ಣ, ಸಾಗರ ವರದಿಗಾರ ಮಹೇಶ್ ಹೆಗಡೆ ಮತ್ತು ಜಯರಾಮು ಅವರು ಪ್ರಸಕ್ತ ಸಾಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಸಂ.ಕ. ಪತ್ರಿಕೆಯಿಂದ 4 ಜನ ಪರ್ತಕರ್ತರು ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಕ್ರೀಡಾ ವರದಿಗಾಗಿ ವಿನಾಯಕ ದೇಶಪಾಂಡೆಗೆ ಕೆ.ಎ. ನೆಟ್ಟಕಲಪ್ಪ ಪ್ರಶಸ್ತಿ, ರೈತರ ಬದುಕು-ಬವಣೆ ಎಂಬ ವಿಶೇಷ ವರದಿಗಾಗಿ ಜಯರಾಮುಗೆ ತಗಡೂರು ಕಮಲಮ್ಮ ವೀರೇಗೌಡ ಪ್ರಶಸ್ತಿ, ಮಹೇಶ್ ಹೆಗಡೆಗೆ ಅಭಿಮಾನಿ ಪ್ರಕಾಶನ ಪ್ರಶಸ್ತಿ ಹಾಗೂ ರಾಮಕೃಷ್ಣ ಗರುಡನಗಿರಿ ನಾಗರಾಜ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಬಾರಿ ಒಟ್ಟು 29 ಜನರಿಗೆ ವಿವಿಧ ಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದ್ದು ಬೀದರ್‌ನಲ್ಲಿ ಏಪ್ರಿಲ್ 11 ಮತ್ತು 12 ರಂದು ನಡೆಯಲಿರುವ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.























