ಅಧಿಕಾರವನ್ನು ಕಾಂಗ್ರೆಸ್ ಸರ್ಕಾರ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ

0
3

ಬಳ್ಳಾರಿ: ಜನರು ಕೊಟ್ಟ ಅಧಿಕಾರವನ್ನು ಕಾಂಗ್ರೆಸ್ ಸರ್ಕಾರ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ಈ ಸರ್ಕಾರದಿಂದ ಜನತೆಗೆ ಅಪಮಾನ ಆಗುತ್ತಿದೆ. ಹೀಗಾಗಿ ಎಷ್ಟು ಬೇಗ ಈ ಸರ್ಕಾರ ಹೋಗುತ್ತದೋ ಆಗ ಜನರಿಗೆ ಒಳಿತಾಗುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಒಬ್ಬರು ಕುರ್ಚಿ ಉಳಿಸಿಕೊಳ್ಳಲು ಹಾಗೂ ಇನ್ನೊಬ್ಬರು ಕಿತ್ತುಕೊಳ್ಳಲು ಯತ್ನಿಸುತ್ತಿದ್ದಾರೆ. ದಿನನಿತ್ಯ ರಾಜ್ಯದಲ್ಲಿ ಈ ಸರ್ಕಾರದಿಂದ ಜನತೆಗೆ ಅಪಮಾನ ಆಗುತ್ತಿದೆ. ಹೀಗಾಗಿ ಎಷ್ಟು ಬೇಗ ಈ ಸರ್ಕಾರ ಹೋಗುತ್ತದೋ ಆಗ ಜನರಿಗೆ ಒಳಿತಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಗಣರಾಜ್ಯೋತ್ಸವ: ಕಾಫಿನಾಡಿನ ಯುವ ವಿಜ್ಞಾನಿಗೆ ರಾಷ್ಟ್ರಪತಿ ಆಹ್ವಾನ

ಅಧಿಕಾರಕ್ಕಾಗಿ ದೆಹಲಿಯಲ್ಲಿ ಸರದಿಯಂತೆ ಓಡಾಡುತ್ತಿದ್ದಾರೆ. ಆದರೆ ದೆಹಲಿಯಲ್ಲಿ ಕಾಂಗ್ರೆಸ್‌ ಹೈಕಮಾಂಡೇ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಅಸ್ತಿತ್ವದಲ್ಲಿದೆಯೋ ಇಲ್ಲವೊ ಕೂಡ ಗೊತ್ತಿಲ್ಲ. ಕಳೆದ ಆರು ತಿಂಗಳಿಂದ ಇದು ನಡೆಯುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಒಂದು ಮಾತೂ ಹೇಳುತ್ತಿಲ್ಲ. ಅವರನ್ನು ಕಾಂಗ್ರೆಸ್ ಹೈಕಮಾಂಡ್ ಕರಿಯುತ್ತೇವೆ ಎನ್ನುವುದರಲ್ಲೇ ಇದೆ. ಇದೇನು ಅವರ ಸ್ವಂತ ಆಸ್ತಿನಾ ಎಂದು ಪ್ರಶ್ನಿಸಿದರು.

ರಾಜ್ಯ ಕಾಂಗ್ರೆಸ್ ನಾಯಕರು ಸುಖಾಸುಮ್ಮನೆ ದೆಹಲಿಗೆ ಹೋಗಿ ಅವರ ಮನೆ ಬಾಗಿಲು ಕಾಯುವ ಕೆಲಸವಾಗುತ್ತದೆ. ನಮ್ಮ ಜನರು ಕೊಟ್ಟ ಅಧಿಕಾರಕ್ಕೆ ಅಪಮಾನ ಮಾಡುತ್ತಿದ್ದಾರೆ. ಇಡೀ ರಾಜ್ಯದ ಜನರಿಗೆ ಈ ಸರ್ಕಾರ ಅಪಮಾನ ಮಾಡುತ್ತಿದೆ. ಹೀಗಾಗಿ ಈ ಸರ್ಕಾರದ ವಿರುದ್ಧ ಬಿಜೆಪಿಯಿಂದ ರಾಜ್ಯದಲ್ಲಿ ಆರೇಳು ಸಮಾವೇಶ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಎರಡೂವರೆ ವರ್ಷದಿಂದ ಅರಾಜಕತೆ ಹಾಗೂ ಕಾನೂನು ಸುವ್ಯವಸ್ಥೆ ಸರಿಯಿಲ್ಲ, ಅಭಿವೃದ್ಧಿ ಇಲ್ಲ ಹಾಗೂ ಭ್ರಷ್ಟಾಚಾರ ತುಂಬಿರುವ ಪರಿಣಾಮ ಕಾನೂನು ಸುವ್ಯವಸ್ಥೆ ಬಗ್ಗೆ ಬಳ್ಳಾರಿಯಿಂದ ಹೋರಾಟ ಶುರು ಮಾಡಿದ್ದೇವೆ ಎಂದು ಹೇಳಿದರು.

Previous articleಗಣರಾಜ್ಯೋತ್ಸವ: ಕಾಫಿನಾಡಿನ ಯುವ ವಿಜ್ಞಾನಿಗೆ ರಾಷ್ಟ್ರಪತಿ ಆಹ್ವಾನ