ನಗರದಲ್ಲಿ ಸೈಬರ್ ವಂಚನೆ ಜಾಲವು ಮತ್ತೆ ಬಲೆ ಬೀಸಿದೆ. ಪೂರ್ವ ಬೆಂಗಳೂರಿನ 57 ವರ್ಷದ ಗೃಹಿಣಿಯೊಬ್ಬರು ಡೀಪ್‌ಫೇಕ್ ವಿಡಿಯೋ ಬಲೆಗೆ ಬಿದ್ದು 43.4 ಲಕ್ಷ ರೂ. ಕಳೆದುಕೊಂಡಿದ್ದಾರೆ. ವಂಚನೆಗೆ ಒಳಗಾದ ಫರೀದಾ ಅವರು ಆಗಸ್ಟ್‌ನಲ್ಲಿ ಇನ್ಸಾನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿಡಿಯೋ ವೀಕ್ಷಿಸಿದ್ದಾರೆ.
ಈ ವಿಡಿಯೋದಲ್ಲಿ, ಸಚಿವರು ಒಂದು ನಿರ್ದಿಷ್ಟ ಕಂಪನಿಯೊಂದಿಗೆ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್‌ನಲ್ಲಿ ತೊಡಗಿಸಿಕೊಂಡರೆ ಉತ್ತಮ ಲಾಭಗಳಿಸಬಹುದು ಎಂದು ಶಿಫಾರಸು ಮಾಡಿದ್ದರು. ಆ ವಿಡಿಯೋ ನೋಡಿದ ಗೃಹಿಣಿ ವಿಡಿಯೋ ಕೆಳಗಿದ್ದ ಲಿಂಕ್ ಕ್ಲಿಕ್ ಮಾಡಿ ತಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿದ್ದಾರೆ.
ಆ.4ರಂದು, ಆರವ್ ಗುಪ್ತಾ ಎಂದು ಪರಿಚಯಿಸಿಕೊಂಡ ವ್ಯಕ್ತಿಯಿಂದ ಫರೀದಾ ಅವರಿಗೆ ಸಂದೇಶ ಬಂದಿದೆ. ಈತ ತಾನು ಟ್ರೇಡಿಂಗ್ ಸಂಸ್ಥೆಯ ಕಾರ್ಯನಿರ್ವಾಹಕ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಅವರನ್ನು ಆಸ್ಥಾ ಟ್ರೇಡ್ 238 ಎಂಬ 100ಕ್ಕೂ ಹೆಚ್ಚು ಸದಸ್ಯರಿರುವ ವಾಟ್ಸಾಪ್ ಗುಂಪಿಗೆ ಸೇರಿಸಿದ್ದಾನೆ.
ಆರವ್ ಗುಪ್ತಾ ಮೀನಾ ಜೋಷಿ ಎಂಬ ಕಸ್ಟಮರ್ ಸರ್ವೀಸ್ ಏಜೆಂಟ್‌ನ ನಂಬರ್ (9257521301) ಹಂಚಿಕೊಂಡಿದ್ದಾನೆ. ಈ ಮೀನಾ ಜೋಷಿ ಟ್ರೇಡಿಂಗ್ ಬಗ್ಗೆ ಫರೀದಾ ಅವರಿಗೆ ತರಬೇತಿ ನೀಡಿದ್ದಾಳೆ. ಸೆ.18 ರಂದು, ಆಕೆಗೆ ACSTRADE ಎಂಬ ಅಪ್ಲಿಕೇಶನ್ ಡೌನ್ ಲೋಡ್ ಮಾಡಲು ಲಿಂಕ್ ಕಳುಹಿಸಿದ್ದಾಳೆ. ಫರೀದಾ ತಮ್ಮ ಬ್ಯಾಂಕ್ ಖಾತೆಯನ್ನು ಆ್ಯಪ್‌ಗೆ ಜೋಡಿಸಿ, ವಂಚಕರು ನೀಡಿದ ಸಂಖ್ಯೆಗೆ 5,000 ರೂ. ವರ್ಗಾಯಿಸಿದ್ದಾರೆ.
ಗುಂಪಿನಲ್ಲಿದ್ದ ಸದಸ್ಯರು ಆಗಾಗ ತಾವು ಗಳಿಸಿದ ಲಾಭದ ಸ್ತ್ರೀನ್ ಶಾಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಮೀನಾ ಮಾರ್ಗದರ್ಶನದ ಮೇರೆಗೆ ಫರೀದಾ ಅವರು ಷೇರುಗಳನ್ನು ಖರೀದಿಸಲು ಪ್ರಾರಂಭಿಸಿದರು. ಆರಂಭದಲ್ಲಿ ಐಪಿಒ ಸಬ್‌ಸ್ಕ್ರಿಪ್ಪನ್‌ಗಳಲ್ಲಿ ತೊಡಗಿಸಿಕೊಂಡ ಅವರಿಗೆ 1 ಲಕ್ಷ ರೂ. ಹೂಡಿಕೆಯ ಮೇಲೆ 2 ಲಕ್ಷ ರೂ.ಲಾಭ ತೋರಿಸಿತ್ತು.
ಆದರೆ, ಅವರು ಐಪಿಒ ಅನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸಿದಾಗ ಅದು ಸಾಧ್ಯವಾಗಲಿಲ್ಲ. ಮೀನಾ ಮಾರ್ಗದರ್ಶನದಲ್ಲಿ ಸೆಟ್ಟಿಂಗ್‌ಗಳಲ್ಲಿ ಅದನ್ನು ಆಫ್ ಮಾಡಿದ ನಂತರ, ಅವರು ಮತ್ತೊಂದು ಐಪಿಒಗೆ ಹಸ್ತಚಾಲಿತವಾಗಿ ಸೇರ್ಪಡೆಗೊಂಡರು. ಈ ಐಪಿಒಗೆ 23 ಲಕ್ಷ ರೂ. ಅವಶ್ಯಕತೆ ಇತ್ತು. ಹಣ ಎಂದು ಪರಿಚಯಿಸಿಕೊಂಡಿದ್ದಾನೆ.
ಬಳಿಕ ಅವರನ್ನು ಆಸ್ಥಾ ಟ್ರೇಡ್ 238 ಎಂಬ 100ಕ್ಕೂ ಹೆಚ್ಚು ಸದಸ್ಯರಿರುವ ವಾಟ್ಸಾಪ್ ಗುಂಪಿಗೆ ಸೇರಿಸಿದ್ದಾನೆ. ಆರವ್ ಗುಪ್ತಾ ಮೀನಾ ಜೋಷಿ ಎಂಬ ಕಸ್ಟಮರ್ ಸರ್ವೀಸ್ ಏಜೆಂಟ್‌ನ ನಂಬರ್ (9257521301) ಹಂಚಿಕೊಂಡಿದ್ದಾನೆ. ಈ ಮೀನಾ ಜೋಷಿ ಟ್ರೇಡಿಂಗ್ ಬಗ್ಗೆ ಫರೀದಾ ಅವರಿಗೆ ತರಬೇತಿ ನೀಡಿದ್ದಾಳೆ. ಸೆ.18 ರಂದು, ಆಕೆಗೆ ACSTRADE ಎಂಬ ಅಪ್ಲಿಕೇಶನ್ ಡೌನ್ ಲೋಡ್ ಮಾಡಲು ಲಿಂಕ್ ಕಳುಹಿಸಿದ್ದಾಳೆ.
ಫರೀದಾ ತಮ್ಮ ಬ್ಯಾಂಕ್ ಖಾತೆಯನ್ನು ಆ್ಯಪ್‌ಗೆ ಜೋಡಿಸಿ, ವಂಚಕರು ನೀಡಿದ ಸಂಖ್ಯೆಗೆ 5,000 ರೂ. ವರ್ಗಾಯಿಸಿದ್ದಾರೆ. ಈ ಐಪಿಒಗೆ 23 ಲಕ್ಷ ರೂ. ಅವಶ್ಯಕತೆ ಇತ್ತು. ಹಣ ಕಡಿಮೆಯಾದಾಗ, ಏಜೆಂಟ್ ಆಕೆಗೆ ಸಾಲವನ್ನು ವ್ಯವಸ್ಥೆಗೊಳಿಸಿದ್ದಾನೆ. ಅಲ್ಲಿಂದ ಮುಂದೆ ವಂಚನೆ ಸ್ಪಷ್ಟವಾಗಲು ಶುರುವಾಯಿತು.
ಫರೀದಾ ಅವರು ತಮ್ಮ ಲಾಭದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ಸಾಲ ಇರುವುದರಿಂದ ಹಣ ಹಿಂಪಡೆಯಲು ಸಾಧ್ಯವಿಲ್ಲ ಎಂದು ತೋಸಿಸಿದೆ. ಈ ಹಂತದಲ್ಲಿ, ಫರೀದಾ ಅವರು ಬ್ಯಾಂಕ್ ಮತ್ತು ಚಿನ್ನಕಾಸು ಸಂಸ್ಥೆಯಲ್ಲಿ ತಮ್ಮ ಚಿನ್ನದ ಆಭರಣಗಳನ್ನು ಅಡವಿಟ್ಟು, ವಂಚಕರಿಗೆ ಹಣವನ್ನು ವರ್ಗಾಯಿಸಿದ್ದಾರೆ.
ಸೆ.24ರಿಂದ ಅ.27ರ ಅವಧಿಯಲ್ಲಿ ಅವರು 13 ವಹಿವಾಟುಗಳನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಮಾಡಿದ್ದಾರೆ. ನ. 1ರಂದು ಬ್ಯಾಂಕ್‌ನಿಂದ ಕರೆ ಬಂದಾಗ ವಂಚನೆಯ ಅರಿವಾಗಿದೆ. ಅನುಮಾನಾಸ್ಪದ ಚಟುವಟಿಕೆಯಿಂದಾಗಿ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ಈ ಕುರಿತು ಪೂರ್ವ ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಬಿಎನ್ಎಸ್ ಸೆಕ್ಷನ್ 318 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
























