ಬೆಂಗಳೂರು: ಬ್ಯಾಂಕ್‌ನಲ್ಲಿ ಕೆಲಸ ಮಾಡಬೇಕೆಂದು ಕಾದು ಕುಳಿತಿರುವ ಅಭ್ಯರ್ಥಿಗಳಿಗೆ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೆನಲ್ ಸೆಲೆಕ್ಷನ್ (ಐಬಿಪಿಎಸ್) ಗುಡ್‌ನ್ಯೂಸ್ ನೀಡಿದೆ.
ದೇಶದ ವಿವಿಧ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಐಬಿಪಿಎಸ್ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ನ ಕ್ಲರ್ಕ್, ಗ್ರೂಪ್ ಎ ಆಫೀಸರ್ಸ್ ಸ್ಕೇಲ್ ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳು, ಖಾಲಿ ಸ್ಥಾನಗಳ ವಿವರ: ನೇಮಕಾತಿ ಪ್ರಕ್ರಿಯೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಹುದ್ದೆ ಹಾಗೂ ಖಾಲಿ ಸ್ಥಾನಗಳ ಸಂಖ್ಯೆ ಈ ಕೆಳಗಿನಂತಿವೆ.
ಕಚೇರಿ ಸಹಾಯಕ (ಆಫೀಸ್ ಅಸಿಸ್ಟೆಂಟ್ – OA): ಒಟ್ಟು 7,972 ಸ್ಥಾನಗಳು.
ಅಧಿಕಾರಿ ಸ್ಕೇಲ್-I (ಪ್ರೊಬೇಷನರಿ ಆಫೀಸರ್ – PO): ಒಟ್ಟು 3,907 ಸ್ಥಾನಗಳು.
ಅಧಿಕಾರಿ ಸ್ಕೇಲ್-II (ಜನರಲ್ ಬ್ಯಾಂಕಿಂಗ್ ಆಫೀಸರ್ – GBO): ಒಟ್ಟು 854 ಸ್ಥಾನಗಳು.
ಕೃಷಿ ಅಧಿಕಾರಿ (AO): 50 ಸ್ಥಾನಗಳು
ಕಾನೂನು ಅಧಿಕಾರಿ: 48 ಸ್ಥಾನಗಳು
ಚಾರ್ಟರ್ಡ್ ಅಕೌಂಟೆಂಟ್ (CA): 69 ಸ್ಥಾನಗಳು
ಐಟಿ ಅಧಿಕಾರಿ: 87 ಸ್ಥಾನಗಳು
ಮಾರ್ಕೆಟಿಂಗ್ ಅಧಿಕಾರಿ: 15 ಸ್ಥಾನಗಳು
ಖಜಾನೆ ವ್ಯವಸ್ಥಾಪಕ: 16 ಸ್ಥಾನಗಳು
ಅಧಿಕಾರಿ ಸ್ಕೇಲ್-III (ಸೀನಿಯರ್ ಮ್ಯಾನೇಜರ್): 199 ಸ್ಥಾನಗಳು.
ಭಾರತದ ಮೂರನೇ ಅತಿ ದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಒಟ್ಟು 1,425 ಹುದ್ದೆಗಳ ಭರ್ತಿ ನಡೆಯಲಿದೆ. ಇದರ ವಿವರ ಕೆಳಗಿನಂತಿದೆ.
ಆಫೀಸ್ ಅಸಿಸ್ಟೆಂಟ್ (ಕ್ಲರ್ಕ್)- 800
ಸಹಾಯಕ ವ್ಯವಸ್ಥಾಪಕ (ಆಫೀಸರ್ ಸ್ಕೇಲ್- 1) – 500
ವ್ಯವಸ್ಥಾಪಕ (ಆಫೀಸರ್ ಸ್ಕೇಲ್- 2)- 125
ವಿದ್ಯಾರ್ಹತೆ: ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
ವಯೋಮಿತಿ: ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಆದರೆ, ವಿವಿಧ ಹುದ್ದೆಗಳಿಗೆ ನಿರ್ದಿಷ್ಟ ಶೈಕ್ಷಣಿಕ ಅರ್ಹತೆಗಳಿವೆ.
ಕಚೇರಿ ಸಹಾಯಕ: 18 ರಿಂದ 28 ವರ್ಷ
ಅಧಿಕಾರಿ ಸ್ಕೇಲ್-I: 18 ರಿಂದ 30 ವರ್ಷ
ಅಧಿಕಾರಿ ಸ್ಕೇಲ್-II: 21 ರಿಂದ 32 ವರ್ಷ
ಅಧಿಕಾರಿ ಸ್ಕೇಲ್-III: 21 ರಿಂದ 40 ವರ್ಷ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ವಿಧಾನ: ಮೂರು ಹಂತಗಳಲ್ಲಿ ಆಯ್ಕೆ ವಿಧಾನ ನಡೆಯಲಿದೆ. ಮೊದಲಿಗೆ ಪ್ರಿಲಿಮಿನರಿ ಪರೀಕ್ಷೆ, ಬಳಿಕ ಮುಖ್ಯ ಪರೀಕ್ಷೆ ಕೊನೆಗೆ ಸಂದರ್ಶನ ಮೂಲಕ ಆಯ್ಕೆ ನಡೆಯಲಿದೆ.
ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಐಬಿಪಿಎಸ್ ಅಧಿಕೃತ ಜಾಲತಾಣ ibps.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಸೆಪ್ಟೆಂಬರ್ 1ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸೆಪ್ಟೆಂಬರ್ 21 ಕೊನೆಯ ದಿನವಾಗಿದೆ.
ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 175 ರೂ. ಅರ್ಜಿ ಶುಲ್ಕ ಹಾಗೂ ಇತರೆ ಅಭ್ಯರ್ಥಿಗಳಿಗೆ 850 ರೂ. ಅರ್ಜಿ ಶುಲ್ಕವಿದೆ.