Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಹೊಸ ಮೈಲಿಗಲ್ಲು ಸೃಷ್ಟಿಸಿದ ಕರ್ನಾಟಕದ ಹೆಮ್ಮೆಯ KSDL

ಹೊಸ ಮೈಲಿಗಲ್ಲು ಸೃಷ್ಟಿಸಿದ ಕರ್ನಾಟಕದ ಹೆಮ್ಮೆಯ KSDL

0
85

2020ರಿಂದ 2025ರವರೆಗೆ ಹಂತ ಹಂತವಾಗಿ ದಾಖಲೆಗಳನ್ನು ಮುರಿದು ಮುನ್ನಡೆಯುತ್ತಿರುವ KSDL

ಬೆಂಗಳೂರು: ಕರ್ನಾಟಕದ ಹೆಮ್ಮೆಯ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಹೊಸ ವರ್ಷಕ್ಕೆ ಹೊಸ ಸಾಧನೆಯೊಂದಿಗೆ ಪ್ರಾರಂಭ ಮಾಡಿದ್ದು, ಜನವರಿ 2026ರಲ್ಲಿ ತನ್ನ ಇತಿಹಾಸದಲ್ಲೇ ಅತ್ಯಧಿಕ ಮಾಸಿಕ ಉತ್ಪಾದನೆ ದಾಖಲಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವರು, “ಈ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿ KSDL ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಜನವರಿ ತಿಂಗಳಲ್ಲಿ ಒಟ್ಟು 4,894.777 ಮೆಟ್ರಿಕ್ ಟನ್ ಮಾರ್ಜಕಗಳ ಉತ್ಪಾದನೆ ಮಾಡಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಸಿಗರೇಟ್ ವಿಚಾರಕ್ಕೆ ಅಂಗಡಿ ಮಾಲೀಕನ ಹತ್ಯೆ

ಉತ್ಪಾದನೆಯ ವಿವರಗಳನ್ನು ಹಂಚಿಕೊಂಡಿರುವ ಅವರು,
➡️ 3,798 ಮೆಟ್ರಿಕ್ ಟನ್ ಸಾಬೂನು,
➡️ 941 ಮೆಟ್ರಿಕ್ ಟನ್ ಡಿಟರ್ಜೆಂಟ್,
➡️ 155 ಮೆಟ್ರಿಕ್ ಟನ್ ಕಾಸ್ಮೆಟಿಕ್ಸ್ ಉತ್ಪಾದನೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

2020ರಿಂದ 2025ರವರೆಗೆ ಹಂತ ಹಂತವಾಗಿ ದಾಖಲೆಗಳನ್ನು ಮುರಿದು ಮುನ್ನಡೆಯುತ್ತಿರುವ KSDL, ಇದೀಗ ಹೊಸ ಶಿಖರವನ್ನು ತಲುಪಿದೆ. ಸರ್ಕಾರದ ಸುಧಾರಿತ ನೀತಿಗಳು, ಉತ್ತಮ ನಿರ್ವಹಣೆ, ಮಾರುಕಟ್ಟೆ ವಿಸ್ತರಣೆ, ಬ್ರ್ಯಾಂಡ್ ಬಲಪಡಿಕೆ, 3 ಶಿಫ್ಟ್‌ಗಳಲ್ಲಿ ನಿರಂತರ ಉತ್ಪಾದನೆ ಹಾಗೂ ಗುಣಮಟ್ಟ ಆಧಾರಿತ ಕಾರ್ಯವೈಖರಿ ಈ ಸಾಧನೆಗೆ ಪ್ರಮುಖ ಕಾರಣಗಳಾಗಿವೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ‘ಕ್ಷಮಿಸಿ ಅಪ್ಪ’ ಎಂದು ಬರೆದು – ಮೂವರು ಸಹೋದರಿಯರು ಆತ್ಮಹತ್ಯೆ

ವಿಶೇಷವಾಗಿ ಯಾವುದೇ ಹೊಸ ಯಂತ್ರೋಪಕರಣಗಳು ಅಥವಾ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡದೇ, ಈಗಿರುವ ಮೂಲಸೌಕರ್ಯದಲ್ಲೇ ಈ ಸಾಧನೆ ಮಾಡಿರುವುದು ಸಂಸ್ಥೆಯ ಕಾರ್ಯಕ್ಷಮತೆಯನ್ನು ತೋರಿಸುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ KSDL ಅನ್ನು ಮತ್ತಷ್ಟು ಬಲಪಡಿಸುವ ಗುರಿಯೊಂದಿಗೆ 2030ರೊಳಗೆ ವಾರ್ಷಿಕ ₹5,000 ಕೋಟಿ ಟರ್ನ್‌ಓವರ್ ಸಾಧಿಸುವ ಗುರಿ ಹೊಂದಲಾಗಿದೆ. ಈ ದಿಕ್ಕಿನಲ್ಲಿ ಸಂಸ್ಥೆ ಭರವಸೆಯ ಹೆಜ್ಜೆಗಳನ್ನು ಇಡುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.

ಇದನ್ನೂ ಓದಿ: ವಂಟಮೂರಿ ಮಹಿಳೆ ವಿವಸ್ತ್ರ ಪ್ರಕರಣ – ಅಪರಾಧಿಗಳಿಗೆ ಶಿಕ್ಷೆ ಪ್ರಕಟ

KSDL ಸಾಧನೆಯಿಂದ ರಾಜ್ಯದ ಕೈಗಾರಿಕಾ ವಲಯಕ್ಕೆ ಮತ್ತಷ್ಟು ಉತ್ತೇಜನ ದೊರೆತಿದ್ದು, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಕೈಗಾರಿಕಾ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Previous articleಮೂವರು ಸಹೋದರಿಯರ ಆತ್ಮಹತ್ಯೆ: ಡೆತ್‌ ನೋಟ್‌ನಲ್ಲಿದ್ದಿದ್ದೇನು?
Next articleಪಾಕಿಸ್ತಾನ ಹೋಲಿಕೆಗೆ ಕೋಪ, ಉಗ್ರ ದಾಳಿಗೆ ಮೌನ ಏಕೆ?