Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಪಾಕಿಸ್ತಾನ ಹೋಲಿಕೆಗೆ ಕೋಪ, ಉಗ್ರ ದಾಳಿಗೆ ಮೌನ ಏಕೆ?

ಪಾಕಿಸ್ತಾನ ಹೋಲಿಕೆಗೆ ಕೋಪ, ಉಗ್ರ ದಾಳಿಗೆ ಮೌನ ಏಕೆ?

0
66

ಸದನದಲ್ಲಿ ಕಾಂಗ್ರೆಸ್‌ಗೆ ಕಿಶೋರ್ ಕುಮಾರ್ ಪುತ್ತೂರು ತೀಕ್ಷ್ಣ ಪ್ರಶ್ನೆ

ಬೆಂಗಳೂರು: ವಿಧಾನ ಪರಿಷತ್ ಸಭೆಯಲ್ಲಿ ಪಾಕಿಸ್ತಾನ ವಿಚಾರವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ಟೀಕೆ ನಡೆಸಿದ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, “ಶಾಸಕ ಸಿ.ಟಿ. ರವಿ ಅವರು ಕಾಂಗ್ರೆಸ್ ಸದಸ್ಯರ ಹೇಳಿಕೆಯನ್ನು ಪಾಕಿಸ್ತಾನಕ್ಕೆ ಹೋಲಿಸಿದಾಗ ನಿಮಗೆ ಕೋಪ ಬರುತ್ತದೆ. ಆದರೆ ಪುಲ್ವಾಮಾ ಹಾಗೂ ಪಹಲ್ಗಾಮ್‌ನಲ್ಲಿ ನಮ್ಮ ಸೈನಿಕರ ಮೇಲೆ ಪಾಕ್ ಪ್ರೇರಿತ ಉಗ್ರರು ದಾಳಿ ನಡೆಸಿದಾಗ ನೀವು ಮೌನ ವಹಿಸುವುದು ಏಕೆ?” ಎಂದು ನೇರವಾಗಿ ಪ್ರಶ್ನಿಸಿದರು.

ವಿಬಿ ಜಿ – ರಾಮ್ ಜಿ ಯೋಜನೆ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಇಬ್ಬಂದಿ ನೀತಿಯನ್ನು ತರಾಟೆಗೆ ತೆಗೆದುಕೊಂಡರು. ದೇಶದ ಭದ್ರತೆ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ: ಹೊಸ ಮೈಲಿಗಲ್ಲು ಸೃಷ್ಟಿಸಿದ ಕರ್ನಾಟಕದ ಹೆಮ್ಮೆಯ KSDL

ಕಿಶೋರ್ ಕುಮಾರ್ ಅವರು ಮಾತನಾಡುತ್ತಿದ್ದ ವೇಳೆ ಕಾಂಗ್ರೆಸ್ ಸದಸ್ಯರಾದ ನಜ್ಹೀರ್ ಅಹಮದ್, ಬಿ.ಕೆ. ಹರಿಪ್ರಸಾದ್ ಹಾಗೂ ಸಚಿವ ಕೆ.ಜೆ. ಜಾರ್ಜ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅಡ್ಡಿಪಡಿಸಲು ಯತ್ನಿಸಿದರು. ಆದರೆ ಇದಕ್ಕೆ ಜಗ್ಗದ ಪುತ್ತೂರು ಅವರು ತಮ್ಮ ಮಾತು ಮುಂದುವರಿಸಿದರು.

“ಇಂದು ಪಾಕಿಸ್ತಾನದ ಯುವಕರೇ ‘ನಮಗೆ ನರೇಂದ್ರ ಮೋದಿಯಂತಹ ಪ್ರಧಾನಿ ಬೇಕು’ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ 140 ಕೋಟಿ ಭಾರತೀಯರ ಪ್ರತಿನಿಧಿಯಾಗಿರುವ ಪ್ರಧಾನಿಯನ್ನು ವಿರೋಧಿಸುವ ನಿಮ್ಮ ಮನಸ್ಥಿತಿ ಎಂತಹದ್ದು?” ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: ಬೆಳಗಾವಿ: ಸಿಗರೇಟ್ ವಿಚಾರಕ್ಕೆ ಅಂಗಡಿ ಮಾಲೀಕನ ಹತ್ಯೆ

ತಮ್ಮ ಗ್ರಾಮೀಣ ಪ್ರವಾಸದ ಅನುಭವವನ್ನು ಹಂಚಿಕೊಂಡ ಕಿಶೋರ್ ಕುಮಾರ್ ಅವರು, “ನಾನು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದವನು. ಇತ್ತೀಚೆಗೆ 378 ಪಂಚಾಯತ್‌ಗಳ ಪೈಕಿ 94 ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ, ಪ್ರತಿ ಪಂಚಾಯತ್‌ನಲ್ಲಿ ಮೂರು ಗಂಟೆಗಳ ಕಾಲ ಚರ್ಚೆ ನಡೆಸಿದ್ದೇನೆ. ಗ್ರಾಮಗಳ ವಾಸ್ತವ ಸ್ಥಿತಿಯನ್ನು ಅರಿತು ಬಂದಿದ್ದೇನೆ,” ಎಂದು ಹೇಳಿದರು.

ನರೇಗಾ ಯೋಜನೆಯಲ್ಲಿ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ವಿಬಿ ಜಿ – ರಾಮ್ ಜಿ’ ಸುಧಾರಣೆಗಳು ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ: ‘ಕ್ಷಮಿಸಿ ಅಪ್ಪ’ ಎಂದು ಬರೆದು – ಮೂವರು ಸಹೋದರಿಯರು ಆತ್ಮಹತ್ಯೆ

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಮೆಚ್ಚಿಕೊಂಡ ಪುತ್ತೂರು ಅವರು, “ಮೋದಿಯವರು ದೇಶಕ್ಕಾಗಿ ಇಡುವ ಪ್ರತಿ ಹೆಜ್ಜೆಯೂ 140 ಕೋಟಿ ಜನರ ಪ್ರಗತಿಗೆ ಸಹಕಾರಿಯಾಗಿದೆ. ಪಾಕಿಸ್ತಾನ ವಿಚಾರದಲ್ಲಿ ನೀವು ಇಂದು ತೋರಿಸುತ್ತಿರುವ ಸಿಟ್ಟು ಅಂದು ನಿಮ್ಮ ಪೂರ್ವಜರಿಗೆ ಇದ್ದಿದ್ದರೆ, ದೇಶ ಮೂರು ತುಂಡಾಗುತ್ತಿರಲಿಲ್ಲ,” ಎಂದು ಇತಿಹಾಸದ ಉದಾಹರಣೆ ನೀಡಿದರು.

ವಾಜಪೇಯಿ ಅವರು ಶಾಂತಿಗಾಗಿ ಲಾಹೋರ್‌ಗೆ ಬಸ್ ಯಾತ್ರೆ ನಡೆಸಿದ್ದರೂ ಪಾಕಿಸ್ತಾನ ಬೆನ್ನಿಗೆ ಚೂರಿ ಹಾಕಿದ ಘಟನೆ ಸ್ಮರಿಸಿದ ಅವರು, ವಿಕಸಿತ ಭಾರತ ಮತ್ತು ಅಖಂಡ ಭಾರತದ ನಿರ್ಮಾಣದಿಂದ ಮಾತ್ರ ದೇಶದ ಭದ್ರತೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ವಂಟಮೂರಿ ಮಹಿಳೆ ವಿವಸ್ತ್ರ ಪ್ರಕರಣ – ಅಪರಾಧಿಗಳಿಗೆ ಶಿಕ್ಷೆ ಪ್ರಕಟ

ಕಿಶೋರ್ ಕುಮಾರ್ ಪುತ್ತೂರು ಅವರ ಈ ಹೇಳಿಕೆಗಳು ಸದನದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ತೀವ್ರ ವಾಗ್ವಾದಕ್ಕೆ ದಾರಿ ಮಾಡಿಕೊಟ್ಟವು.

Previous articleಹೊಸ ಮೈಲಿಗಲ್ಲು ಸೃಷ್ಟಿಸಿದ ಕರ್ನಾಟಕದ ಹೆಮ್ಮೆಯ KSDL
Next articleಬೆಳಗಾವಿ: ಶೀಘ್ರದಲ್ಲೇ ಪ್ರಮುಖ ನಗರಗಳಿಗೆ ವಿಮಾನ ಸೇವೆ ಆರಂಭ