ಬೆಂಗಳೂರು ನಗರಕ್ಕೆ ಮತ್ತೊಂದು ಡಬಲ್ ಡೆಕ್ಕರ್ ಫ್ಲೈ ಓವರ್

0
42

ಬೆಂಗಳೂರು ನಗರಕ್ಕೆ ಮತ್ತೊಂದು ಡಬಲ್ ಡೆಕ್ಕರ್ ಫ್ಲೈ ಓವರ್ ಬರಲಿದೆ. ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ರ ಜೆ.ಪಿ ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ (ಓಆರ್‌ಆರ್ ಪಶ್ಚಿಮ) ಹಾಗೂ ಹೊಸಹಳ್ಳಿಯಿಂದ ಮಾಗಡಿ ರಸ್ತೆ ಮಾರ್ಗವಾಗಿ ಕಡಬಗೆರೆವರೆಗೆ ಎರಡು ಕಾರಿಡಾರ್‌ಗಳಲ್ಲಿ 37.121 ಕಿ.ಮೀ.ಗಳ ಉದ್ದದ ಡಬಲ್ ಡೆಕ್ಕರ್ ನಿರ್ಮಾಣದಲ್ಲಿ ಮೆಟ್ರೋ ವಯಾಡಕ್ಟ್ ಜೊತೆಗೆ ಎಲಿವೇಟೆಡ್ ರಸ್ತೆಯನ್ನು 9,700 ಕೋಟಿ ರೂ. ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಹೆಚ್.ಕೆ.ಪಾಟೀಲ್‌ ಸುದ್ದಿಗಾರರಿಗೆ ಸಂಪುಟ ಸಭೆಯ ತೀರ್ಮಾನಗಳ ವಿವರಗಳನ್ನು ನೀಡಿದರು. ಬೆಂಗಳೂರು ನಗರದಲ್ಲಿ ಟ್ರಾಫಿಕ್ ದಟ್ಟಣೆ ನಿವಾರಿಸಲು ಸಾಧ್ಯವಾದಷ್ಟು ಮೆಟ್ರೋ ವಯಾಡಕ್ಟ್ ಜೊತೆ ಜೊತೆಗೆ ಡಬಲ್ ಡೆಕ್ಕರ್ ರಚನೆಯನ್ನು ನಿರ್ಮಿಸುವ ಮೂಲಕ ಎಲಿವೇಟೆಡ್ ರಸ್ತೆ ಮತ್ತು ಮೆಟ್ರೋ ಎರಡನ್ನೂ ಒಂದೇ ರೈಟ್-ಆಫ್-ವೇನಲ್ಲಿ ಲೂಪ್ಸ್, ರಾಂಪ್ಸ್ ಹಾಗೂ ನಿಲ್ದಾಣಗಳಿಗೆ ಹೆಚ್ಚುವರಿ ಭೂಸ್ವಾಧೀನದೊಂದಿಗೆ ಡಬಲ್ ಡೆಕ್ಕರ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಡಬಲ್ ಡೆಕ್ಕರ್ ಮಾಹಿತಿ

  • ಹಂತ-3ರಲ್ಲಿ ಬಿಎಂಆರ್‌ಸಿಎಲ್‌ 2 ಕಾರಿಡಾರ್‌ಗಳಲ್ಲಿ 34.121 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮಾದರಿಯಲ್ಲಿ ಮೆಟ್ರೋ ವಯಾಡಕ್ಟ್ ಜೊತೆಗೆ ಎಲಿವೇಟೆಡ್ ನಾಲ್ಕು ಪಥದ ರಸ್ತೆ.
  • ಜೆ.ಪಿ.ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ ಹೊರವರ್ತುಲ ರಸ್ತೆ (ಓ.ಆರ್.ಆರ್) ಪಶ್ಚಿಮ ಮಾರ್ಗದವರೆಗೆ 28.486 ಕಿ.ಮೀ.
  • ಹೊಸಹಳ್ಳಿ ಮಾರ್ಗದಿಂದ ಮಾಗಡಿ ರಸ್ತೆ ಮಾರ್ಗವಾಗಿ ಕಡಬಗೆರೆವರೆಗೆ 8.635 ಕಿ.ಮೀ.ಗಳು ನಿರ್ಮಾಣ

ನಗರಾಭಿವೃದ್ಧಿ ಇಲಾಖೆ ಸಚಿವ ಸಂಪುಟ ಸಭೆಗೆ ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ರ ಜೆ.ಪಿ.ನಗರ 4ನೇ ಹಂತದಿಂದ ಹೆಬ್ಬಾಳ ತನಕ (ಓಆರ್‌ಆರ್ ಪಶ್ಚಿಮ) ಹಾಗೂ ಹೊಸಹಳ್ಳಿಯಿಂದ ಮಾಗಡಿ ರಸ್ತೆ ಮಾರ್ಗವಾಗಿ ಕಡಬಗೆರೆ ತನಕ ಎರಡು ಕಾರಿಡಾರ್‌ಗಳಲ್ಲಿ 37.121 ಕಿ.ಮೀ.ಉದ್ದದ ಡಬಲ್ ಡೆಕ್ಕರ್ ನಿರ್ಮಾಣದಲ್ಲಿ ಮೆಟ್ರೋ ವಯಾಡಕ್ಟ್ ಜೊತೆಗೆ ಎಲಿವೇಟೆಡ್ ರಸ್ತೆಯನ್ನು 9700 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಅನುಮೋದನೆ ನೀಡುವ ಕುರಿತು ಎಂದು ಪ್ರಸ್ತಾವನೆ ಸಲ್ಲಿಸಿತ್ತು.

ಬೆಂಗಳೂರು ನಗರದಲ್ಲಿ ಟ್ರಾಫಿಕ್ ದಟ್ಟಣೆ ನಿವಾರಿಸಲು ಸಾಧ್ಯವಾದಷ್ಟು ಮೆಟ್ರೋ ವಯಾಡಕ್ಟ್ ಜೊತೆ ಜೊತೆಗೆ ಡಬಲ್ ಡೆಕ್ಕರ್ ರಚನೆಯನ್ನು ನಿರ್ಮಿಸುವ ಮೂಲಕ ಎಲಿವೇಟೆಡ್ ರಸ್ತೆ ಮತ್ತು ಮೆಟ್ರೋ ಎರಡನ್ನೂ ಒಂದೇ ರೈಟ್-ಆಫ್-ವೇ ನಲ್ಲಿ ಹೆಚ್ಚುವರಿ ಭೂಸ್ವಾಧೀನದೊಂದಿಗೆ ಡಬಲ್ ಡೆಕ್ಕರ್ ಅನ್ನು ನಿರ್ಮಿಸಬಹುದಾಗಿದ್ದು, ಇದು ಅತ್ಯಂತ ಪ್ರಯೋಜನಕಾರಿ ಯಾಗಿರುತ್ತದೆ.

ಕಾರಿಡಾರ್-1ರ ಹೊರ ವರ್ತುಲ ರಸ್ತೆಯಲ್ಲಿನ ಉದ್ದೇಶಿತ ಜೊತೆಗೆ ಎಲಿವೇಟೆಡ್ ರಸ್ತೆಯು ನಗರದ ವಿಮಾನ ನಿಲ್ದಾಣ, ನಗರದ ದಕ್ಷಿಣ ಹಾಗೂ ಪಶ್ಚಿಮ ಭಾಗ ಮತ್ತು ಇನ್ನಿತರ ಭಾಗಗಳಿಗೆ ನೇರ ಮತ್ತು ವೇಗದ ಸಂಪರ್ಕವನ್ನು ಒದಗಿಸುತ್ತದೆ.

ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ರಲ್ಲಿ ಬಿಎಂಆರ್‌ಸಿಎಲ್‌ನಿಂದ ಎರಡು ಕಾರಿಡಾರ್‌ಗಳಲ್ಲಿ 34.121 ಕಿ.ಮೀ. ಉದ್ದದ ಡೆಕ್ಕರ್ ಮಾದರಿಯಲ್ಲಿ ಮೆಟ್ರೋ ವಯಾಡಕ್ಟ್ ಜೊತೆಗೆ ಎಲಿವೇಟೆಡ್ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.

  • ಜೆ.ಪಿ. ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ ಹೊರವರ್ತುಲ ರಸ್ತೆ (ಓಆರ್‌ಆರ್) ಪಶ್ಚಿಮ ಮಾರ್ಗದವರೆಗೆ – 28 ಕಿ.ಮೀ ಗಳು.
  • ಹೊಸಹಳ್ಳಿಯಿಂದ ಮಾಗಡಿ ರಸ್ತೆ ಮಾರ್ಗವಾಗಿ ಕಡಬಗೆರೆವರೆಗೆ 8 ಕಿ.ಮೀ.ಗಳು.

ಡಬಲ್ ಡೆಕ್ಕರ್ ಯೋಜನೆಯ ಎತ್ತರಿಸಿದ ರಸ್ತೆಯ ನಿರ್ಮಾಣದ ಅಂದಾಜು ವೆಚ್ಚ ಭೂಸ್ವಾಧೀನ ವೆಚ್ಚ, ಸಾಮಾನ್ಯ ಶುಲ್ಕಗಳು, ವಿನ್ಯಾಸ ಶುಲ್ಕಗಳು ಮತ್ತು ಆಕಸ್ಮಿಕ ವೆಚ್ಚಗಳು ಸೇರಿದಂತೆ ಲೂಪ್‌ಗಳು ಮತ್ತು ಇಳಿಜಾರುಗಳು ಸೇರಿದಂತೆ 9700 ಕೋಟಿಗಳಾಗಿರುತ್ತದೆ. ಯೋಜನೆಯ ವೆಚ್ಚಗಳನ್ನು ರಾಜ್ಯ ಸರ್ಕಾರವು 2025-26ನೇ ಸಾಲಿನ ಬಜೆಟ್‌ನಲ್ಲಿ ಒದಗಿಸಲಾದ ರೂ. 4000 ಕೋಟಿಗಳ ಬಜೆಟ್ ಅನುದಾನದ ಮೂಲಕ ಯೋಜನೆಯ ಸಂಪೂರ್ಣ ವೆಚ್ಚವನ್ನು ಭರಿಸುತ್ತದೆ ಮತ್ತು ಭವಿಷ್ಯದಲ್ಲಿ ಇದೇ ರೀತಿಯ ಅನುದಾನಗಳನ್ನು ನಿರೀಕ್ಷಿಸಲಾಗುತ್ತದೆ.

Previous articleಏಳುಮಲೆ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಲು ಬರುತ್ತಿದ್ದಾರೆ ‘ಮಹಾನಟಿ’
Next articleನೇಪಾಳ: ಫೇಸ್ಬುಕ್‌, ಯೂಟ್ಯೂಬ್‌ ಸೇರಿದಂತೆ 26 ಸೋಷಿಯಲ್ ಮೀಡಿಯಾಗಳಿಗೆ ನಿಷೇಧ

LEAVE A REPLY

Please enter your comment!
Please enter your name here