Home ನಮ್ಮ ಜಿಲ್ಲೆ ಬೆಂಗಳೂರು ವಿವಸ್ತ್ರ ಪ್ರಕರಣ: ಹು-ಧಾ ಪೊಲೀಸ್ ಕಮಿಷನರ್ ವರ್ಗಾವಣೆ ಮಾಡಲಿ

ವಿವಸ್ತ್ರ ಪ್ರಕರಣ: ಹು-ಧಾ ಪೊಲೀಸ್ ಕಮಿಷನರ್ ವರ್ಗಾವಣೆ ಮಾಡಲಿ

0
1

ಬೆಂಗಳೂರು: ಹುಬ್ಬಳ್ಳಿಯಲ್ಲಿ ಒಬ್ಬ ದಲಿತ ಮಹಿಳೆಯ ವಿವಸ್ತ್ರ ಗೊಳಿಸಿರುವ ಪ್ರಕರಣ ಅತ್ಯಂತ ಕ್ರೂರ ಅಮಾನುಷವಾದ ಘಟನೆ ಹುಬ್ಬಳ್ಳಿ ಪೊಲೀಸ್ ಕಮಿಷನರ್ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ಲಂಗು ಲಗಾಮು ಇಲ್ಲದೆ ಪೊಲೀಸ್ ಇಲಾಖೆ ನಡೆಯುತ್ತಿದೆ. ಕೂಡಲೆ ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮಿಷನರ ಅವರನ್ನು ವರ್ಗಾವಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಒಬ್ಬ ದಲಿತ ಮಹಿಳೆಯ ವಿವಸ್ತ್ರಗೊಳಿಸಿರುವ ಪ್ರಕರಣ ಅತ್ಯಂತ ಕ್ರೂರ ಅಮಾನುಷವಾದ ಘಟನೆ ಅದು ಪೊಲೀಸ್ ಇಲಾಖೆಯಿಂದ ನಡೆದಿರುವುದು ಈ ರಾಜ್ಯದಲ್ಲಿ ಗೃಹ ಇಲಾಖೆ ಸಂಪೂರ್ಣ ಹಿಡಿತ ಕಳೆದುಕೊಂಡಿದೆ ಗೃಹ ಇಲಾಖೆ ಹದಗೆಟ್ಟಿದೆ ಯಾರು ರಕ್ಷಕರಿದ್ದಾರೆ ಅವರು ಭಕ್ಷಕರಾಗಿದ್ದಾರೆ. ಬೆಲಿಯೇ ಎದ್ದು ಹೊಲ ಮೇಯ್ದಿದೆ ಒಬ್ಬ ಮಹಿಳೆಗೆ ರಕ್ಷಣೆ ಬದಲಿಗೆ ವಿವಸ್ತ್ರಗೊಳಿಸುವ ಕೆಲಸ ಮಾಡಿದ್ದವರು ಸಮಾಜದಲ್ಲಿ ತಲೆ ಎತ್ತಲು ನಾಲಾಯಕ್ ಇದ್ದಾರೆ‌. ಘಟನೆ ಹೊರ ಬಂದ ನಂತರ ಕಮಿಷನರ್ ಪ್ರಕರಣ ಮುಚ್ಚಿ ಹಾಕುವ ಕೆಲಸ ಮಾಡಿದರು. ಕಾಂಗ್ರೆಸ್ ಕಾರ್ಪೊರೇಟ್‌ರ ದೂರಿನ ಹಿನ್ನಲೆಯಲ್ಲಿ ಅರೆಸ್ಟ್ ಮಾಡಿದ್ದಾರೆ‌. ಏನಾದರೂ ಸಮಸ್ಯೆಯಾಗಿದ್ದತೆ ಬಿಎಲ್‌ಒ ಕಂಪ್ಲೆಂಟ್ ಮಾಡಬೇಕಿತ್ತು. ಕಾಂಗ್ರೆಸ್ ಪಕ್ಷದ ಅಣತಿಯಂತೆ ಕಾನೂನು ಬಾಹಿರ ಬಂಧನ ನಡೆದಿದೆ. ಕಮಿಷನರ್ ಮುಚ್ಚಿ ಹಾಕಲು ಪ್ರಯತ್ನಿಸಿರುವುದು ಕ್ರಿಮಿನಲ್ ಅಪರಾಧ, ಕಮಿಷನರ್ ತನ್ನನ್ನು ತಾನು ಬಹಳ ಬುದ್ಧಿವಂತ ಅಂದುಕೊಂಡಿದ್ದಾನೆ. ತಾವು ಏನು ಬೇಕಾದರು ಮಾಡಿದರೂ ನಡೆಯುತ್ತೆ ಅಂತ ಅಂದುಕೊಂಡಿದ್ದಾರೆ‌. ಇವರಿಗೆ ಯಾರ ಬೆಂಬಲ ಇದೆ. ಈ ಪ್ರಕರಣದಲ್ಲಿ ಇನ್ಸಪೆಕ್ಟರ್ ವರ್ಗಾವಣೆ ಆಗಿದೆ. ಆದರೆ, ನೆರವಾಗಿ ಭಾಗಿಯಾಗಿರುವ ಕಾನ್ಸ್‌ಟೇಬಲ್ ಮೇಲೆ ಯಾವುದೇ ಕ್ರಮ ಇಲ್ಲ‌. ಒಂದೆಡೆ ಆಗಿರುವ ಘಟನೆ ಸತ್ಯ ಎಂದು ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ಪ್ರಕರಣದಲ್ಲಿ ಭಾಗಿಯಾದವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಬಳ್ಳಾರಿಯಲ್ಲಿ ಘಟನೆ ನಡೆದ ತಕ್ಷಣ ಎಸ್ಪಿ ಅಮಾನತು ಮಾಡಿದ್ದಾರೆ. ಆದರೆ, ಹುಬ್ಬಳ್ಳಿ ಪ್ರಕರಣದಲ್ಲಿ ಸರ್ಕಾರ ಹಿರಿಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿದಿನ ಒಂದೊಂದು ಪ್ರಕರಣ ನಡೆಯುತ್ತಿದೆ. ಲಂಗು ಲಗಾಮು ಇಲ್ಲದೆ ಪೊಲೀಸ್ ಇಲಾಖೆ ನಡೆಯುತ್ತಿದೆ. ಕೂಡಲೆ ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮಿಷನರ ಅವರನ್ನು ವರ್ಗಾವಣೆ ಮಾಡಬೇಕು. ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ದುಡ್ಡು ಕೊಟ್ಟವರ ರಕ್ಷಣೆ ಮಾಡುತ್ತಾರೆ. ಈ ಸರ್ಕಾರದಲ್ಲಿ ದ್ವಿಮುಖ ನೀತಿ ನಡೆಯುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರ ಅಣತಿಯಂತೆ ಪೊಲಿಸರು ನಡೆಯುತ್ತಿದ್ದಾರೆ ಎಂದು ಆರೋಪಿಸಿದರು.