ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಆಂಧ್ರದ ದೇವರಗಟ್ಟ ಗ್ರಾಮದಲ್ಲಿ ದೇವರಿಗಾಗಿ ನಡೆದ ಬಡಿದಾಟದಲ್ಲಿ ಇಬ್ಬರು ಭಕ್ತರು ಸಾವನಪ್ಪಿದ್ದು, ನೂರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ಸಿರುಗುಪ್ಪ ತಾಲೂಕಿನ ಗಡಿಭಾಗದಲ್ಲಿರುವ ದೇವರಗಟ್ಟದಲ್ಲಿ ಪ್ರತಿ ವರ್ಷ ದಸರಾ ಬನ್ನಿ ಉತ್ಸವದ ವೇಳೆ ಹೀಗೆ ಕೋಲು, ಬಡಿಗೆಗಳಿಂದ ಹೊಡೆದಾಡಿಕೊಳ್ಳಲಾಗುತ್ತದೆ. ಕರ್ನೂಲ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಈ ಹಳ್ಳಿಯಲ್ಲಿ ಹೀಗೆ ವಿಶಿಷ್ಟ ಆಚರಣೆ ನಡೆಯುತ್ತಿದೆ.
ಇಲ್ಲಿ ರಕ್ತ ಇಲ್ಲದೇ ಹಬ್ಬ ಆಚರಣೆಯೇ ಇಲ್ಲ. ಈ ಬಾರಿಯೂ ಉತ್ಸವದಲ್ಲಿ ರಕ್ತ ಹರಿದಿದೆ. ಇಬ್ಬರ ಸಾವೂ ಸಂಭವಿಸಿದ್ದು ಯಾವುದೇ ಕೇಸ್ ಕೂಡ ಇಲ್ಲಿ ದಾಖಲಾಗಿಲ್ಲ. ಧಾರ್ಮಿಕ ಆಚರಣೆಯಾಗಿದ್ದರಿಂದ ಮೊದಲಿನಿಂದಲೂ ಇಲ್ಲಿ ಬಡಿದಾಟದಲ್ಲಿ ಏನೇ ಸಂಭವಿಸಿದರೂ ಕೇಸ್ ದಾಖಲಾಗುವುದಿಲ್ಲ.