ಬಳ್ಳಾರಿ: ಕೆ-ಸೆಟ್ (K-SET) ಪರೀಕ್ಷೆ ಹಿನ್ನೆಲೆ ಬಳ್ಳಾರಿಯಲ್ಲಿ ನಡೆದ ಒಂದು ಘಟನೆ ವಿದ್ಯಾರ್ಥಿಗಳಲ್ಲಿ ಅಸಮಾಧಾನ ಮೂಡಿಸಿದೆ. ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸುವ ಮೊದಲು ಪರೀಕ್ಷಾ ಸಿಬ್ಬಂದಿಗಳು ಕಿವಿಯೋಲೆ, ಮೂಗುತಿ, ಕೈಕಡಗ, ಹಾಗೂ ಮೈಮೇಲೆ ಹಾಕಿಕೊಂಡಿದ್ದ ದೇವರ ದಾರವನ್ನೂ ಬಿಚ್ಚಿಸಲು ಸೂಚನೆ ನೀಡಿದರು.
ಪರೀಕ್ಷಾರ್ಥಿಗಳ ಪ್ರಕಾರ, ಕೆಲವರು ಧಾರ್ಮಿಕ ನಂಬಿಕೆಯ ಭಾಗವಾಗಿ ಧರಿಸಿದ್ದ ಅಲಂಕಾರಗಳನ್ನು ತೆಗೆಸಲು ಹಠ ಮಾಡಿರುವುದರಿಂದ ಅಸಮಾಧಾನ ವ್ಯಕ್ತವಾಯಿತು. ಆದರೆ ಪರೀಕ್ಷೆ ಬರೆಯಬೇಕೆಂಬ ಒತ್ತಡದಿಂದ ಅನಿವಾರ್ಯವಾಗಿ ಅವರು ಸೂಚನೆ ಪಾಲಿಸಿದರು.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರ ಆದೇಶದಂತೆ, ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿ ಸುತ್ತಮುತ್ತ ಪ್ರದೇಶವನ್ನು ನಿರ್ಬಂಧಿತ ವಲಯವಾಗಿ ಘೋಷಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ರೀತಿಯ ಜೆರಾಕ್ಸ್ ಸೆಂಟರ್ ಅಥವಾ ಇಂಟರ್ನೆಟ್ ಸೆಂಟರ್ ಕಾರ್ಯನಿರ್ವಹಣೆಗೆ ಅನುಮತಿ ನೀಡಲಾಗಿಲ್ಲ.
ಬಳ್ಳಾರಿಯಲ್ಲಿ ಒಟ್ಟು 20 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಕೆ-ಸೆಟ್ ಪರೀಕ್ಷೆ ನಡೆಯಿತು. ಪರೀಕ್ಷಾ ಕೇಂದ್ರಗಳಲ್ಲಿ ನಿಗಾವ್ಯವಸ್ಥೆ ಹೆಚ್ಚಿಸಿ ನಕಲು ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
