ಕಚೇರಿಯಲ್ಲಿಯೇ ಡಿಜಿಪಿ ರಾಸಲೀಲೆ: ವಿಡಿಯೋ ವೈರಲ್

0
4

ಬೆಂಗಳೂರು: ಪೊಲೀಸ್‌ ಉನ್ನತ ಅಧಿಕಾರಿಯೊಬ್ಬರ ರಾಸಲೀಲೆ ಸಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕದ ಡಿಜಿಪಿ ದರ್ಜೆಯ ಐಪಿಎಸ್ ಅಧಿಕಾರಿ ಡಾ. ರಾಮಚಂದ್ರರಾವ್ ಅವರ ತಮ್ಮ ಕಚೇರಿಯಲ್ಲೇ ಸಮವಸ್ತ್ರ ಧರಿಸಿ ಮಹಿಳೆಯರೊಂದಿಗೆ ಸರಸವಾಡಿರುವ ವಿಡಿಯೊಗಳು ಹರಿದಾಡುತ್ತಿವೆ.

ಕಚೇರಿಯಲ್ಲಿ ಕರ್ತವ್ಯದ ಸಮಯದಲ್ಲೇ ಹಲವು ಮಹಿಳೆಯರೊಂದಿಗೆ ರಾಮಚಂದ್ರರಾವ್‌ ರಾಸಲೀಲೆ ನಡೆಸುತ್ತಿರುವುದು ಸೀಕ್ರೆಟ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.

ಕೆಲಸದ ನಿಮಿತ್ತ ಕಚೇರಿಗೆ ಬರುವ ಮಹಿಳೆಯರ ಜತೆಗೆ ಅಧಿಕಾರಿ ರಾಮಚಂದ್ರರಾವ್ ಸರಸವಾಡುತ್ತಿದ್ದರು ಎನ್ನಲಾಗುತ್ತಿದೆ. ಅವರ ಕಾಮಕಾಂಡದ ವಿಡಿಯೋಗಳು ಸದ್ಯ ಹೊರಬಂದಿವೆ.

ಈ ಹಿಂದೆ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನವಾಗಿರುವ ನಟಿ ರನ್ಯಾ ರಾವ್‌ ಅವರ ಮಲ ತಂದೆಯಾಗಿರುವ ಡಿಜಿಪಿ ರಾಮಚಂದ್ರರಾವ್ ಅವರಿಗೆ ಪುತ್ರಿಯ ಕೇಸ್‌ನಲ್ಲಿ ಸಂಕಷ್ಟ ಎದುರಾಗಿತ್ತು.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಆಗಿರುವ ಡಾ. ರಾಮಚಂದ್ರರಾವ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.

Previous articleಮೈಸೂರು: RFO ಕಾಂತರಾಜ್ ಚೌಹಾನ್ ಅನುಮಾನಾಸ್ಪದ ಸಾವು